ವಾಸ್ಕೋ: ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಗೋವಾ ಸರಕಾರ ವಿಧ್ಯಾರ್ಥಿ ವೇತನ ನೀಡಲಿ : ಗೋವಾದಲ್ಲಿ ಗುಡುಗಿದ ಕರವೇ ಅಧ್ಯಕ್ಷ ಖಾನಪ್ಪನವರ
ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಗೋವಾ ಸರಕಾರ ವಿಧ್ಯಾರ್ಥಿ ವೇತನ ನೀಡಲಿ : ಗೋವಾದಲ್ಲಿ ಗುಡುಗಿದ ಕರವೇ ಅಧ್ಯಕ್ಷ ಖಾನಪ್ಪನವರ
ಗೋವಾ (ವಾಸ್ಕೋ) ಜು 24 : ಗೋವಾ ರಾಜ್ಯದಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಾಂಗ ಮಾಡುತ್ತಿರುವ ವಿಧ್ಯಾರ್ಥಿಗಳಿಗೆ ಗೋವಾ ಸರಕಾರ ಪ್ರತಿ ತಿಂಗಳು 1000 ರೂ ವಿಧ್ಯಾರ್ಥಿವೇತನ ನೀಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕ ಘಟಕದ ಅಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು
ಅವರು ಗೋವಾ ರಾಜ್ಯದ ವಾಸ್ಕೋನ ಜುವಾರಿ ನಗರದಲ್ಲಿ ಇರುವ ಶ್ರೀ ಕಾಳಿಕಾ ಶಿಕ್ಷಣ ಸಂಸ್ಥೆಯಲ್ಲಿ ವಿಧ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ವಿತರಣಾ ಸಮಾರಂಭದಲ್ಲಿ ಪಠ್ಯ ಪುಸ್ತಕ ವಿತರಿಸಿ ಮಾತನಾಡುತ್ತಿದ್ದರು
ಗೋವಾ ಸರಕಾರ ಕೊಂಕಣಿ ಭಾಷೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ಥಿಗಳಿಗೆ ಪ್ರತಿ ತಿಂಗಳು 400 ರೂ ವಿಧ್ಯಾರ್ಥಿ ವೇತನ ನೀಡಿ , ಕನ್ನಡ ಮಾಧ್ಯಮ ವಿಧ್ಯಾರ್ಥಿಗಳಿಗೆ ಮಲತಾಯಿ ಧೋರಣೆ ತೋರುತ್ತಿರುವುದು ತರವಲ್ಲ ಈ ಕೂಡಲೇ ಸರಕಾರ ಎಚ್ಚೆತ್ತುಕೊಂಡು ಕನ್ನಡ ಮಾಧ್ಯಮ ವಿಧ್ಯಾರ್ಥಿಗಳಿಗೂ ಸಹ ಪ್ರತಿ ತಿಂಗಳು 1000 ರೂ ವಿಧ್ಯಾರ್ಥಿ ವೇತನ ನೀಡಬೇಕೆಂದು ಖಾನಪ್ಪನವರ ಗೋವಾ ಸರಕಾರವನ್ನು ಆಗ್ರಹಿಸಿದರು .
ಬರುವ ಶೈಕ್ಷಣಿಕ ವರ್ಷ ಪ್ರಾರಂಭದಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಾಂಗ ಮಾಡುವಂತೆ ವಿಧ್ಯಾರ್ಥಿಗಳಿ ಜಾಗೃತಿ ಮೂಡಿಸುವ ಸಲುವಾಗಿ ಗೋವಾ ರಾಜ್ಯದಲ್ಲಿ ಅಭಿಯಾನ ಹಮ್ಮಿಕೋಳ್ಳಲಾಗುವುದು ಈ ಅಭಿಯಾನದ ಯಶ್ವಸಿಗೆ ಗೋವಾ ಕನ್ನಡಿಗರು ಸಹಕಾರ ನೀಡಬೇಕೆಂದು ಬಸವರಾಜ ಖಾನಪ್ಪನವರ ವಿನಂತಿಸಿದರು
ಸಮಾರಂಭದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸುಜಾತ ಮನ್ನಿಕೇರಿ ವಹಿಸಿದ್ದರು
ವೇದಿಕೆಯಲ್ಲಿ ಕಾರ್ಯದರ್ಶಿ ಸಾಧಿಕ ಹಲ್ಯಾಳ , ಕೃಷ್ಣಾ ಖಾನಪ್ಪನವರ , ಮಾರಿಕಾಂಬಾ ಚೀಟ್ ಪಂಡನ ನಿರ್ದೆಶಕರಾದ ಬಸವರಾಜ ಹತ್ತರಗಿ , ರಾಜು ಕೆಂಚನ ಗುಡ್ಡ ,ಮಹಾಂತೇಶ ಹೀರೆಮಠ , ಗೋವಾ ಕರವೇ ಪ್ರಮುಖ ಭರಮಣ್ಣಾ ಕಟ್ಟಿಮನಿ , ಶಿಕ್ಷಕ ಮಲ್ಲಿಕಾರ್ಜುನ ನರಹಟ್ಟಿ , ಶ್ರೀಮತಿ ವಿಧ್ಯಾ ಸಾವಂತ, ಸುಭಾನಿ ಲೋಲೆಕರ , ಕರವೇ ಉಪಾಧ್ಯಕ್ಷ ದೀಪಕ ಹಂಜಿ , ನಿಜಾಮ ನಧಾಪ, ಬಸವರಾಜ ಗಾಡಿವಡ್ಡರ, ಮುಗುಟ ಪೈಲವಾನ, ಶಂಕರ ಹಾಲ್ಲವಗೋಳ , ಆನಂದ ಖಾನಪ್ಪನವರ, ರಫೀಕ ಗುಳೇದ್ದಗುಡ, ಉಪಸ್ಥಿತರಿದ್ದರು
ಶಿಕ್ಷಕಿ ಶ್ರೀಮತಿ ಸುನೀತಾ ಸುಕಮಾರಿ ಸ್ವಾಗತಿಸಿದರು , ಶಿಕ್ಷಕ ಉದಯ ಭಗವತಿ ನಿರೂಪಿಸಿದರು ಕೊನೆಯಲ್ಲಿ ಶ್ರೀಮತಿ ಶೋಭಾ ಅಮೋಮಕರ ವಂದಿಸಿದರು