RNI NO. KARKAN/2006/27779|Sunday, September 8, 2024
You are here: Home » breaking news » ಗೋಕಾಕ:ಪದವಿಪೂರ್ವ ಮಹಾವಿದ್ಯಾಲಯದ ವಿವಿಧ ಕ್ರೀಡೆಗಳಲ್ಲಿ ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಮಹಾವಿದ್ಯಾಲಯದ ಸಾಧನೆ

ಗೋಕಾಕ:ಪದವಿಪೂರ್ವ ಮಹಾವಿದ್ಯಾಲಯದ ವಿವಿಧ ಕ್ರೀಡೆಗಳಲ್ಲಿ ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಮಹಾವಿದ್ಯಾಲಯದ ಸಾಧನೆ 

ಪದವಿಪೂರ್ವ ಮಹಾವಿದ್ಯಾಲಯದ ವಿವಿಧ ಕ್ರೀಡೆಗಳಲ್ಲಿ ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಮಹಾವಿದ್ಯಾಲಯದ ಸಾಧನೆ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಸೆ 24 :

 

 
ಪದವಿಪೂರ್ವ ಶಿಕ್ಷಣ ಇಲಾಖೆಯವರು ನಗರದಲ್ಲಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಇಲ್ಲಿಯ ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಪದವಿಪೂರ್ವ ಮಹಾವಿದ್ಯಾಲಯದ ವಿವಿಧ ಕ್ರೀಡೆಗಳಲ್ಲಿ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ .
ಬಾಲಕರ ಥ್ರೋಬಾಲ ಪಂದ್ಯದಲ್ಲಿ ಪ್ರಥಮ ಸ್ಥಾನ, ಕಬಡ್ಡಿ ಪಂದ್ಯದಲ್ಲಿ ಬಾಲಕ ಹಾಗೂ ಬಾಲಕಿಯ ತಂಡಗಳು ದ್ವಿತೀಯ ಸ್ಥಾನ, ಬಾಲಕರ ಖೋಖೋದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅಥ್ಲೆಟಿಕ್ಸ್ ವಿಭಾಗದಲ್ಲಿ ಮಹೇಶ ನಾಯಿಕ 400 ಮೀಟರ್ ಓಟದಲ್ಲಿ ಪ್ರಥಮ,ಉದಪ್ಪ ಕಿಲಾರಿ 800 ಮತ್ತು 3000 ಮೀಟರ ಓಟದಲ್ಲಿ ಪ್ರಥಮ,ಯಲ್ಲಾಲಿಂಗ ಐದುಡ್ಡಿ ತಂಡ 4×400 ರೀಲೆಯಲ್ಲಿ ದ್ವಿತೀಯ, ಈರಣ್ಣ ಕನಕನ್ನವರ ಚಕ್ರ ಎಸೆತದಲ್ಲಿ ದ್ವಿತೀಯ, ಶೇಲಾ ಹುರಕಡ್ಲಿ ತ್ರೀಬಲ್ಲ ಜಂಪದಲ್ಲಿ ಪ್ರಥಮ ,ಪ್ರತಿಭಾ ಮಳಲ್ಲಿ ತ್ರೀಬಲ್ಲ ಜಂಪದಲ್ಲಿ ದ್ವಿತೀಯ, ಪೂಜಾ ಆರ್ ಎತ್ತರ ಜಿಗಿತದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಯನ್ನು ಸಂಸ್ಥೆಯ ಚೇರಮನ್ ಡಾ‌.ಭೀಮಶಿ ಜಾರಕಿಹೊಳಿ, ನಿರ್ದೇಶಕ ಸನತ ಜಾರಕಿಹೊಳಿ ,ಪ್ರಾಚಾರ್ಯ ಎನ್.ಕೆ.ಮಿರಾಸಿ, ಉಪನ್ಯಾಸಕರಾದ ಎಸ್.ಎಲ್.ಕಳಸನ್ನವರ , ಎಂ.ಬಿ ಜಾಲಗಾರ ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.

Related posts: