ಮೂಡಲಗಿ:ಜಲ ಜಾಗೃತಿ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಅಮೂಲ್ಯವಾಗಿದ್ದು : ಸೋನವಾಲಕರ
ಜಲ ಜಾಗೃತಿ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಅಮೂಲ್ಯವಾಗಿದ್ದು : ಸೋನವಾಲಕರ
ನಮ್ಮ ಬೆಳಗಾವಿ ಸುದ್ದಿ, ಮೂಡಲಗಿ ಸೆ 17 :
ಜಲ ಜಾಗೃತಿ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಅಮೂಲ್ಯವಾಗಿದ್ದು, ಮಳೆ ನೀರಿನ ಕೊಯ್ಲಿನ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಅವಶ್ಯವಿದೆ’ ಎಂದು ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲಕರ ಹೇಳಿದರು.
ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿಯ ಉನ್ನತ ಶಿಕ್ಷಣ ಸಚಿವಾಲಯದ ನಿರ್ದೇಶನದಂತೆ ಇಲ್ಲಿಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಮತ್ತು ದೈಹಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ‘ರಾಷ್ಟ್ರೀಯ ಜಲಶಕ್ತಿ ಆಭಿಯಾನ’ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
ಪ್ರಭಾರಿ ಪ್ರಾಚಾರ್ಯ ಪ್ರೊ. ಸಂಗಮೇಶ ಗುಜಗೊಂಡ ಮಾತನಾಡಿ ‘ನೀರು ರಾಷ್ಟ್ರೀಯ ಸಂಪನ್ಮೂಲವಾಗಿದ್ದು, ಅದರ ಬಗ್ಗೆ ತೀವ್ರ ಕಾಳಜಿ ಇಂದಿನ ಅಗತ್ಯವಾಗಿದೆ. ನೀರು ಜೀವದ್ರವ ಎನ್ನುವ ಮಹತ್ವದ ಬಗ್ಗೆ ಅರಿವು ಬೇಕು ಎಂದರು.
ಮಹಾವಿದ್ಯಾಲಯದ ಆವರಣದಲ್ಲಿ ಇಂಗುಗುಂಡಿಗೆಗೆ ಜಲಪೂರಣ ಮಾಡುವ ಮೂಲಕ ನೀರಿನ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿದರು.
ಅಂತರ್ಜಲ ಹೆಚ್ಚಿಸಿ ಮಣ್ಣಿನ ಸಾರ ರಕ್ಷಿಸಿ, ನೀರು ಎಂದರೆ ಜೀವಜಲ, ನೀರಿನ ಮಿತ ಬಳಕೆಯಾಗಲಿ ಇತ್ಯಾದಿ ಘೋಷಣೆಗಳ ಫಲಕಗಳನ್ನು ಪ್ರದರ್ಶಿಸುತ್ತಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ಮಾಡಿದರು.
ಪ್ರೊ. ಎಸ್.ಜಿ. ನಾಯ್ಕ್, ಪ್ರೊ. ಎ.ಪಿ. ರಡ್ಡಿ, ಪ್ರೊ. ಎಸ್.ಬಿ. ಖೋತ, ಪ್ರೊ. ಎಸ್.ಎ. ಶಾಸ್ತ್ರೀಮಠ, ಎನ್‍ಎಸ್‍ಎಸ್ ಯೋಜನಾಧಿಕಾರಿ ಪ್ರೊ. ಎಸ್.ಸಿ. ಮಂಟೂರ, ಡಾ. ಎಸ್.ಎಲ್.ಚಿತ್ರಗಾರ, ಡಾ. ಬಿ.ಸಿ. ಪಾಟೀಲ, ಪ್ರೊ. ಜಿ.ವಿ. ನಾಗರಾಜ್, ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಕೆ. ಕಂಕಣವಾಡಿ, ಯಲ್ಲಪ್ಪ ಗದಾಡಿ, ವೇದಾ ದೇಶಪಾಂಡೆ, ಎಲ್.ಬಿ. ಮನ್ನಾಪುರ, ಬಿ.ಕೆ. ಬಡಗನ್ನವರ, ಬಿ.ಎಸ್. ಕುಂಬಾರ, ಶಿವಾಜಿ ಮಾಲೋಜಿ ಇದ್ದರು.