ಗೋಕಾಕ:ಗಾಂಧಿ ಗ್ರಾಮ ಪುರಸ್ಕಾರಕ್ಕೆ ತಾಲೂಕಿನ ಖನಗಾಂವ ಗ್ರಾಮ ಪಂಚಾಯತ ಆಯ್ಕೆ : ಬಸವರಾಜ ಹೆಗ್ಗನಾಯಿಕ
ಗಾಂಧಿ ಗ್ರಾಮ ಪುರಸ್ಕಾರಕ್ಕೆ ತಾಲೂಕಿನ ಖನಗಾಂವ ಗ್ರಾಮ ಪಂಚಾಯತ ಆಯ್ಕೆ : ಬಸವರಾಜ ಹೆಗ್ಗನಾಯಿಕ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 1 :
ರಾಷ್ಟ್ರಪೀತ ಮಹಾತ್ಮ ಗಾಂಧಿಯವರ ಜಯಂತಿ ಪ್ರಯುಕ್ತ ಪ್ರತಿ ವರ್ಷ ನೀಡಲ್ಪಡುವ ಗಾಂಧಿ ಗ್ರಾಮ ಪುರಸ್ಕಾರವು ತಾಲೂಕಿನ ಖನಗಾಂವ ಗ್ರಾಮ ಪಂಚಾಯತ ಆಯ್ಕೆಯಾಗಿ ಸಾರ್ವಜನಿಕರ ಸೇವಾ ಕಾರ್ಯಗಳನ್ನು ಯಶಸ್ವಿಯಾಗಿ ಪೂರೈಸಿದಕ್ಕೆ ತಕ್ಕ ಫಲ ದೊರೆತಿದೆ.
2018-19 ನೇ ಸಾಲಿನ ಗ್ರಾಮ ಪಂಚಾಯತ ಗಾಂಧಿ ಗ್ರಾಮ ಪ್ರಶಸ್ತಿಯು ಖನಗಾಂವ ಗ್ರಾ.ಪಂಗೆ ದೊರೆತಿದೆ. ಅ. 2 ರಂದು ಬೆಂಗಳೂರಿನ ವಿಧಾನ ಸೌಧದ ಬ್ಲಾಕೇಟ್ ಹಾಲನಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪರ ಸಮ್ಮುಖದಲ್ಲಿ ಪ್ರಶಸ್ತಿ ಸಮ್ಮಾನಕ್ಕೆ ಆಯ್ಕೆಯಾಗಿದೆ. ಈ ಗ್ರಾಪಂಯು ಸರಕಾರಿ ಅನುದಾನಗಳನ್ನು ಸಮರ್ಪಕ ಬಳಕೆ, ಉದ್ಯೋಗ ಖಾತರಿ ಯೋಜನೆಯ ಪ್ರಗತಿ, ತೆರಿಗೆ ವಸೂಲಾತಿ, ಘನತ್ಯಾಜ್ಯ ವಿಲೆವಾರಿ ಘಟಕ, ನೈರ್ಮಲೀಕರಣಕ್ಕೆ ಆದ್ಯತೆ, ನಿಯಮಾನುಸಾರ ಸಾಮಾನ್ಯ ಸಭೆಗಳು, ಸ್ಥಾಯಿ ಸಮಿತಿಯ ಸಭೆಗಳು, ಶುಚಿತ್ವದ ಕುರಿತು ಗ್ರಾಮಸ್ಥರಿಗೆ ಸಾರ್ವಜನಿಕ ರ್ಯಾಲಿಗಳನ್ನು ನಡೆಸಿ ಗ್ರಾಮೀಣಾಭಿವೃದ್ಧಿ ಪಂಚಾಯತ ರಾಜ್ಯ ಇಲಾಖೆಯ ಪ್ರತಿಯೊಂದು ಕಾರ್ಯಚಟುವಟಿಕೆಗಳನ್ನು ಅನುಷ್ಠಾನಗೋಳಿಸುವಲ್ಲಿ ಯಶಸ್ವಿಯಾಗಿದೆ.
ಖನಗಾಂವ ಗ್ರಾಮ ಪಂಚಾಯಿತಿಯು ಗಿಳಿಹೂಸುರ, ಗುದನಟ್ಟಿ, ನಬಾಪೂರ, ದೇವಗೌಡನಟ್ಟಿ ಐದು ಗ್ರಾಮಗಳನ್ನು ಒಳಗೊಂಡಿರುವ ಪಂಚಾಯಿತಿಯಾಗಿದೆ. 25 ಜನ ಗ್ರಾಪಂ ಸದಸ್ಯರನ್ನೊಳಗೊಂಡು ರಚಿತವಿರುವ ಸ್ಥಳೀಯ ಸಂಸ್ಥೆಯು ಸಾರ್ವಜನಿಕರ ಸೇವಾ ಕಾರ್ಯಗಳಿಗೆ ಸದಾ ಸಿದ್ದವಿದೆ. ಗ್ರಾಮಗಳ ಶಾಲೆಗಳಿಗೆ ತಡೆ ಗೋಡೆ, ಜಲಕುಂಭಗಳು, ಸಂಘ ಸಂಸ್ಥೆಗಳ ಮೂಲಕ ಕಾರ್ಯಕ್ರಮಗಳ ಆಯೋಜನೆ, ವಿಶೇಷ ಚೇತನರಿಗೆ ಸಹಾತ ಸೌಲಭ್ಯ, ಗ್ರಾಪಂ ಅನುದಾನ, ಸ್ವಚ್ಛ ಭಾರತ ಯೋಜನೆಯ ಯಶಸ್ವಿ ಅನುಷ್ಠಾನದ ಜೊತೆಗೆ ಗಣಕೀಕೃತವಾಗಿ ಉಪಯುಕ್ತ ಕೆಲಸ ಕಾರ್ಯಗಳನ್ನು ಚುನಾಯಿತ ಸದಸ್ಯರ ಹಾಗೂ ಸಿಬ್ಬಂದಿಯವರಿಂದ ಸೇವಾ ಕಾರ್ಯಗಳನ್ನು ನೀಡುತ್ತಾ ಬಂದಿರುತ್ತದೆ.
ತಾಪಂ ಸಹಾಯಕ ನಿಧೇಶಕ ಎಸ್.ಎಚ್ ದೇಸಾಯಿ, ಗ್ರಾಪಂ ಉಪಾಧ್ಯಕ್ಷೆ ಸೋಮವ್ವ ಹಮ್ಮಯ್ಯ ಹಮ್ಮನವರ, ಪಿಡಿಒ ಉಮೇಶ ಮನಗೂಳಿ, ಕಾರ್ಯದರ್ಶಿ ಹಾಗೂ ಪಂಚಾಯತ ಸದಸ್ಯರು, ಗ್ರಾಪಂ ಸಿಬ್ಬಂದಿಯವರ ನಿರಂತರ ಪ್ರಯತ್ನದ ಫಲವಾಗಿ ಗಾಂಧೀಜಿ ಕನಸಿನ ಗ್ರಾಮವಾಗಿ ನಿರ್ಮಾಣವಾಗಿದೆ.
ಪ್ರತಿಷ್ಠಿತ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗೋಕಾಕ ತಾಲ್ಲೂಕಿನ ಖನಗಾಂವ ಗ್ರಾ.ಪಂ ಆಯ್ಕೆಯಾಗಿದ್ದು ಸಂತಸ ತಂದಿದೆ. 2018-19 ನೇ ಸಾಲಿನಲ್ಲಿ ಸದರಿ ಗ್ರಾಪಂನ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಉತ್ತಮ ಸಹಕಾರ ನೀಡಿದ್ದಾರೆ. ಸಾರ್ವಜನಿಕರ ಕೆಲಸಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿ, ಕುಡಿಯುವ ನೀರು, ವಿದ್ಯುತ್, ರಸ್ತೆ, ಚರಂಡಿ, ವಸತಿ, ಶೌಚಾಲಯ, ಗ್ರಾಮೀಣ ಉದ್ಯೋಗ, ಶಿಕ್ಷಣ ಮುಂತಾದ ಸೌಕರ್ಯಗಳನ್ನು ಗ್ರಾಮಸ್ಥರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.
ಬಸವರಾಜ ಹೆಗ್ಗನಾಯಕ
ಇಒ ತಾಪಂ ಗೋಕಾಕ
ಖನಗಾಂವ ಗ್ರಾಪಂ ಗೆ ಮಹಾತ್ಮ ಗಾಂಧಿ ಗ್ರಾಮ ಪುರಸ್ಕಾರ ದೊರೆತಿರುವದಕ್ಕೆ ಸಂತೋಷವಾಗಿದೆ. ಇದಕ್ಕೆ ಪ್ರೇರಣಾ ಶಕ್ತಿಯಾಗಿರುವ ಮಾಜಿ ಸಚಿವರಾಗಿರುವ ರಮೇಶ ಜಾರಕಿಹೊಳಿಯವರ ಮಾರ್ಗದರ್ಶನ ಸಲಹೆ ಸಹಕಾರ ಹಾಗೂ ಅವರ ನಾಯಕತ್ವದಲ್ಲಿ ನಾವು ಇನ್ನೂ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಈ ಭಾಗದ ಜನರಿಗೆ ಸರಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ತಲುಪಿಸಲು ಹಗಲಿರುಳು ಶ್ರಮಿಸುತ್ತೇವೆ.”
ಶ್ರೀದೇವಿ ಈಶ್ವರ ಪಾಟೀಲ
ಅಧ್ಯಕ್ಷರು ಗ್ರಾಪಂ ಖನಗಾಂವ