ಗೋಕಾಕ:ಸರ್ಕಾರ ಗುಣಮಟ್ಟದ ಶಿಕ್ಷಣದೊಂದಿಗೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಿ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸುತ್ತಿದೆ
ಸರ್ಕಾರ ಗುಣಮಟ್ಟದ ಶಿಕ್ಷಣದೊಂದಿಗೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಿ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸುತ್ತಿದೆ
ನಮ್ಮ ಬೆಳಗಾವಿ ಸುದ್ದಿ, ಗೋಕಾಕ ಸೆ, 12 ;-
ಸರ್ಕಾರ ಗುಣಮಟ್ಟದ ಶಿಕ್ಷಣದೊಂದಿಗೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಿ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸುತ್ತಿದೆ ಎಂದು ನಗರಸಭೆ ಸದಸ್ಯ ಎಸ್.ಎ.ಕೋತವಾಲ ಹೇಳಿದರು.
ಗುರುವಾರದಂದು ನಗರದ ಸರ್ಕಾರಿ ಹೊಸ ಮಾದ್ಯಮಿಕ (ಜಿಎನ್.ಎಸ್) ಶಾಲೆಯ ಆವರಣದಲ್ಲಿ 8ನೇ ತರಗತಿಯ ವಿಧ್ಯಾರ್ಥಿ/ವಿದ್ಯಾಥಿನಿಯರಿಗೆ ಸರ್ಕಾರದಿಂದ ನೀಡಲಾದ ಸೈಕಲ್‍ಗಳನ್ನು ವಿತರಿಸಿ ಅವರು ಮಾತನಾಡುತ್ತ, ವಿದ್ಯಾರ್ಥಿಗಳು ಈ ಸರ್ಕಾರದ ಸೌಲಭ್ಯಗಳ ಸದುಪಯೋಗದಿಂದ ಪ್ರತಿಭಾನ್ವಿತರಾಗಿ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳುವಂತೆ ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಕಾಳಮ್ಮನಗುಡಿ, ಜ್ಯೋತಿಬಾ ಸುಭಂಜಿ, ಬಸವರಾಜ ದೇಶನೂರ, ಶಾಲೆಯ ಮುಖ್ಯೋಪಾಧ್ಯಾಯರಾದ ಗಿ.ಆರ್.ಮಳಗಿ, ಶಿಕ್ಷಕರಾದ ಎಸ್.ವಿ.ಜೋಲಾಪೂರ, ಬಿ.ಎಸ್.ಕುಲಕರ್ಣಿ, ಜೆ.ಎ..ಶೆಟ್ಟರ ಇದ್ದರು.