ಗೋಕಾಕ:ಮೋಟಾರ ವಾಹನ ಕಾಯ್ದೆ 1988ನೇ ದಕ್ಕೆ ತಿದ್ದುಪಡಿ ಮಾಡಿದ್ದನ್ನು ಹಿಂಪಡೆಯುವಂತೆ ಒತ್ತಾಯಿಸಿ ಮನವಿ
ಮೋಟಾರ ವಾಹನ ಕಾಯ್ದೆ 1988ನೇ ದಕ್ಕೆ ತಿದ್ದುಪಡಿ ಮಾಡಿದ್ದನ್ನು ಹಿಂಪಡೆಯುವಂತೆ ಒತ್ತಾಯಿಸಿ ಮನವಿ
ನಮ್ಮ ಬೆಳಗಾವಿ ಸುದ್ದಿ, ಗೋಕಾಕ ಸೆ 19:
ಮೋಟಾರ ವಾಹನ ಕಾಯ್ದೆ 1988ನೇ ದಕ್ಕೆ ತಿದ್ದುಪಡಿ ಮಾಡಿದ್ದನ್ನು ಹಿಂಪಡೆಯುವಂತೆ ಒತ್ತಾಯಿಸಿ ಇಲ್ಲಿಯ ನ್ಯಾಯವಾದಿಗಳ ಸಂಘದವರು ತಹಶೀಲದಾರ ಮುಖಾಂತರ ಪ್ರಧಾನಿ ಮಂತ್ರಿ ಹಾಗೂ ಮುಖ್ಯಮಂತ್ರಿಯವರಿಗೆ ಗುರುವಾರದಂದು ಮನವಿ ಸಲ್ಲಿಸಿದರು.
ಮನವಿಯಲ್ಲಿ ಮೋಟಾರ ವಾಹನ ಕಾಯ್ದೆ 1988ನೇದನ್ನು ತಿದ್ದುಪಡಿ ಮಾಡಿ ವಾಹನ ಚಾಲಕರ ಚಾಲನಾ ಪರವಾಣಿಗೆ ಪತ್ರ, ಇನ್ಸುರೆನ್ಸ್ ಪಾಲಸಿ ಹಾಗೂ ವಾಹನದ ಹೊಗೆ ಪತ್ರ ಮತ್ತು ಇನ್ನಿತರ ವಿಷಯಗಳಲ್ಲಿ ಅತಿಯಾದ ದಂಡ ಹಾಗೂ ಶುಲ್ಕವನ್ನು ಸಾರ್ವಜನಿಕರಿಂದ ವಸೂಲಿ ಮಾಡುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಆರ್ಥಿಕ ಹೊರೆ ಹೆಚ್ಚಾಗುವುದರೊಂದಿಗೆ ಪೋಲಿಸರಿಗೂ ಭ್ರಷ್ಟಾಚಾರ ಮಾಡಲು ಅನುವು ಮಾಡಿಕೊಟ್ಟಂತಾಗುತ್ತದೆ. ಸದರಿ ತಿದ್ದುಪಡಿಯು ಸಾರ್ವಜನಿಕರಿಗೆ, ವಕೀಲರುಗಳಿಗೆ, ಕಕ್ಷಿದಾರರಿಗೆ ಬಾರಿ ಹೊರೆಯಾಗುತ್ತದೆ. ಆದ್ದರಿಂದ ತಾವು ಈ ತಿದ್ದುಪಡಿಯನ್ನು ಹಿಂಪಡೆಯಬೇಕೆಂದು ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಯು.ಬಿ.ಶಿಂಪಿ, ಪದಾಧಿಕಾರಿಗಳಾದ ಎಸ್.ಎಸ್.ಪಾಟೀಲ, ಜಿ.ಎಮ್.ಬಟ್ಟಿ, ಎಸ್.ಕೆ.ಹಿರಟ್ಟಿ, ಸದಸ್ಯರಾದ ಜಿ.ಎಸ್.ನಂದಿ, ಎಮ್.ಕೆ.ಪೂಜೇರಿ, ಎಸ್.ಎಸ್.ಜಿಡ್ಡಿಮನಿ, ಎಲ್.ಬಿ.ಶಿಂಗಳಾಪೂರ, ಡಿ.ಬಿ.ಮುತ್ನಾಳ, ಪಿ.ಎಮ್.ಸುಣಧೋಳಿ, ಎಸ್.ಬಿ.ನಾಯಿಕ, ಪ್ರೇಮಾ ಚಿಕ್ಕೋಡಿ, ಎಸ್.ಎಸ್.ಹತ್ತರವಾಟ ಸೇರಿದಂತೆ ಅನೇಕರು ಇದ್ದರು.