ಗೋಕಾಕ:ಗೋಕಾಕನ್ನು ಜಿಲ್ಲೆಯನ್ನಾಗಿಸಲು ಸರ್ಕಾರವನ್ನು ಒತ್ತಾಯಿಸಲು ಶೀಘ್ರದಲ್ಲಿಯೇ ಸಭೆ : ಶ್ರೀ ಮುರುಘರಾಜೇಂದ್ರ ಶ್ರೀ
ಗೋಕಾಕನ್ನು ಜಿಲ್ಲೆಯನ್ನಾಗಿಸಲು ಸರ್ಕಾರವನ್ನು ಒತ್ತಾಯಿಸಲು ಶೀಘ್ರದಲ್ಲಿಯೇ ಸಭೆ : ಶ್ರೀ ಮುರುಘರಾಜೇಂದ್ರ ಶ್ರೀ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಸೆ, 21 ;-
ಗೋಕಾಕನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಲು ಶೀಘ್ರದಲ್ಲಿಯೇ ಸಭೆ ಕರೆದು ಹೋರಾಟದ ರೂಪರೇಷೆಗಳನ್ನು ರೂಪಿಸಲಾಗುವುದು ಎಂದು ಜಿಲ್ಲಾ ಹೋರಾಟ ಚಾಲನಾ ಸಮಿತಿಯ ಅಧ್ಯಕ್ಷರಾದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ತಿಳಿಸಿದ್ದಾರೆ.
ಈ ಕುರಿತು, ಶನಿವಾರದಂದು ಸಂಜೆ ಪತ್ರಿಕಾ ಪ್ರಕಟನೆ ನೀಡಿರುವ ಅವರು, ಎಲ್ಲ ಜನಪ್ರತಿನಿಧಿಗಳು, ರಾಜಕೀಯ ಮುಖಂಡರುಗಳು, ಸಂಘ-ಸಂಸ್ಥೆಗಳು ಸೇರಿದಂತೆ ಎಲ್ಲರ ಸಭೆ ನಡೆಸಿ ಗೋಕಾಕ ಜಿಲ್ಲೆ ಮಾಡಲು ಹೋರಾಟ ಮಾಡಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಎಸ್.ಎ.ಕೋತವಾಲ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಯು.ಬಿ.ಶಿಂಪಿ, ಉಪಾಧ್ಯಕ್ಷ ಎಸ್.ಎಸ್.ಪಾಟೀಲ, ಪ್ರ.ಕಾರ್ಯದರ್ಶಿ ಎಚ್.ಬಿ.ಸಂಗಟಿ, ಖಜಾಂಚಿ ಎಸ್.ಕೆ.ಹಿರಟ್ಟಿ, ನ್ಯಾಯವಾದಿಗಳಾದ ಸಿ.ಡಿ.ಹುಕ್ಕೇರಿ, ಬಿ.ಬಿ.ಬೀರನಗಡ್ಡಿ, ಎಲ್.ಬಿ.ಶಿಂಗಳಾಪೂರ, ಜಿ.ಎಸ್.ನಂದಿ, ಎಮ್.ಕೆ.ಪೂಜೇರಿ ಇದ್ದರು.