ಘಟಪ್ರಭಾ:ಅರಭಾಂವಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆ
ಅರಭಾಂವಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆ
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಅ 1 :
ಸಮೀಪದ ಅರಭಾಂವಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯು ಇತ್ತೀಚಿಗೆ ಸಂಘದ ಆವರಣದಲ್ಲಿ ಜರುಗಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷರಾದ ದುಂಡಪ್ಪ ನಿಂಗನ್ನವರ ಮಾತನಾಡುತ್ತ ಸಂಘಯು ಪ್ರಸಕ್ತ ಸಾಲಿನಲ್ಲಿ ರೂ.14,08,13,542 ರಷ್ಟು ದುಡಿಯುವ ಬಂಡವಾಳವಿದ್ದು, ಶೇರು ಬಂಡವಾಳ ರೂ.1,65,01875 ಇದ್ದು, ಒಟ್ಟು ರೂ.8,06,0000 ಸಾಲ ಸದಸ್ಯರಿಗೆ ವಿತರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಸಂಘಕ್ಕೆ ಒಟ್ಟು ರೂ.37,33,204 ಲಾಭ ಬಂದಿದ್ದು, ಶೇರದಾರಿಗೆ ಶೇ.10 ಡಿವ್ಹಿಡೆಂಟ್ ವಿತರಿಸಲಾಗುವುದು. ಸಂಘವು ಪ್ರಗತಿ ಪಥದತ್ತ ಸಾಗುತ್ತಿದ್ದು, ಸಾಲ ಪಡೆದ ಸದಸ್ಯರು ತಾವು ಆರ್ಥಿಕವಾಗಿ ಸಬಲರಾವುದರೊಂದಿಗೆ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಿ ಸಂಘದ ಏಳಗೆಗಾಗಿ ಶ್ರಮಿಸಬೇಕೆಂದು ಹೇಳಿದರು.
ವೇದಿಕೆಯ ಮೇಲೆ ಸಂಘದ ಉಪಾದ್ಯಕ್ಷರಾದ ದುಂಡಪ್ಪಾ ಚಿಗರಿತೋಟ, ಅಡಳಿತ ಮಂಡಳಿಯ ಸದಸ್ಯರಾದ ಲಕ್ಷ್ಮಣ ಕೋಳಿ, ಕೆಂಚಪ್ಪಾ ಮಂಟೂರ, ರಾಮಪ್ಪಾ ತಳವಾರ, ಲಗಮಪ್ಪಾ ಪೂಜಾರಿ, ಮಲ್ಲಪ್ಪಾ ಮಾಳ್ಯಾಗೋಳ, ಹಣಮಂತ ಚಿಪ್ಪಲಕಟ್ಟಿ, ವಿಕಾಸ ಪೂಜಾರಿ, ಸದಾಶಿವ ಅಂತರಗಟ್ಟಿ, ಇಂದ್ರವ್ವಾ ತಮದಡ್ಡಿ, ಶಾಂತವ್ವಾ ಶೀಳನವರ, ಡಿಸಿಸಿ ಬ್ಯಾಂಕ ಪ್ರತಿನಿಧಿ ಅಲ್ಲಪ್ಪಾ ಗಣೇಶವಾಡಿ, ಬ್ಯಾಂಕ ನಿರೀಕ್ಷಕರಾದ ಸನ್ನಿ ಪಾಟೀಲ ಸೇರಿದಂತೆ ಸಭೆಯಲ್ಲಿ ಸಂಘದ ಶೇರುದಾರರು ಹಾಗೂ ಗ್ರಾಮಸ್ಥರು ಸಿಬ್ಬಂದಿ ವರ್ಗದವರು ಇದ್ದರು.
ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ನಾರಾಯಣ ಜಡಕಿನ ವರದಿವಾಚನ ಮಾಡಿದರು. ಸಿಬ್ಬಂದಿ ದುಂಡಪ್ಪಾ ಸಂಸುದ್ದಿ ನಿರೂಪಿಸಿ, ಲಕ್ಷ್ಮಣ ಝಲ್ಲಿ ವಂದಿಸಿದರು.