ಗೋಕಾಕ:ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಅವರಿಂದ 5 ಲಕ್ಷ ರೂಗಳ ಪರಿಹಾರಧನ ಚೆಕ್ ವಿತರಣೆ
ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಅವರಿಂದ 5 ಲಕ್ಷ ರೂಗಳ ಪರಿಹಾರಧನ ಚೆಕ್ ವಿತರಣೆ
ನಮ್ಮ ಬೆಳಗಾವಿ ಸುದ್ದಿ, ಗೋಕಾಕ ಸೆ 20 :
ಅಂಕಲಗಿ ಗ್ರಾಮದ ಹಳ್ಳದಲ್ಲಿ ಆಕಸ್ಮಿಕವಾಗಿ ಜಾರಿ ಬಿದ್ದ ಸಾವನ್ನಪಿದ ಶಿವಾನಂದ ಶಂಕರ ನಾಯಕ (25) ಎಂಬುವನ ಕುಟುಂಬಕ್ಕೆ ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಅವರು 5 ಲಕ್ಷ ರೂಗಳ ಪರಿಹಾರಧನ ಚೆಕ್‍ನ್ನು ಶುಕ್ರವಾರದಂದು ಅಂಕಲಗಿ ಗ್ರಾಮದಲ್ಲಿ ವಿತರಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ರಾಮಣ್ಣ ಸುಂಬಳಿ, ಗುಜನಾಳ ಗ್ರಾ.ಪಂ ಅಧ್ಯಕ್ಷ ಭೀಮಗೌಡ ಪೋಲಿಸಗೌಡರ, ಅಂಕಲಗಿ ಗ್ರಾ.ಪಂ ಅಧ್ಯಕ್ಷ ಖೈರುನಬಿ ಹುಕ್ಕೇರಿ, ಮುಖಂಡರಾದ ರಾಜು ತಳವಾರ, ಮುನ್ನಾ ಗಣಾಚಾರಿ, ಬಸವರಾಜ ಪಟ್ಟಣಶೆಟ್ಟಿ, ಅಖಿಲ ಕೋತ್ವಾಲ, ಕಂದಾಯ ನಿರೀಕ್ಷಕ ಎಸ್.ಎನ್.ಹಿರೇಮಠ, ಮಲ್ಲಿಕಜಾನ ಬೂದಿಹಾಳ ಇದ್ದರು.
ಹಿನ್ನಲೆ: ಧಾರಾಕಾರವಾಗಿ ಸುರಿದ ಮಳೆಯಿಂದ ಅಗಸ್ಟ್ 3ರಂದು ಅಂಕಲಗಿ ಗ್ರಾಮದಲ್ಲಿ ಎಳೆ ನೀರು ಮಾರಾಟ ಮಾಡುತ್ತಿದ್ದ ಶಿವಾನಂದ ಶಂಕರ ನಾಯಕ (25) ಎಂಬವನು ಅಂಕಲಗಿ-ಗೋಕಾಕ ರಸ್ತೆಯಲ್ಲಿಯ ಬಳ್ಳಾರಿ ಹಳ್ಳದ ಸೇತುವೆ ಹತ್ತಿರ ಸಾಯಕಲ್ ಮೇಲೆ ಹೋಗುತ್ತಿದ್ದಾಗ ಅಕಸ್ಮಿಕವಾಗಿ ಕಾಲು ಜಾರಿ ಹಳ್ಳದಲ್ಲಿ ಬಿದ್ದು ಹರಿದು ಹೋಗಿ ಮೃತಪಟ್ಟಿದ್ದನು. ಮೃತನ ಶವಕ್ಕಾಗಿ ತೀವೃಶೋಧ ನಡೆಸಿ ಕಳೆದ 2 ದಿನಗಳ ಹಿಂದೆ ಲಗಮೇಶ್ವರ ಗ್ರಾಮದ ಹತ್ತಿರ ಕಬ್ಬಿನ ಗದ್ದೆಯಲ್ಲಿ ದೊರೆತಿತ್ತು.