ಮೂಡಲಗಿ:ಪ್ರೋತ್ಸಾಹ ನೀಡಿದಾಗ ಮಾತ್ರ ಮಕ್ಕಳಲ್ಲಿ ಅಡಗಿರುವ ಸೂಪ್ತ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯ
ಪ್ರೋತ್ಸಾಹ ನೀಡಿದಾಗ ಮಾತ್ರ ಮಕ್ಕಳಲ್ಲಿ ಅಡಗಿರುವ ಸೂಪ್ತ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯ
ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಸೆ 12 :
ಪ್ರತಿಯೊಬ್ಬರಲ್ಲಿಯೋ ಪ್ರತಿಭೆ ಇರುತ್ತದೆ, ಪಾಲಕರು ಪೋಷಕರು ಶಿಕ್ಷಕರು ಗುರುತಿಸಿ ಪ್ರೋತ್ಸಾಹ ನೀಡಿದಾಗ ಮಾತ್ರ ಮಕ್ಕಳಲ್ಲಿ ಅಡಗಿರುವ ಸೂಪ್ತ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯ ಎಂದು ಮೂಡಲಗಿ ಸಿದ್ಧ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಹೇಳಿದರು.
ಅವರು ಗುರುವಾರ ಪಟ್ಟಣದ ಕೆ.ಎಚ್ ಸೋನವಾಲಕರ ಸರಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿಭೆ ಎನ್ನುವದು ಯಾರ ಸ್ವತ್ತಲ್ಲ, ಅದು ಪ್ರತಿಯೊಬ್ಬರಲ್ಲಿರುತ್ತದೆ. ಪ್ರತಿಭೆಗೆ ಸೂಕ್ತ ಮಾರ್ಗಧರ್ಶನ ಸಿಕ್ಕಾಗ ವಿನೂತನವಾಗಿ ಅಭಿವ್ಯಕ್ತಿಗೊಳಿಸಲು ಸಾದ್ಯವಾಗುವದು. ಅತೀ ಹೆಚ್ಚು ಸಮಯ ಪಾಠಗಳ ಕಡೆ ಗಮನ ಹರಿಸದೆ ಮಗುವಿನ ವ್ಯಕ್ತಿತ್ವ ವಿಕಸದ ದೃಷ್ಠಿಯಿಂದ ಕ್ರೀಡೆಯ ಜೊತೆಯಲ್ಲಿ ಮನೊರಂನೆಯ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಉತ್ತಮ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರ್ತಿಸಿ ಮುಂದಿನ ಹಂತಕ್ಕೆ ಆಯ್ಕೆಮಾಡಿದಾಗ ಮಾತ್ರ ವಲಯದ ಮಕ್ಕಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಿಂಚಲು ಸಾಧ್ಯವಾಗುವದು ಎಂದು ಹೇಳಿದರು.
ಹಳ್ಳೂರ ಜಿಪಂ ಸದಸ್ಯೆ ವಾಸಂತಿ ತೇರದಾಳ ಮಾತನಾಡಿ, ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮಕ್ಕಳು ಮೊಬೈಲ ಗೀಳಿಗೆ ಸಿಲುಕಿ ಸಮಯದ ಜೊತೆಯಲ್ಲಿ ಅಮೂಲ್ಯ ದೇಹವನ್ನು ಕಳೇದುಕೊಳ್ಳುತ್ತಿದ್ದಾರೆ. ಮಕ್ಕಳಿಗೆ ನಾವಿಣ್ಯಪೂರ್ಣ ಸಹಪಠ್ಯ ಚಟುವಟಿಕೆಗಳಿಗೆ ಆದ್ಯತೆ ನೀಡಿದಾಗ ಮಾತ್ರ ಮಕ್ಕಳ ಸರ್ವಾಂಗೀಣ ಅಭಿವೃದ್ದಿ ಹೊಂದುತ್ತಾರೆಂದು ಹೇಳಿದರು.
ಪಿಕೆಪಿಎಸ್ ಅಧ್ಯಕ್ಷ ಬಸವಂತ ಕಮತಿ ಮಾತನಾಡಿ, ಅಪ್ಪಟ ಗ್ರಾಮೀಣ ಸೋಗಡಿನಿಂದ ಕೂಡಿರುವ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವು ಬಾಲ್ಯದ ನೆನಪುಗಳು ಮರುಕಳಿಸುವಂತಾಯಿತು. ಸದೃಢ ಶರೀರದ ಜೊತೆ ಸದೃಢ ಮನಸ್ಸು ತಮ್ಮದಾಗಿಸಿಕೊಳ್ಳಿ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಎಸ್.ಎ ನಾಡಗೌಡರ, ಎಸ್.ಎಮ್.ಲೋಕನ್ನವರ ಲೋಕನ್ನವರ ಮಾತನಾಡಿದರು.
ವಿದ್ಯಾರ್ಥಿಗಳಿಗೆ ವರ್ಷಪೂರ್ತಿ ಕನ್ನಡ ಪ್ರಭ ಯುವ ಆವೃತ್ತಿಯನ್ನು ಉಚಿತವಾಗಿ ವಿತರಿಸುವ ಸಮರ್ಥ ಇಂಡಸ್ಟ್ರೀಜ್ ಮಾಲಿಕ ಮಲ್ಲಿಕಾರ್ಜುನ ಬಳಿಗಾರ ಅವರನ್ನು ಸತ್ಕರಿಸಿದರು.
ಕಾರ್ಯಕ್ರಮದಲ್ಲಿ ಭೂದಾನಿ ಪುರಸಭೆ ಸದಸ್ಯ ಸಂತೋಷ ಸೋನವಾಲಕರ, ಎಸ್.ಡಿ.ಎಮ್.ಸಿಯ ಚಂದ್ರಯ್ಯ ಹಿರೇಮಠ, ಅಲ್ತಾಫ್ ಹವಾಲ್ದಾರ, ಪ್ರೌಢ ಶಾಲಾ ಶಿಕ್ಷಕರ ಹಾಗೂ ಸಹಕಾರ ಪತ್ತಿನ ಸಂಘಗಳ ಅಧ್ಯಕ್ಷ ಸುಭಾಸ ಭಾಗೋಜಿ, ಎಸ್ ಎ ನ್ಯಾಮಗೌಡರ, ಪಿ.ಬಿ ಮದಬಾವಿ, ರಮೇಶ ಬುದ್ನಿ, ಪ್ರಾಥಮಿಕ ಶಿಕ್ಷಕ ಸಂಘದ ಅಧ್ಯಕ್ಷ ಬಿ.ಆರ್ ತರಕಾರ, ಕಾರ್ಯದರ್ಶಿ ಎಲ್ ಎಮ್ ಬಡಕಲ, ಸರಕಾರಿ ನೌಕರ ಸಂಘದ ಆರ್.ಎಮ್ ಮಹಾಲಿಂಗಪೂರ, ಕೆ.ಆರ್ ಅಜ್ಜಪ್ಪನವರ, ಶಿಕ್ಷಣ ಸಂಯೋಜಕ ಟಿ ಕರಿಬಸವರಾಜು, ಸಿಆರ್‍ಪಿ ಆರ್.ಕೆ ಪಾಟೀಲ ಹಾಗೂ ವಲಯ ವ್ಯಾಪ್ತಿಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.