RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ ಸಾಹಿತ್ಯವನ್ನು ರಚಿಸಿದ ಕೀರ್ತಿ ಬಸವರಾಜ ಕಟ್ಟೀಮನಿ ಅವರಿಗೆ ಸಲ್ಲಬೇಕು : ಡಾ ಬಸವರಾಜ ಸಾದರ

ಗೋಕಾಕ:ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ ಸಾಹಿತ್ಯವನ್ನು ರಚಿಸಿದ ಕೀರ್ತಿ ಬಸವರಾಜ ಕಟ್ಟೀಮನಿ ಅವರಿಗೆ ಸಲ್ಲಬೇಕು : ಡಾ ಬಸವರಾಜ ಸಾದರ 

ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ ಸಾಹಿತ್ಯವನ್ನು ರಚಿಸಿದ ಕೀರ್ತಿ ಬಸವರಾಜ ಕಟ್ಟೀಮನಿ ಅವರಿಗೆ ಸಲ್ಲಬೇಕು : ಡಾ ಬಸವರಾಜ ಸಾದರ

 

 
ನಮ್ಮ ಬೆಳಗಾವಿ ಇ – ವಾರ್ತೆ ಗೋಕಾಕ ಸೆ 27 :

 

 
ಬಸವರಾಜ ಕಟ್ಟೀಮನಿ ಅವರು ಕೇವಲ ರಂಜನೆಗಾಗಿ ಕೃತಿಗಳನ್ನು ರಚಿಸದೆ, ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ ಸಾಹಿತ್ಯವನ್ನು ರಚಿಸಿ ಇಂದಿಗೂ ಜನ-ಮನದಲ್ಲಿ ನೆಲೆಯೂರಿದ್ದಾರೆ ಎಂದು ಬೆಂಗಳೂರಿನ ಸಾಹಿತಿ-ಚಿಂತಕ ಡಾ ಬಸವರಾಜ ಸಾದರ ನುಡಿದರು.
ಶುಕ್ರವಾರ ಇಲ್ಲಿಯ ಜೆ.ಎಸ್.ಎಸ್. ಪದವಿ ಮಹಾವಿದ್ಯಾಲಯದ ಸಭಾ ಭಾವನದಲ್ಲಿ ಬೆಳಗಾವಿಯ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಹಾಗೂ ಗೋ.ಶಿ. ಸಂಸ್ಥೆಯ ಜೆ.ಎಸ್.ಎಸ್. ಪದವಿ ಮಹಾವಿದ್ಯಾಲಯದ ಕನ್ನಡ ವಿಭಾಗ ಜಂಟಿಯಾಗಿ “ಬಸವರಾಜ ಕಟ್ಟೀಮನಿ ಜನ್ಮ ಶತಮಾನೋತ್ಸವ-2019” ಪ್ರಯುಕ್ತ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ‘ಕಟ್ಟೀಮನಿ ಸಾಹಿತ್ಯ” ಮರು ಚಿಂತನೆ’ ವಿಶೇಷ ಉಪನ್ಯಾಸ ನೀಡಿದ ಅವರು, ಶೋಷಣೆಯನ್ನು ಅನುಭವಿಸಿ ಹೋರಾಟದ ಮೂಲಕ ಬದುಕನ್ನು ಕಟ್ಟಿಕೊಂಡ ಕಟ್ಟೀಮನಿ ಅವರು ಅದರ ಅನುಭವವನ್ನು ತಮ್ಮ ಸಾಹಿತ್ಯದ ಮೂಲಕ ಬಿಂಬಿಸಿ ಅದು ಜನಸಾಮಾನ್ಯರ ಬದುಕಿಗೆ ಮಾರ್ಗದರ್ಶಿಯಾಗಿದೆ.
ವಿಚಾರ ಸಂಕೀರ್ಣವನ್ನು ಗೋಕಾಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಚೇರಮನ್ ವಿಶ್ವನಾಥ ಕಡಕೋಳ ಅವರು ಉದ್ಘಾಟಿಸಿ ಮಾತನಾಡಿದ ಅವರು, ಕಟ್ಟೀಮನಿಯವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡೆಯಿಂದ ಎಲ್ಲರ ಮನದಲ್ಲಿ ನೆಲೆಯೂರಿದ್ದಾರೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರತಿಷ್ಠಾನದ ಸಂಚಾಲಕ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಚಂದ್ರಶೇಖರ ಅಕ್ಕಿ ಅವರು ಮಾತನಾಡಿ, ಕಟ್ಟೀಮನಿಯವರು ಕನ್ನಡ ನೆಲ ಹಾಗೂ ಸಾಹಿತ್ಯದ ಬಹುದೊಡ್ಡ ಆಸ್ತಿಯಾಗಿದ್ದರು.
ಸಂಕೀರ್ಣದ ಮತ್ತೊಂದು ‘ಕಟ್ಟೀಮನಿ ಕಥೆ-ಆತ್ಮಕಥೆಯ ಆಯ್ದ ಭಾಗಗಳ ವಾಚನ’ ಗೋಷ್ಠಿಯಲ್ಲಿ ಅಥಣಿಯ ಸಾಹಿತಿ ಡಾ. ಬಾಳಾಸಾಹೇಬ ಲೋಕಾಪೂರ ಆಶಯ ನುಡಿಗಳನ್ನಾಡಿದರು. ‘ಬೂಟ ಪಾಲೀಶ್’ ಕಥಾವಾಚನವನ್ನು ಪ್ರೊ. ಜಿ.ವಿ.ಮಳಗಿ ಹಾಗೂ ‘ಗಿರಿಜಾ ಕಂಡ ಸಿನೇಮಾ’ ಆತ್ಮಕಥೆ ವಾಚನವನ್ನು ಪ್ರೊ. ಮಹಾನಂದಾ ಪಾಟೀಲ ಹಾಗೂ ಪ್ರೊ. ಸುರೇಶ ಮುದ್ದಾರ ಪಾಲ್ಗೊಂಡಿದ್ದರು. ಪ್ರತಿಷ್ಠಾನದಿಂದ ವಿದ್ಯಾರ್ಥಿಗಳ ಸಂವಾದ ಜರುಗಿತು.
ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನ ಅಧ್ಯಕ್ಷ ಪ್ರೊ. ಮಲ್ಲಿಕಾರ್ಜುನ ಹಿರೇಮಠ ಅವರು ಮಾತನಾಡಿ, ಕಟ್ಟೀಮನಿ ಅವರ ಸ್ಮಾರಕ ನಿರ್ಮಿಸಲು ಎಲ್ಲರೂ ತನು-ಮನದಿಂದ ಸಹಕರಿಸುವಂತೆ ಕೋರಿದ್ದರು.
ಸಮಾರೋಪ ನುಡಿಯನ್ನು ಮೈಸೂರಿನ ಮಾನಸ ಗಂಗೋತ್ರಿಯ ಅಧ್ಯಯನ ಕೇಂದ್ರದ ಯೋಜನಾ ನಿರ್ದೆಶಕ ಡಾ. ಕೆ.ಆರ್.ದುರ್ಗಾದಾಸ ನಡೆಸಿಕೊಟ್ಟರು.
ವೇದಿಕೆಯಲ್ಲಿ ಪ್ರಾಚಾರ್ಯ ಡಾ. ಎಸ್.ಎಸ್.ತೇರದಾಳ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಸ್.ಪಿ.ಹೊಸಮನಿ, ಸುಲಧಾಳದ ಬಾಳಗೌಡ ಪಾಟೀಲ, ಡಾ. ರಾಮಕೃಷ್ಣ ಮರಾಠೆ, ಶಿರೀಶ ಜೋಷಿ, ಪ್ರತಿಷ್ಠಾನದ ಸಂಚಾಲಕ ಶಿವಕುಮಾರ ಕಟ್ಟೀಮನಿ ಮತ್ತಿತರರು ಇದ್ದರು.
ಶಿಕ್ಷಕ ಎಸ್.ಕೆ.ಮಠದ ಸ್ವಾಗತಿಸಿದರು. ಶಿಕ್ಷಕ ಆರ್.ಎಲ್.ಮಿರ್ಜಿ ನಿರೂಪಿಸಿದರು. ಡಾ. ವಿಜಯಲಕ್ಷ್ಮೀ ಪಲೋಟಿ ವಂದಿಸಿದರು.

Related posts: