ಗೋಕಾಕ:ಪ್ರಸಕ್ತ ಸಾಲಿನಲ್ಲಿ 200 ಕೋಟಿ ರೂಪಾಯಿಗಳ ವಹಿವಾಟು ನಡೆಸಿ 1 ಕೋಟಿ 20 ಲಕ್ಷ ನಿವ್ವಳಲಾಭಗಳಿಸಿದೆ
ಪ್ರಸಕ್ತ ಸಾಲಿನಲ್ಲಿ 200 ಕೋಟಿ ರೂಪಾಯಿಗಳ ವಹಿವಾಟು ನಡೆಸಿ 1 ಕೋಟಿ 20 ಲಕ್ಷ ನಿವ್ವಳಲಾಭಗಳಿಸಿದೆ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಸೆ 22:
ಪ್ರಸಕ್ತ ಸಾಲಿನಲ್ಲಿ 200 ಕೋಟಿ ರೂಪಾಯಿಗಳ ವಹಿವಾಟು ನಡೆಸಿ 1 ಕೋಟಿ 20 ಲಕ್ಷ ನಿವ್ವಳಲಾಭಗಳಿಸಿದೆ ಎಂದು ದಿ.ಗೋಕಾಕ ಅರ್ಬನ್ ಕೋ-ಆಫ್, ಕ್ರೆಡಿಟ್ ಬ್ಯಾಂಕ ಲಿ. ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟಿ ಹೇಳಿದರು ಅವರು ರವಿವಾರದಂದು ನಗರದ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಬ್ಯಾಂಕಿನ 113ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಈ ಸಹಕಾರಿ ಬ್ಯಾಂಕ್ ತಮ್ಮದೇ ಆಗಿದ್ದು, ಸದಸ್ಯರು ಹೆಚ್ಚಿನ ವಹಿವಾಟು ನಡೆಯಿಸಿ ಆರ್ಥಿಕವಾಗಿ ತಾವು ಅಭಿವೃದ್ಧಿ ಹೊಂದಿ ಬ್ಯಾಂಕಿನ ಪ್ರಗತಿಗೆ ಶ್ರಮಿಸುವಂತೆ ಕರೆ ನೀಡಿದರು
ವೇದಿಕೆಯ ಮೇಲೆ ಬ್ಯಾಂಕಿನ ಉಪಾಧ್ಯಕ್ಷ ಡಿ.ಸಿ.ಬಿದರಿ, ನಿರ್ದೆಶಕರುಗಳಾದ ಜೆ.ಎಮ್.ಮುನವಳ್ಳಿ ,ವಿ.ಎಸ್.ಬಿದರಿ, ಸಿ.ಬಿ.ತಾರಳಿ,ಎಸ್.ಬಿ.ಮಗದುಮ್ಮ, ಎಂ.ಡಿ.ಚುನಮರಿ,ಎಸಾ.ಎಮ್.ಕುರಬೇಟ. ಎಸ್.ವಿ.ಗೋಡಗೇರಿ, ಎ.ಕೆ.ಹೆಗ್ಗನ್ನವರ, ಸಿ.ಎಂ.ಕುರಬೇಟ, ಎಸ್.ಬಿ.ಅಂಕಲಿ,ಪಿ.ಎಂ.ಮಡೆಪ್ಪಗೋಳ,ಎಸ್.ಎಸ್.ಗಾಡವಿ,ಎಸ್.ಯೂ.ಬೆಳಗಾವಿ, ಪ್ರಧಾನ ವ್ಯವಸ್ಥಾಪಕ ಎಸ್.ಎಸ್.ಪಾಟೀಲ ಇದ್ದರು .