ಗೋಕಾಕ:ಯಾರ ಅಣತಿಯಂತೆ ಕಾರ್ಯನಿರ್ವಹಿಸದಿರಿ : ಅಧಿಕಾರಿಗಳಿಗೆ ಲಖನ ಜಾರಕಿಹೊಳಿ ಖಡಕ್ ಎಚ್ಚರಿಕೆ
ಯಾರ ಅಣತಿಯಂತೆ ಕಾರ್ಯನಿರ್ವಹಿಸದಿರಿ : ಅಧಿಕಾರಿಗಳಿಗೆ ಲಖನ ಜಾರಕಿಹೊಳಿ ಖಡಕ್ ಎಚ್ಚರಿಕೆ
ನಮ್ಮ ಬೆಳಗಾವಿ ಇ – ವಾರ್ತೆ ಗೋಕಾಕ
ಹದಗೆಟ್ಟಿರುವ 24×7 ಕುಡಿಯುವ ನೀರಿನ ವ್ಯವಸ್ಥೆಯನ್ನು ಸುಧಾರಿಸಿ ನಗರದಲ್ಲಿ ಹರಡಿರುವ ಡೆಂಗ್ಯೂ ನಿಯಂತ್ರಿಸಲು ಸೂಕ್ತ ಕ್ರಮ ಕೈಗೋಳಬೇಕೆಂದು ನಗರಸಭೆ ಪೌರಾಯುಕ್ತ ಎಸ್.ಎಂ ಹಿರೇಮಠ ಅವರಿಗೆ ಕಾಂಗ್ರೆಸ್ ಯುವ ಧುರೀಣ ಲಖನ್ ಜಾರಕಿಹೊಳಿ ಖಡಕ್ ಎಚ್ಚರಿಕೆ ನೀಡಿದರು
ಸೋಮವಾರದಂದು ಮುಂಜಾನೆ ನಗರಸಭೆ ಕಾರ್ಯಾಲಯಕ್ಕೆ ಹಠಾತ ಭೇಟಿನೀಡಿದ ಅವರು ನಗರಸಭೆ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊರಹಾಕಿದರು.
ನಗರದಲ್ಲಿ ಜಾರಿಯಲ್ಲಿರುವ ನಿರಂತರ ನೀರಿನ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇದರ ಬಗ್ಗೆ ಸಾಕಷ್ಟು ಬಾರಿ ನಗರಸಭೆ ಅವರಿಗೆ ಮನವರಿಕೆ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಆದಷ್ಟು ಬೇಗ ಇದನ್ನು ಸುಧಾರಿಸಬೇಕು ಇಲ್ಲದಿದ್ದರೆ ಮುಂದನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವದು ಎಂದು ಪೌರಾಯುಕ್ತರಿಗೆ ಖಡಕ್ಕಾಗಿ ಎಚ್ಚರಿಸಿದ ಲಖನ್ ಜಾರಕಿಹೊಳಿ ಅವರು ನೀರಿನ ಕರ, ಮನೆ ಕರ , ವಾಣಿಜ್ಯ ತೆರಿಗೆಗಳು ವಿಪರೀತವಾಗಿ ಏರಿಕೆಯಾಗಿವೆ ಇದರಿಂದ ಸಾರ್ವಜನಿಕರು ಮತ್ತು ವ್ಯಾಪಾರಸ್ಥರಿಗೆ ತೊಂದರೆ ಯಾವುಗುತ್ತಿದೆ
ಅಧಿಕಾರಿಗಳು ಯಾರ ಅಣತಿಯಂತೆ ಕಾರ್ಯನಿರ್ವಹಿಸಿದೆ ನ್ಯಾಯ ಬದ್ದವಾಗಿ ಕಾರ್ಯನಿರ್ವಹಿಸಿ ಜನರಿಗೆ ಅನುಕೂಲ ಮಾಡಬೇಕು
ನಗರದ ಎಲ್ಲ 31 ವಾರ್ಡಗಳ ಸದಸ್ಯರೊಂದಿಗೆ ತಾರತಮ್ಯ ಮಾಡದೆ ಎಲ್ಲ ವಾರ್ಡ ಸದಸ್ಯರನ್ನು ವಿಶ್ವಾಸಕ್ಕೆ ತಗೆದುಕೊಂಡು ಕಾರ್ಯ ನಿರ್ವಹಿಸಬೇಕು ಇನಾದರೂ ವ್ಯತಿರಿಕ್ತ ವಾತಾವರಣ ನಿರ್ಮಾಣವಾದರೆ ನಗರಸಭೆ ವಿರುದ್ಧ ಉಗ್ರ ಹೋರಾಟ ಮಾಡಲಾಗುವದು ಎಂದು ಎಚ್ಚರಿಸದ್ದಲ್ಲದೆ ತಾಲೂಕಾ ಪಂಚಾಯತಗೆ ಭೇಟಿ ನೀಡಿದ ಅವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಿಕ ಅವರಿಗೆ ಕ್ಲಾಸ್ ತೆಗೆದುಕೊಂಡು ರಾಜಕೀಯ ಒತ್ತಡಗಳಿಗೆ ಒಳಗಾಗದೆ ಜನರ ಪರವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಭಗವಂತ ಹುಳ್ಳಿ, ಸಂತೋಷ ಮಂತ್ರನ್ನವರ,ಪ್ರಕಾಶ ಮುರಾರಿ , ಎಪಿಎಂಸಿ ನಿರ್ದೇಶಕ ಬಸವರಾಜ ಸಾಯನ್ನವರ, ಮುಖಂಡರಾದ ಅಶೋಕ ಸಾಯನ್ನವರ, ಸದಾ ಕಲಾಲ,ಬಸವರಾಜ ದೇಶನೂರ, ಬಸು ಮಾಳಗಿ, ಮಲ್ಲಿಕಾರ್ಜುನ ಹೊಸಪೇಠ ,ವಿಜಯ ಅರಭಾವಿ, ದೇವು ಕಂಬಾರ ಸೇರಿದಂತೆ ಇತರರು ಇದ್ದರು