RNI NO. KARKAN/2006/27779|Friday, November 22, 2024
You are here: Home » breaking news » ಖಾನಾಪುರ:ಲೋಂಡಾ ಬಸ್ಸ ನಿಲ್ದಾಣದಲ್ಲಿರುವ ತೆಗ್ಗು-ಗುಂಡಿಗಳನ್ನು ಮುಚ್ಚಲು ಸಾರ್ವಜನಿಕರ ಆಗ್ರಹ

ಖಾನಾಪುರ:ಲೋಂಡಾ ಬಸ್ಸ ನಿಲ್ದಾಣದಲ್ಲಿರುವ ತೆಗ್ಗು-ಗುಂಡಿಗಳನ್ನು ಮುಚ್ಚಲು ಸಾರ್ವಜನಿಕರ ಆಗ್ರಹ 

ಲೋಂಡಾ ಬಸ್ಸ ನಿಲ್ದಾಣದಲ್ಲಿರುವ ತೆಗ್ಗು-ಗುಂಡಿಗಳನ್ನು ಮುಚ್ಚಲು ಸಾರ್ವಜನಿಕರ ಆಗ್ರಹ
ಖಾನಾಪೂರ ಜು 23: ಲೋಂಡಾ ಗ್ರಾಮದ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಬಸ್ಸ ನಿಲ್ದಾಣದಲ್ಲಿ ರಸ್ತೆಯುದ್ದಕ್ಕು ತೇಗ್ಗು-ಗುಂಡಿಗಳ ಬಿದ್ದು ರಸ್ತೆ ಸಂಪೂರ್ಣ ಹಾಳಾಗಿದೆ

ಈ ತೆಗ್ಗುಗಳಿಂದ ಬಸ್ಸು ಸಂಚರಿಸಲು ಚಾಲಕರು ಪರದಾಡುವ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ
ಈ ಬಸ್ಸ ನಿಲ್ದಾಣಕ್ಕೆ ದಿನ ನಿತ್ಯ ಬೆಳಗಾವಿ-ಗೋವಾ ಹಾಗೂ ಬೆಳಗಾವಿ-ಕಾರವಾರ ಮಾರ್ಗದಿಂದ ಅನೇಕ ಬಸ್ಸಗಳು ಸಂಚರಿಸುತ್ತವೆ

ಇಲ್ಲಿ ಬಿದ್ದಿರುವ ತೆಗ್ಗುಗಳಿಂದ ಬಸ್ಸಚಾಲಕರು ಹಾಗೂ ಪ್ರಯಾಣಿಕರೂ ದಿನಾಲೂ ಸರ್ಕಸ ಮಾಡುವ ಅನುಭವವನ್ನು ಪಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ ಸದ್ಯ ಮಳೆಗಾಲ ಇರುವುದರಿಂದ ಅಲ್ಲಲ್ಲಿ ನೀರಿನ ಗುಂಡಿಗಳೆ ಹೆಚ್ಚಿವೆ ವಾಸ್ತವಿಕವಾಗಿ ಬೆಳಗಾವಿ-ಗೋವಾ ಮಾರ್ಗದ ಮಧ್ಯ ಲೋಂಡಾ ಗ್ರಾಮವಿದ್ದು ಮಹತ್ವದ ಬಸ್ಸು ನಿಲ್ದಾಣವಾಗಿ ಹೊರಹುಮ್ಮಿದೆ. ಅದರಲ್ಲಿಯೂ ಲೋಂಡಾದಲ್ಲಿ ರೈಲ್ವೆ ಜಂಕ್ಷಣ ಇರುವುದರಿಂದ ಈ ಬಸ್ಸು ನಿಲ್ದಾಣಕ್ಕೆ ವಿಶೇಷ ಮಹತ್ವವಿದೆ. ಈ ಬಸ್ಸು ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರೂ ಕಂಡು ಬರುತ್ತಾರೆ.
ಆದ್ದರಿಂದ ಸಾರಿಗೆ ಇಲಾಖೆ ಮತ್ತು ಲೋಕೊಪಯೋಗಿ ಇಲಾಖೆ ಗಮನ ಹರಿಸಿ ಆದಷ್ಟು ಬೇಗ ಬಸ್ಸು ನಿಲ್ದಾಣದೂದ್ದಕ್ಕೂ ಬಿದಿರುವ ಗುಂಡಿಗಳನ್ನು ಮುಚ್ಚಬೇಕೆಂದು ಗ್ರಾಮದ ಸಲಿಂ ಪಟೇಲ ಆಗ್ರಹಿಸಿದ್ದಾರೆ

Related posts: