ಗೋಕಾಕ:ನೆರೆ ನಿಂತರೂ ನೆರೆ ಪೀಡಿತರಿಗೆ ನೆರವಾಗುತ್ತಿರುವ ದಿ.ಕುಮಾರಿ ದೀಪಾ ನಾಯ್ಕರ ಸೇವಾ ಸಮಿತಿ
ನೆರೆ ನಿಂತರೂ ನೆರೆ ಪೀಡಿತರಿಗೆ ನೆರವಾಗುತ್ತಿರುವ ದಿ.ಕುಮಾರಿ ದೀಪಾ ನಾಯ್ಕರ ಸೇವಾ ಸಮಿತಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಸೆ 28 :
ನೆರೆ ಪ್ರವಾಹದಿಂದ ಭಾರಿ ಪ್ರಮಾಣದಲ್ಲಿ ಹಾಳಾದ ರಸ್ತೆ, ಗಟಾರು ಮತ್ತು ಬಿದ್ದ ಮನೆಗಳ ಮಣ್ಣು ತೆಗೆಯುವ ಕಾರ್ಯ ನಗರದಲ್ಲಿ ಹೊಸಪೇಠಗಲ್ಲಿಯ ದಿ.ಕುಮಾರಿ ದೀಪಾ ನಾಯ್ಕರ ಸೇವಾ ಸಮಿತಿ ಮತ್ತು ಇಲ್ಲಿಯ ಗೋಕಾಕ ಗೆಳೆಯರ ಬಳಗದಿಂದ ಸದ್ದಿಲ್ಲದೆ ಭರದಿಂದ ಸಾಗಿದೆ. ಸೂರು ಕಳೆದುಕೊಂಡು ದುಃಖದಲ್ಲಿರುವ ಕುಟುಂಬಗಳಿಗೆ ದಿ.ಕುಮಾರಿ ದೀಪಾ ನಾಯ್ಕರ ಸೇವಾ ಸಮಿತಿ ಅವರ ಈ ಕಾರ್ಯ ತುಂಬಾ ಸಹಕಾರಿಯಾಗಿ ಪರಿಣಮಿಸಿದೆ.
ಕಳೆದ 46 ದಿನಗಳಿಂದ ನಗರದ ಪ್ರವಾಹ ಪೀಡಿತ ಪ್ರದೇಶಗಳಾದ ಉಪ್ಪಾರ, ಬೋಜಗಾರ, ವಡ್ಡರ ಲಕ್ಕಡ, ಮಾಲದಾರ, ಜಿನಗಾರ, ಫನಿಬಂದ, ಢೋರ, ಕೀಲ್ಲಾ, ಅಂಬಿಗೇರ, ಪುಂಡಿಕೇರಿ, ಬಣಗಾರ, ಜೈನರ ಓಣಿಗಳಲ್ಲಿ ದಾಳಂಬ್ರಿ ತೋಟ, ಸೇರಿದಂತೆ ಆಶ್ರಯ ಬಡಾವಣೆ, ಯೋಗಿಕೊಳ್ಳ ರಸ್ತೆ, ನಾಕಾ ರೋಡ, ಶೆಟ್ಟೆವ್ವನ ತೋಟದಿಂದ ನಾಕಾ ವರೆಗಿನ ಒಳ ರಸ್ತೆ ಹಾಗೂ ಇನ್ನೀತರ ಪ್ರವಾಹದಿಂದ ಹಾಳಾಗಿದ್ದ ರಸ್ತೆ, ಗಟಾರು, ಬಿದ್ದ ಮನೆಗಳ ಮಣ್ಣು, ಓಣಿಯಿಂದ ಓಣಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಮೇಲೆ ಬಿದ್ದ ಮೋಣ ಕಾಲುದ್ದ ಮಣ್ಣನ್ನು ದಿ.ಕುಮಾರಿ ದೀಪಾ ನಾಯ್ಕರ ಸೇವಾ ಸಮಿತಿಯ ಪದಾಧಿಕಾರಿಗಳು ತೆರವುಗೊಳಿಸಿ ನೆರೆಯಿಂದ ತತ್ತರಿಸಿದ ಜನರಿಗೆ ತಮ್ಮ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಟ್ರ್ಯಾಕ್ಟರ್, ಜೆಸಿಬಿ ಮತ್ತು ಕಾರ್ಮಿಕರ ಬಳಕೆ: ಪ್ರವಾಹದಿಂದ ಸಾವಿರಾರು ಮಣ್ಣಿನ ಮನೆಗಳು ಬಿದ್ದು ಆಯಾ ಪ್ರದೇಶಗಳಲ್ಲಿ ನಡೆದಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು ಇಲ್ಲಿ ಬಿದ್ದ ಮಣ್ಣು ಮತ್ತು ತ್ಯಾಜ್ಯವನ್ನು ತೆರವು ಗೊಳಿಸುವದೆ ಒಂದು ಸವಾಲಿನ ಕೆಲಸವಾಗಿತ್ತು ಇದನ್ನು ಅರಿತ ಸೇವಾ ಸಮಿತಿಯ ಮುಖಂಡ ಮುಂಬೈನ ಹೀರೇಗೌಡಾ(ಸಂತೋಷ) ಮಲ್ಲನಾಯ್ಕ ನಾಯ್ಕರ ನಗರಕ್ಕೆ ಭೇಟಿ ನೀಡಿ ತಮ್ಮ ಗೆಳೆಯರ ಬಳಗದ ಸಹಾಯದಿಂದ ತಮ್ಮ ಹುಟ್ಟೂರು ಗೋಕಾಕ ಪ್ರವಾಹದಿಂದ ಹಾನಿಗೊಳಗಾದನ್ನು ಅರಿತು ನಗರದಲ್ಲಿ ಸ್ವಚ್ಚತಾ ಕಾರ್ಯದಲ್ಲಿ ಟ್ರ್ಯಾಕ್ಟರ್, ಜೆಸಿಬಿ ಮತ್ತು ಕಾರ್ಮಿಕರ ಬಳಿಸಿ ಸ್ವಂತ ಖರ್ಚಿನಲ್ಲಿ ಸೇವೆಗೆ ಮುಂದಾಗಿ ಯಾವುದೆ ಪ್ರಚಾರ ಬಯಸದೆ ಸದ್ದಿಲ್ಲದೆ ಆಗಸ್ಟ್ 14 ರಿಂದ ಇಂದಿನವರೆಗೂ ಸುಮಾರು 46 ದಿನಗಳು ಕಳೆದರೂ ಸಹ ಸ್ವಚ್ಚತಾ ಕಾರ್ಯವನ್ನು ಮುಂದುವರೆಸಿದ್ದಾರೆ.
ನೋಟ್ ಬುಕ್, ಬ್ಯಾಗ ವಿತರಣೆ: ಶತಮಾನದ ಘೋರ ದುರಂತಕ್ಕೆ ನಗರ ಸೇರಿದಂತೆ 24ಕ್ಕೂ ಹೆಚ್ಚು ಗ್ರಾಮಗಳು ಜಲಾವೃತ್ತಗೊಂಡು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಮನೆ ಮಠ ಕಳೆದುಕೊಂಡವರ ಗೋಳು ಒಂದು ಕಡೆ ಇದ್ದರೆ ಪುಸ್ತಕಗಳನ್ನು ಕಳೆದುಕೊಂಡ ನರಳಾಡುತ್ತಿರುವ ವಿದ್ಯಾರ್ಥಿಗಳು ಪರದಾಟ ಒಂದು ಕಡೆ ಇದನ್ನು ಸೂಕ್ಷ್ಮವಾಗಿ ಗಮನಿಸಿದ ದಿ. ದೀಪಾ ಮಲ್ಲನಾಯಿಕ ನಾಯ್ಕರ ಸೇವಾ ಸಮಿತಿಯ ಪ್ರಮುಖ ಹೀರೇಗೌಡಾ(ಸಂತೋಷ) ಮಲ್ಲನಾಯ್ಕ ನಾಯ್ಕರ ಅವರು ಮುಳುಗಡೆಯಾದ ಶಾಲೆಗಳನ್ನು ಗುರುತಿಸಿ ನಗರ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶಾಲಾ ನೋಟ್ ಬುಕ್ಕ, ಬ್ಯಾಗಗಳನ್ನು ನೀಡಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದ್ದಾರೆ ಈಗಾಗಲೇ ಸುಮಾರು 650 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈ ಸೇವೆ ತಲುಪಿಸಿರುವ ಅವರು ಬರುವ ದಿನಗಳಲ್ಲಿ ಪುಸ್ತಕಗಳನ್ನು ಕಳೆದುಕೊಂಡ ಎಲ್ಲ ವಿದ್ಯಾರ್ಥಿಗಳಿಗೆ ಈ ಸೇವೆಯನ್ನು ತಲುಪಿಸಲು ತಯಾರಿ ನಡೆಸಿದ್ದಾರೆ
ಭಾವೈಕತೆ ತೋರಿದ ಪದಾಧಿಕಾರಿಗಳು : ಈ ಸೇವಾ ಕಾರ್ಯದಲ್ಲಿ ಜಾತಿ, ಮತ, ಪಂಥಗಳನ್ನು ಬದಿಗೊತ್ತಿ ಪ್ರವಾಹಕ್ಕೆ ತುತ್ತಾಗಿ ತೊಂದರೆಯನ್ನು ಅನುಭವಿಸುತ್ತಿದ್ದ ಎಲ್ಲರಿಗೂ ತಮ್ಮ ಕೈಲಾದ ಸಹಾಯವನ್ನು ಮಾಡಿ ಮಾನವಿಯತೆಯನ್ನು ಮೆರೆದಿದ್ದಾರೆ ಎಲ್ಲ ಧರ್ಮಿಯ ಜನರನ್ನು ಒಳಗೊಂಡಿರುವ ಈ ಸೇವಾ ಸಮಿತಿಯು ಯಾವುದೇ ಪ್ರಚಾರ ಬಯಸದೆ ತೊಂದರೆಯಲ್ಲಿರುವ ಜನರನ್ನು ಮೇಲೆತ್ತುವ ಪವಿತ್ರ ಕಾರ್ಯದಲ್ಲಿ ತೊಡಗಿರುವದು ಜನ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸೇವೆಯ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ಸೇವಾ ಸಮಿತಿಯ ಪ್ರಮುಖರಾದ ಹೀರೇಗೌಡಾ(ಸಂತೋಷ) ಮಲ್ಲನಾಯ್ಕ ನಾಯ್ಕರ “ಪ್ರವಾಹದ ಬೀಕರ ಪರಿಸ್ಥಿತಿಯಲ್ಲಿ ಸಿಲುಕಿ ತೊಂದರೆಯಲ್ಲಿರುವ ಸಾರ್ವಜನಿಕರಿಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಗೋಕಾಕ ಗೆಳೆಯ ಬಳಗದ ಸಹಕಾರದೊಂದಿಗೆ ಕಳೆದ 45 ದಿನಗಳಿಂದ ಸ್ವಚ್ಚತಾ ಕಾರ್ಯಮಾಡುತ್ತಿದ್ದೇವೆ. ಮನೆ ಕಳೆದುಕೊಂಡು ನಿರಾಶ್ರಿತರಾದ ಸಂತ್ರಸ್ತರಿಗೆ ಈ ಕಾರ್ಯ ತುಂಬಾ ಅನುಕೂಲವಾಗಿದೆ ಈ ಸ್ವಚ್ಚತಾ ಕಾರ್ಯ ಸಂಪೂರ್ಣ ನಗರ ಸ್ವಚ್ಛ ಗೋಳುವವರೆಗೆ ಮುಂದುವರೆಯಲ್ಲಿದೆ ಮತ್ತು ನಮ್ಮ ಸೇವಾ ಸಮಿತಿಯಿಂದ ಈಗಾಗಲೇ ಪ್ರವಾಹ ಬಾದಿತ ವಿದ್ಯಾರ್ಥಿಗಳನ್ನು ಗುರುತಿಸಿ ನೋಟ್ ಬುಕ್ಕ ಬ್ಯಾಗಗಳನ್ನು ನೀಡುವ ಕಾರ್ಯ ಮಾಡುತ್ತಿದ್ದು ನಮಗೆ ತೃಪ್ತಿಯನ್ನು ತಂದಿದೆ.
ಈ ಕಾರ್ಯ ಸಾಧನೆಯಾಗಬೇಕಾದರೆ ಗೋಕಾಕಿನ ಗಳೆಯರ ಬಳಗದ ಮುಸ್ತಾಕ ಖಂಡಾಯತ ,ರಾಜು ಜಾಧವ ,ಮಹೇಶ ಗಣಾಚಾರಿ ,ಸುನೀಲ ಮುರ್ಕಿಭಾವಿ, ರಫೀಕ ಮೋಮಿನ , ವಿಠಲ ,ಲಕ್ಷ್ಮಣ, ಸಂತೋಷ,ಯಲ್ಲಪ್ಪ ಇವರ ಸೇವೆ ಆಗಾಧವಾಗಿದೆ. ಇವರ ಹೆಗಲಿಗೆ ಹೆಗಲು ಕೊಟ್ಟು ಪ್ರವಾಹದಲ್ಲಿ ತೊಂದರೆ ಅನುಭವಿಸಿದವರಿಗೆ ನೆರವಾಗಲು ಟೊಂಟಕಟ್ಟಿ ನಿಂತಿರುವ ಸುನೀಲ ಸುಬಂಳಿ,ಬಸು ಪಡತಾರೆ,ಮೋಹನ ಕಿವಟೆ,ಅಮಿತ ವನ್ನೂಥ, ಪ್ರಸಾದ ಬಡಿಗೇರ, ವಿನಾಯಕ ಮುದಿಗೌಡರ,ಸಲೀಮ ಮುಲ್ಲಾ ,ಭೀಮಶಿ ಮೋರೆ, ಸಾದಿಕ ಬಾಳಪ್ರವೇಶ, ಮಸೂದ ಬಾಳಪ್ರವೇಶ, ವಿಜು ಹಿರೇಮಠ, ವಿಶಾಲ ಸುಣಗಾರ, ಹನುಮಂತ ಯರಗಟ್ಟಿ,ಸಿದ್ದಪ್ಪ ಯಮಕನಮರಡಿ, ಶೌಕತ ಕಾಗಜಿ,ಫಯಾಜ ಮುಲ್ಲಾ,ಮೈಬೂಬ ಮುಲ್ಲಾ ,ಶಿವು ಪೂಜೇರಿ, ನಸರುದ್ದೀನ ಬಾಳಪ್ರವೇಶ, ಹಮಜಾಸಾಬ ಬಾಳಪ್ರವೇಶ, ಸಿದ್ದು ಕಳ್ಳಿಮನಿ,ಮಲ್ಲಿಕ ಮುಲ್ಲಾ,ಸಾಯಿನಾಥ್ ಪವಾಡಿ,ಪರಸು ಸುಬಂಳಿ,ನಾಗು ಮಾದೇಕರ, ರಫೀಕ ಮುಲ್ಲಾ, ದಿನೇಶ ಶಿರಾಳಕರ,ಸಮಿ ತೇರದಾಳ, ಹಣುಮಂತ ಗುಡ್ಡದಮನಿ, ಶರೀಫ ಮುಧೋಳ ಸೇರಿದಂತೆ ಅನೇಕರು ಪ್ರವಾಹದಲ್ಲಿ ತಮ್ಮನ್ನು ಅರ್ಪಿಸಿ ಕಾರ್ಯಗೈದು ನೊಂದವರ ಜೊತೆ ನಿಂತಿದ್ದಾರೆ ಇವರ ಈ ಕಾರ್ಯ ಇತರರಿಗೆ ಮಾದರಿಯಾಗಿದೆ.
ಒಟ್ಟಾರೆ ಯುವಕರು ಮುಂದೆ ಬಂದು ಹಿಂತಹ ಪರಿಸ್ಥಿಗಳಲ್ಲಿ ನಿಸ್ವಾರ್ಥ ಜನಸೇವೆಗೆ ಮುಂದಾದರೆ ಭವ್ಯ ಭಾರತವನ್ನು ಕಟ್ಟಲು ಸಾಧ್ಯ ಎಂಬ ಮಾತನ್ನು ಈ ಗೆಳೆಯರ ಬಳಗ ಸಾಧಿಸಿ ತೋರಿಸಿದೆ.