ಗೋಕಾಕ:ಗೋಕಾಕ ಫಾಲ್ಸ್ ದನದ ಓಣಿ ವಿದ್ಯುತ್ ವಿವಾದದ ಪ್ರತಿಭಟನೆಗೆ ಹಾಗೂ ಬಿಜೆಪಿ ಪಕ್ಷಕ್ಕೆ ಯಾವುದೇ ರೀತಿಯ ಸಂಭಂದವಿಲ್ಲ : ಶಶಿಧರ ದೇಮಶೆಟ್ಟಿ
ಗೋಕಾಕ ಫಾಲ್ಸ್ ದನದ ಓಣಿ ವಿದ್ಯುತ್ ವಿವಾದದ ಪ್ರತಿಭಟನೆಗೆ ಹಾಗೂ ಬಿಜೆಪಿ ಪಕ್ಷಕ್ಕೆ ಯಾವುದೇ ರೀತಿಯ ಸಂಭಂದವಿಲ್ಲ : ಶಶಿಧರ ದೇಮಶೆಟ್ಟಿ
ನಮ್ಮ ಬೆಳಗಾವಿ ಸುದ್ದಿ, ಗೋಕಾಕ ಸೆ 16 :
ಗೋಕಾಕ ಫಾಲ್ಸ್ ದನದ ಓಣಿ ವಿದ್ಯುತ್ ವಿವಾದಕ್ಕೆ ಸಂಭಂಧಿಸಿದಂತೆ ಪ್ರತಿಭಟನೆಗೆ ಹಾಗೂ ಬಿಜೆಪಿ ಪಕ್ಷಕ್ಕೆ ಯಾವುದೇ ರೀತಿಯ ಸಂಭಂದವಿಲ್ಲ. ಕೆಲವು ಮಾಧ್ಯಮಗಳಲ್ಲಿ ಬಿಜೆಪಿ ಪಕ್ಷದಿಂದ ಪ್ರತಿಭಟನೆ ನಡೆದಿದೆ ಎಂದು ಸುದ್ದಿ ಭಿತ್ತರಿಸಲಾಗಿದೆ ಇದು ಶುದ್ಧ ಸುಳ್ಳು ಎಂದು ಬಿಜೆಪಿ ನಗರ ಘಟಕ ಅಧ್ಯಕ್ಷ ಶಶಿಧರ ದೇಮಶೆಟ್ಟಿ ಹೇಳಿದರು.
ಅವರು, ಸೋಮವಾರದಂದು ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಬಿಜೆಪಿ ಪಕ್ಷದಿಂದ ಪ್ರತಿಭಟನೆ ಜರುಗಿಲ್ಲ. ಅಲ್ಲದೇ ಅಶೋಕ ಪೂಜಾರಿಯವರ ವಯಕ್ತಿಕವಾಗಿ ಹೋರಾಟ ಮಾಡುತ್ತಿರಬಹುದು. ಗೋಕಾಕ ಫಾಲ್ಸ್ ದನದ ಓಣಿ ನೊಂದ ನಿವಾಸಿಗಳಿಗೆ ನ್ಯಾಯ ಸಿಗಲಿ. ಆದರೆ ಈ ಪ್ರತಿಭಟನೆಯಲ್ಲಿ ಬಿಜೆಪಿ ಪಕ್ಷದ ಯಾವ ಪದಾಧಿಕಾರಿಗಳು ಭಾಗವಹಿಸಿಲ್ಲ ಎಂದು ಸ್ಪಷ್ಟಣೆ ನೀಡಿದ್ದಾರೆ.
ಅಶೋಕ ಪೂಜಾರಿಯವರು ದನದ ಓಣಿ ವಿದ್ಯುತ್ ವಿವಾದದ ಪ್ರತಿಭಟನೆಯ ಕುರಿತು ಬಿಜೆಪಿ ನಗರ ಪದಾಧಿಕಾರಿಗಳ ಗಮನಕ್ಕೂ ತಂದಿಲ್ಲ ಎಂದು ನಗರಾಧ್ಯಕ್ಷ ಶಶಿಧರ ದೇಮಶೆಟ್ಟಿ ಕಿಡಿಕಾರಿದ್ದಾರೆ.