ಮೂಡಲಗಿ:ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ್ ಪ್ರತಿಯೊಬ್ಬರೂ ಕಲಿಯಲೇಬೇಕಾದ ಸಾಧನವಾಗಿದೆ
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ್ ಪ್ರತಿಯೊಬ್ಬರೂ ಕಲಿಯಲೇಬೇಕಾದ ಸಾಧನವಾಗಿದೆ
ನಮ್ಮ ಬೆಳಗಾವಿ ಇ – ವಾರ್ತೆ ಮೂಡಲಗಿ ಸೆ 30 :
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ್ ಪ್ರತಿಯೊಬ್ಬರೂ ಕಲಿಯಲೇಬೇಕಾದ ಸಾಧನವಾಗಿದೆ. ನಮ್ಮ ಅನೇಕ ಕೆಲಸ ಕಾರ್ಯಗಳು ಇಂದು ಕಂಪ್ಯೂಟರನ್ನೇ ಅವಲಂಭಿಸಿವೆ ಎಂದು ಸುಣಧೋಳಿ ಜಡಿಸಿದ್ದೇಶ್ವರ ಮಠದ ಪೀಠಾಧಿಪತಿ ಶ್ರೀ ಆಭಿನವ ಶಿವಾನಂದ ಮಹಾಸ್ವಾಮೀಜಿ ಹೇಳಿದರು.
ಪಟ್ಟಣದ ಮಂಜುನಾಥ ಸೈನಿಕ ತರಬೇತಿ ಕೇಂದ್ರದಲ್ಲಿ ಕಂಪ್ಯೂಟರ್ ವಿಭಾಗವನ್ನು ಉದ್ಘಾಟಿಸಿ, ಕಂಪ್ಯೂಟರ್ ಈ ಯುಗದ ಅತ್ಯಂತ ಅಮೂಲ್ಯ ಸಂಶೋಧನೆಯಾಗಿದೆ. ಮನುಷ್ಯನ ಅನೇಕ ಕೆಲಸಗಳನ್ನು ಕ್ಷ್ಷಣಾರ್ಧದಲ್ಲಿ ಮಾಡುವ ಮೂಲಕ ಮಾನವನ ಸಮಯ ಮತ್ತು ಶ್ರಮವನ್ನು ಉಳಿಸುತ್ತದೆ ಎಂದು ಆಶೀರ್ವಚನ ನೀಡಿದರು.
ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದÀ ಮಾತನಾಡಿ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಂಪ್ಯೂಟರ್ ಕಡ್ಡಾಯ ವಿಷಯವಾಗಿದೆ. ಸೇನೆ ಮತ್ತು ಪೋಲಿಸ್ ಹುದ್ದೆಗಳಿಗೆ ಕಂಪ್ಯೂಟರ್ ಜ್ಞಾನ ಅಗತ್ಯವಾಗಿದೆ. ಈ ಜ್ಞಾನವನ್ನು ಶಿಬಿರಾರ್ಥಿಗಳಿಗೆ ಸೂಕ್ತ ರೀತಿಯಲ್ಲಿ ಸಮರ್ಪಕವಾಗಿ ನೀಡುವ ಸಲುವಾಗಿ ಮಂಜುನಾಥ ಸೈನಿಕ ತರಬೇತಿ ಕೇಂದ್ರವು ಸುಸಜ್ಜಿತವಾದ ಆಧುನಿಕ ಕಂಪ್ಯೂಟರ್ ಕೇಂದ್ರವನ್ನು ಸ್ಥಾಪಿಸಿದ್ದು ಶಿಬಿರಾರ್ಥಿಗಳಿಗೆ ಅನುಕೂಲವಾಗಿದೆ. ಕೇಂದ್ರೀಯ ಪೋಲೀಸ್ ಪಡೆಯಲ್ಲಿ ಅನ್‍ಲೈನ್ ಪರೀಕ್ಷೆ ಮೂಲಕ ನೇಮಕಾತಿ ಮಾಡುವ ಪದ್ದತಿಯಿದ್ದು ಅಂತಹ ಪರೀಕ್ಷೆಗಳಿಗೆ ತರಬೇತಿಯ ಅವಶ್ಯಕತೆ ಇರುತ್ತದೆ. ಮಂಜುನಾಥ ಸೈನಿಕ ತರಬೇತಿ ಕೇಂದ್ರ ಸುಮಾರು 15 ವರ್ಷಗಳಿಂದ ತರಬೇತಿ ನೀಡುತ್ತಾ ಬಂದಿದ್ದು. ಇಲ್ಲಿ ಯಶಸ್ವಿಯಾಗಿ ತರಬೇತಿ ಪಡೆದ ಸಾವಿರಾರು ಅಭ್ಯರ್ಥಿಗಳು ಸೇನೆ ಹಾಗೂ ಪೋಲಿಸ್ ಇಲಾಖೆಯಲ್ಲಿ ದೇಶದ ಉದ್ದಗಲಕ್ಕೂ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಸಂಸ್ಥೆಯ ಮಾರ್ಗದರ್ಶಕ ಬಿ.ಬಿ.ಹಂದಿಗುಂದ ಮಾತನಾಡಿ ವರ್ಷಗಟ್ಟಲೆ ತಿರುಗಾಡಿ ಹಣ ಖರ್ಚುಮಾಡಿಕೊಂಡು ಸರಿಯಾದ ತರಬೇತಿ ಇಲ್ಲದೆ ಚಿಂತಿಸುತ್ತಿರುವ ಯುವಕ ಯುವತಿಯರ ಪಾಲಿಗೆ ಸ್ಥಳೀಯವಾಗಿ ಆರ್ಮಿ ಹಾಗೂ ಪೋಲಿಸ್ ಹುದ್ದೆ ಭರ್ತಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಮಂಜುನಾಥ ಸೈನಿಕ ತರಬೇತಿ ಕೇಂದ್ರ ಹೊಂದಿದ್ದು ಅದರಲ್ಲೂ ಕಂಪ್ಯೂಟರ್ ಕಲಿಕಾ ಕೇಂದ್ರ ಇರುವುದು ವಿಶೇಷವಾಗಿದೆ. ಕರ್ನಾಟಕ ಮಾತ್ರವಲ್ಲದೆ ಬೇರೆ ಬೇರೆ ರಾಜ್ಯಗಳಿಂದಲೂ ಇಲ್ಲಿಗೆ ಶಿಬಿರಾರ್ಥಿಗಳು ತರಬೇತಿಗೆ ಆಗಮಿಸುತ್ತಿರುವುದು ಮೂಡಲಗಿಗೆ ಹೆಮ್ಮೆಯ ವಿಷಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಂಜುನಾಥ ಸೈನಿಕ ತರಬೇತಿ ಕೇಂದ್ರದ ಸಂಸ್ಥಾಪಕ ಲಕ್ಷ್ಮಣ ವಾಯ್. ಅಡಿಹುಡಿ, ಶಿವಪ್ಪ ಜೋಡಟ್ಟಿ, ಕರಿಬಸವರಾಜು.ಟಿ, ಸುಭಾಸ ಗೊಡ್ಯಾಗೋಳ, ಸುಧೀರ ನಾಯರ್, ಸುಧಾಕರ ಉಂದ್ರಿ, ಹಾಲಪ್ಪ ಅಂತರಗಟ್ಟಿ, ಮಲ್ಲಪ್ಪ ತೇರದಾಳ, ಸವಿತಾ ಹಿರಲಕ್ಕಿ, ಡಿ.ಪಿ.ದಾಸನ್ನವರ, ಮಂಜುನಾಥ ಕುಂಬಾರ, ಎಸ್.ಬಿ.ಡೊಳ್ಳಿ, ಹಣಮಂತ ಅಂಗಡಿ, ರಾಘು ಗಂಗನ್ನವರ, ಪರಸಪ್ಪ ಕೊಡಗನವರ, ಸುರೇಶ ಖಾನಟ್ಟಿ, ಆರ್ಮಿ ಮತ್ತು ಪೋಲಿಸ್ ತರಬೇತಿಯ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.