RNI NO. KARKAN/2006/27779|Saturday, October 19, 2024
You are here: Home » breaking news » ಘಟಪ್ರಭಾ:ಶಿಂದಿಕುರಬೇಟ ಹಾಲು ಉತ್ಪಾದಕರ ಸಹಕಾರಿ ಸಂಘದ ಸಭೆ

ಘಟಪ್ರಭಾ:ಶಿಂದಿಕುರಬೇಟ ಹಾಲು ಉತ್ಪಾದಕರ ಸಹಕಾರಿ ಸಂಘದ ಸಭೆ 

ಶಿಂದಿಕುರಬೇಟ ಹಾಲು ಉತ್ಪಾದಕರ ಸಹಕಾರಿ ಸಂಘದ ಸಭೆ

 

 
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಸೆ 25 :

 

 

ರೈತರು ಗುಣಮಟ್ಟದ ಹಾಲು ನೀಡುವ ಮೂಲಕ ಸಂಸ್ಥೆಗೆ ಒಳ್ಳೆಯ ಕೀರ್ತಿ ಬರುತ್ತದೆ ಎಂದು ಗೋಕಾಕಿನ ಕೆಎಂಎಫ್ ವಿಸ್ತರಣಾಧಿಕಾರಿ ಎಸ್.ಬಿ.ಕರಬನ್ನವರ ಹೇಳಿದರು.
ಅವರು ಸಮೀಪದ ಶಿಂದಿಕುರಬೇಟ ಹಾಲು ಉತ್ಪಾದಕರ ಸಹಕಾರಿ ಸಂಘದ 35ನೇ ವಾರ್ಷಿಕ ಸರ್ವಸಾಧಾರಣಸಭೆಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಈ ಸಹಕಾರಿ ಸಂಘಕ್ಕೆ ಇತ್ತೀಚಿಗೆ 2018-19ನೇ ಸಾಲಿನ ತಾಲೂಕಿನ ಅತ್ಯುತ್ತಮ ಸಹಕಾರಿ ಸಂಘ ಎಂದು ಪ್ರಶಸ್ತಿಯನ್ನು ಬೆಳಗಾವಿಯ ಹಾಲು ಒಕ್ಕೂಟದ ವಾರ್ಷಿಕ ಸಭೆಯಲ್ಲಿ ನೀಡಿದ್ದು ಶ್ಲಾಘನೀಯವಾಗಿದೆ. ಸಂಘದ ಸದಸ್ಯರ ಮತ್ತು ಸಿಬ್ಬಂದಿಗಳ ಪರಿಶ್ರಮದಿಂದ ಸಂಘವು ಇನ್ನೂ ಹೆಚ್ಚಿನ ಅಭಿವೃದ್ದಿ ಹೊಂದಲಿ ಎಂದು ಹಾರೈಸಿದರು.
ಸಂಘದ ಹಿರಿಯ ಸದಸ್ಯ ಗುರುಸಿದ್ದಪ್ಪ ಕಡೇಲಿ ಮಾತನಾಡಿ ಸಂಘದ ಏಳ್ಗೆಗೆ ರೈತರ ಸಹಕಾರ ಮುಖ್ಯವಾಗಿದೆ ಎಂದರು.ಇದೇ ಸಂದರ್ಭದಲ್ಲಿ ಗುಣಮಟ್ಟದ ಹಾಲು ನೀಡಿದ ರೈತರಿಗೆ ಬಹುಮಾನ ವಿತರಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಯಲ್ಲಪ್ಪ ಪಾಟೀಲ ವಹಿಸಿದ್ದರು. ವೇದಿಕೆ ಮೇಲೆ ಉಪಾಧ್ಯಕ್ಷ ಕೆಂಪಣ್ಣಾ ಮಸ್ತಿ, ಗುರು ಕಡೇಲಿ, ಬಸವಣ್ಣಿ ಹೊಸಪೇಟಿ, ಮಾರುತಿ ಶಿರಗುರಿ, ಮಹಾಂತೇಶ ಕಂಬಾರ, ರವಿ ಕಾಳ್ಯಾಗೋಳ, ಶಿವಾನಂದ ಶೆಂಡೂರಿ, ಮುತ್ತೇಪ್ಪ ಜೋತೆನ್ನವರ, ವಿಠ್ಠಲ ಅದ್ದುಗೋಳ, ಇಂದ್ರವ್ವ ಕಳಸನ್ನವರ, ಮಹಾದೇವಿ ಮಾನೆಪ್ಪಗೋಳ, ಚಿದಾನಂದ ಸರ್ವಿ, ಮುಖ್ಯ ಕಾರ್ಯನಿರ್ವಾಹಕ ಅಡಿವೇಶ ಕಾಳ್ಯಾಗೋಳ ಇದ್ದರು. ಎ.ಆರ್.ಕಾಳ್ಯಾಗೋಳ ಸ್ವಾಗತಿಸಿ, ವರದಿ ವಾಚನಗೈದರು.

Related posts: