ಘಟಪ್ರಭಾ:ನ್ಯಾಯದೀಶರಾಗಿ ಆಯ್ಕೆಯಾದ ಬಡಿಗವಾಡ ಗ್ರಾಮದ ನಿವಾಸಿ ಸುರೇಶ ಮಲ್ಲಪ್ಪ ವಗ್ಗನವರ ಅವರಿಗೆ ಸನ್ಮಾನ
ನ್ಯಾಯದೀಶರಾಗಿ ಆಯ್ಕೆಯಾದ ಬಡಿಗವಾಡ ಗ್ರಾಮದ ನಿವಾಸಿ ಸುರೇಶ ಮಲ್ಲಪ್ಪ ವಗ್ಗನವರ ಅವರಿಗೆ ಸನ್ಮಾನ
ನಮ್ಮ ಬೆಳಗಾವಿ ಸುದ್ದಿ, ಘಟಪ್ರಭಾ ಸೆ 13 :
ನೂತನವಾಗಿ ನ್ಯಾಯದೀಶರಾಗಿ ಆಯ್ಕೆಯಾದ ಬಡಿಗವಾಡ ಗ್ರಾಮದ ನಿವಾಸಿ ಸುರೇಶ ಮಲ್ಲಪ್ಪ ವಗ್ಗನವರ ಅವರನ್ನು ಸ್ಥಳೀಯ ಗ್ರಾಮ ಪಂಚಾಯತ ಹಾಗೂ ಕರ್ನಾಟಕ ಯುವ ಸೇನೆ ಸಂಘಟನೆಯಿಂದ ಗ್ರಾಮದ ಲಕ್ಷ್ಮೀ ದೇವಸ್ಥಾನದಲ್ಲಿ ಶುಕ್ರವಾರದಂದು ಸತ್ಕರಿಸಲಾಯಿತು.
ಸತ್ಕಾರ ಸ್ವೀಕರಿಸಿ ಮಾತನಾಡಿದ ನ್ಯಾಯಾದೀಶ ಸುರೇಶ ವಗ್ಗನವರ ಅವರು, ಗ್ರಾಮೀಣ ಪ್ರಧೇಶದಲ್ಲಿ ಹುಟ್ಟಿ ಬೆಳೆದರು ಸಹ ಸತತ ಪ್ರಯತ್ನ ಮತ್ತು ಪರಿಶ್ರಮದಿಂದ ಸಾಧನೆ ಮಾಡಲು ಸಾಧ್ಯ. ಮುಂದಿನ ದಿನಗಳಲ್ಲಿ ನ್ಯಾಯಾದೀಶನಾಗಿ ಪ್ರಮಾಣಿಕವಾಗಿ ಸೇವೆ ಮಾಡುವ ಮೂಲಕ ಹುಟ್ಟಿ ಬೆಳೆದ ಬಡಿಗವಾಡ ಗ್ರಾಮದ ಗೌರವವನ್ನು ಹೆಚ್ಚಿಸುವ ಕಾರ್ಯ ಮಾಡುತ್ತೇನೆಂದು ಹೇಳಿದರು.
ಕರ್ನಾಟಕ ಯುವ ಸೇನೆ ರಾಜ್ಯ ಉಪಾಧ್ಯಕ್ಷ ಕೆಂಪಣ್ಣ ಚೌಕಶಿ ಮಾತನಾಡಿ, ನ್ಯಾಯಾದೀಶರಾಗಿ ಆಯ್ಕೆಯಾದ ಸುರೇಶ ವಗ್ಗನವರ ಅವರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದ್ದಾರೆ. ನಿರಂತರ ಪ್ರಯತ್ನದಿಂದ ಯಾವುದೇ ಹುದ್ದೆಗೇರಲು ಸಾಧ್ಯ ಎಂಬುದನ್ನು ಅವರು ತೋರಿಸಿದ್ದಾರೆ. ಅವರು ಮುಂದೆ ಕೂಡಾ ಉನ್ನತ ಹುದ್ದೇಗೆ ಏರಲೆಂದು ಹಾರೈಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ರಾಮಚಂದ್ರ ಕಮತಿ, ತಾ.ಪಂ ಸದಸ್ಯ ಬಸವರಾಜ ಸನದಿ, ಹಿರಿಯರಾದ ಮಾಳಪ್ಪಾ ಜಾಗನೂರ, ಶಂಕರ ಕಮತಿ, ಸಿದ್ದಪ್ಪ ಚೂಡಪ್ಪಗೋ, ಶಿವು ಕುಡ್ಡೆಮಿ, ಮಲ್ಲಪ್ಪ ಕೌಜಲಗಿ, ಗಣಪತಿ ಹೊಣಕುಪ್ಪಿ, ಯಲ್ಲಾಲಿಂಗ ಚೌಕಶಿ, ನಾಮದೇವ ಸಂಪಗಾರ, ಕಾಡಪ್ಪ ವಗ್ಗನಗರ, ಕರ್ನಾಟಕ ಯುವ ಸೇನೆ ಜಿಲ್ಲಾಧ್ಯಕ್ಷ ಈರಣ್ಣಾ ಸಂಗಮನವರ, ಸುರೇಶ ಚಿಗಡೋಳ್ಳಿ, ಅಜೀತ ಕೊಂಗನೋಳಿ, ಮಲ್ಲಪ್ಪಾ ಸಂಪಗಾರ, ರಾಜು ಉಪ್ಪಾರ, ರಮೇಶ ಕಮತಿ ಸೇರಿದಂತೆ ಅಭಿವೃದ್ಧಿ ಅಧಿಕಾರಿ, ಗ್ರಾ.ಪಂ ಸದಸ್ಯರು, ಪಿ.ಕೆ.ಪಿ.ಎಸ್ ಸದಸ್ಯರು ಸೇರಿದಂತೆ ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿರಿದ್ದರು.