RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಜಾರಕಿಹೊಳಿ ಕುಟುಂಬದ ಹಿಡಿತದಲ್ಲಿರುವ ಗೋಕಾಕ ನಗರಸಭೆ ಇಂದು ಭ್ರಷ್ಟಾಚಾರ ಆರೋಪವನ್ನು ಎದುರಿಸುತ್ತಿದೆ : ಅಶೋಕ ಪೂಜೇರಿ

ಗೋಕಾಕ:ಜಾರಕಿಹೊಳಿ ಕುಟುಂಬದ ಹಿಡಿತದಲ್ಲಿರುವ ಗೋಕಾಕ ನಗರಸಭೆ ಇಂದು ಭ್ರಷ್ಟಾಚಾರ ಆರೋಪವನ್ನು ಎದುರಿಸುತ್ತಿದೆ : ಅಶೋಕ ಪೂಜೇರಿ 

ಜಾರಕಿಹೊಳಿ ಕುಟುಂಬದ ಹಿಡಿತದಲ್ಲಿರುವ ಗೋಕಾಕ ನಗರಸಭೆ ಇಂದು ಭ್ರಷ್ಟಾಚಾರ ಆರೋಪವನ್ನು ಎದುರಿಸುತ್ತಿದೆ : ಅಶೋಕ ಪೂಜೇರಿ

 

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಸೆ 30 :

 

 
ಜಾರಕಿಹೊಳಿ ಕುಟುಂಬದ ಹಿಡಿತದಲ್ಲಿರುವ ಗೋಕಾಕ ನಗರಸಭೆ ಇಂದು ಭ್ರಷ್ಟಾಚಾರ ಆರೋಪವನ್ನು ಹೊತ್ತಿಕೊಂಡಿದೆ ಎಂದು ಬಿಜೆಪಿ ಮುಖಂಡ ಅಶೋಕ ಪೂಜೇರಿ ಹೇಳಿದರು

ಸೋಮವಾರದಂದು ನಗರದ ಅವರ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಳೆದ ಇಪ್ಪತ್ತು ವರ್ಷಗಳಿಂದ ಮಾಜಿ ಸಚಿವ ರಮೇಶ ಮತ್ತು ಲಖನ್ ಜಾರಕಿಹೊಳಿ ಅವರ ನಿರ್ದೆನದಂತೆ ನಡೆಯುತ್ತಿದ್ದ ಗೋಕಾಕ ನಗರಸಭೆಯಲ್ಲಿ ಹಿರಿಯ ನಗರಸಭೆ ಸದಸ್ಯರು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಲಖನ ಜಾರಕಿಹೊಳಿ ಅವರು ಅದನ್ನು ತಗೆದು ಹಾಕಲು ಹೋರಾಟ ಮಾಡಲಾಗುವದು ಎಂದಿದ್ದಾರೆ ಅದಕ್ಕೆ ಹಿರಿಯ ನಗರಸಭೆ ಸದಸ್ಯರು ಯಾವದೇ ಸ್ವಷ್ಟೀಕರಣ ನೀಡದೆ ಸುಮ್ಮನಿರುವದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
ನಗರಸಭೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದಿಂದ ಜನಪರ ಕಾರ್ಯಗಳು ಆಗುತ್ತಿಲ್ಲಾ , ಕಾಮಗಾರಿಗಳ ಗುತ್ತಿಗೆಯಲ್ಲಿ ಬೇಕಾಬಿಟ್ಟಿ ಕಮಿಷನ್ ತಗೆದುಕೋಳ್ಳುತ್ತಿದ್ದಾರೆ ಎಂದು ಆರೋಪಿಸಿರುವ ಅಶೋಕ ಪೂಜೇರಿ ಅವರು 1 ಎಕ್ಕರೆ ಭೂಮಿಯನ್ನು ಬಿನ್ ಸೆತಗಿ ಮಾಡಲು 20 ಲಕ್ಷ ಕಮಿಷನ್ ಪಡೆಯುತ್ತಿದ್ದಾರೆ ಇದರಿಂದ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ
ಇಲ್ಲಿ ಆಯ್ಕೆಯಾದ ನರಗಸಭೆ ಅಧಿಕಾರಿಗಳು ಹೆಸರಿಗೆ ಮಾತ್ರ ಎಂಬಂತೆ ಇದ್ದು, 4 ಜನ ಹಿರಿಯ ಸದಸ್ಯರ ಆಡಳಿತದಿಂದ ಇಂದು ನಗರಸಭೆ ಭ್ರಷ್ಟಾಚಾರದ ಆರೋಪವನ್ನು ಎದುರಿಸುತ್ತಿದ್ದೆ ಇದಕ್ಕೆ 4 ಜನ ಹಿರಿಯ ಸದಸ್ಯರು ಯಾರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂಬ ಬಗ್ಗೆ ಸ್ವಷ್ಟೀಕರಣ ನೀಡಬೇಕು.
ಇದಕ್ಕೆ ಸರಕಾರ ಮಧ್ಯೆ ಪ್ರದೇಶಿಸಿ ಸೂಕ್ತ ತನಖೆಗೋಳಿಸಲು ಆದೇಶಿಸಬೇಕು ಕಳೆದ 20 ವರ್ಷಗಳಿಂದ ಗೋಕಾಕ ನಖರಸಭೆಯಲ್ಲಿ ನಡೆದಂತಹ ವ್ಯವಹಾರಗಳನ್ನು , ಕಾಮಗಾರಿಗಳು ಸೇರಿದಂತೆ ವಿವಿಧ ಯೋಜನೆಗಳ ಬಗ್ಗೆ ಸಂಪು ತನಿಖೆ ಮಾಡಿಸಿಬೇಕು ಇಲ್ಲದಿದ್ದರೆ ಕಾನೂನು ಹೋರಾಟ ಕೈಗೋಳ್ಳಲಾಗುವದು ಎಂದು ಅಶೋಕ ಪೂಜೇರಿ ಸರಕಾರವನ್ನು ಆಗ್ರಹಿಸಿದ್ದಾರೆ

ಪತ್ರಿಕಾಗೋಷ್ಠಿಯಲ್ಲಿ ದಸ್ತಗೀರ ಪೈಲವಾನ, ನ್ಯಾಯವಾದಿಗಳಾದ ಎಂ.ಎ.ಪೀರಜಾದೆ ,ಬಿ.ಎಚ್.ಮುಲ್ಲಾ ಉಪಸ್ಥಿತರಿದ್ದರು

Related posts: