RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ಧರಣಿಯಲ್ಲಿ ಭಾಗವಹಿಸಿದ ಮುಖಂಡರುಗಳ ಮೇಲೆ ಪ್ರಕರಣ : ಅಶೋಕ ಪೂಜಾರಿ ಖಂಡನೆ

ಗೋಕಾಕ:ಧರಣಿಯಲ್ಲಿ ಭಾಗವಹಿಸಿದ ಮುಖಂಡರುಗಳ ಮೇಲೆ ಪ್ರಕರಣ : ಅಶೋಕ ಪೂಜಾರಿ ಖಂಡನೆ 

ಧರಣಿಯಲ್ಲಿ ಭಾಗವಹಿಸಿದ ಮುಖಂಡರುಗಳ ಮೇಲೆ ಪ್ರಕರಣ : ಅಶೋಕ ಪೂಜಾರಿ ಖಂಡನೆ

 

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 01:

 

 
ದಶಕಗಳಿಂದ ಗೃಹೋಪಯೋಗಿ ವಿದ್ಯುತ್ ಸೌಲಭ್ಯದಿಂದ ವಂಚಿತರಾಗಿರುವ ಗೋಕಾಕ ಪಾಲ್ಸದ ದನದ ಓಣಿಯ ಸುಮಾರು 500 ಮನೆಗಳಿಗೆ ಸರಕಾರದ ಸೌಭಾಗ್ಯ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವ ಮಂಜೂರಾದ ಯೋಜನೆಯನ್ನು ಕೂಡಲೇ ಅನುಷ್ಠಾನಕ್ಕೆ ತರಲು ಆಗ್ರಹಿಸಿ ಪೋಲೀಸ್ ಇಲಾಖೆಯ ಅನುಮತಿಯೊಂದಿಗೆ ಗೋಕಾಕ ಪಾಲ್ಸದಿಂದ ನಗರದ ತಹಶೀಲ್ದಾರ ಕಾರ್ಯಾಲಯದವರೆಗೆ ಪಾದಯಾತ್ರೆಯಲ್ಲಿ ಆಗಮಿಸಿ ಶಾಂತರೀತಿಯಿಂದ ಧರಣಿ ಸತ್ಯಾಗ್ರಹ ನಡೆಸಿ ತಹಶೀಲ್ದಾರರಿಗೆ ಮನವಿ ಅರ್ಪಿಸಿದ ಧನದ ಓಣಿಯ ನಿವಾಸಿಗಳು ಹಾಗೂ ಅವರನ್ನು ಬೆಂಬಲಿಸಿ ಧರಣಿಯಲ್ಲಿ ಭಾಗವಹಿಸಿದ ಮುಖಂಡರುಗಳ ಮೇಲೆ ಗೋಕಾಕ ಶಹರ ಪಿ.ಎಸ್.ಐ. ಅವರು ಅಫರಾದ ದಂಡ ಪ್ರಕ್ರಿಯೆ ಸಂಹಿತೆ ಕಲಂ 107 ರನ್ವಯ ಕ್ರಮಕೈಗೊಳ್ಳಲು ಅವರ ವರದಿ ನಂ 135/2019 ದಿ. 28-09-2019 ರಂದು ತಹಶೀಲ್ದಾರ ಗೋಕಾಕ ಇವರಿಗೆ ವರದಿ ಸಲ್ಲಿಸಿರುವ ಕ್ರಮ ಖಂಡನೀಯವಾಗಿದೆ ಎಂದು ಬಿ.ಜೆ.ಪಿ. ಮುಖಂಡ ಅಶೋಕ ಪೂಜಾರಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪಾದಯಾತ್ರೆ ಮತ್ತು ಧರಣಿ ಸತ್ಯಾಗ್ರಹದ ಯಾವುದೇ ಹಂತದಲ್ಲಿ ಧರಣಿ ನಿರತರು ಕಾನೂನಿನ ಚೌಕಟ್ಟು ಮೀರಿ ವರ್ತಿಸಿಲ್ಲ. ಅಂದು ಕಾನೂನಿಗೆ ವ್ಯತಿರಿಕ್ತವಾಗಿ ಪಾದಯಾತ್ರೆ ಮತ್ತು ಧರಣಿ ಸತ್ಯಾಗ್ರಹವನ್ನು ಕೆಡಿಸುವ ಉದ್ದೇಶದಿಂದ ಭಯದ ವಾತಾವರಣ ನಿರ್ಮಿಸಿ ಧರಣಿ ನಿರತರ ಮೇಲೆ ಆಕ್ರಮಣ ನಡೆಸುವ ಸನ್ನಾಹದಲ್ಲಿದ್ದ ಸಮಾಜಗಾತುಕ ಶಕ್ತಿಗಳನ್ನು ಅಂದು ಪೋಲೀಸರು ನಿರ್ಧಾಕ್ಷಣ್ಯವಾಗಿ ಹತ್ತಿಕ್ಕಬೇಕಾಗಿತ್ತು. ಆದರೆ ಸ್ಥಳೀಯ ರಾಜಕೀಯ ಶಕ್ತಿಯ ನಿರಂತರ ಒತ್ತಡಕ್ಕೆ ಒಳಗಾಗಿದ್ದ ಪೋಲೀಸ್ ಇಲಾಖೆಯ ಅಧಿಕಾರಿಗಳು ಅನಿವಾರ್ಯವಾಗಿ ಸಮಾಜಘಾತುಕ ಶಕ್ತಿಗಳ ಮೇಲೆ ನಿರ್ಧಾಕ್ಷಣ್ಯ ಕ್ರಮಕೈಗೊಳ್ಳಲು ಹಿಂದೇಟು ಹಾಕುವಂತಾಗಿತ್ತು. ದಿ. 16 ರಂದು ತಹಶೀಲ್ದಾರ ಕಾರ್ಯಾಲಯದ ಮುಂದೆ ನಡೆದ ಘಟನೆ ಗೋಕಾಕ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನೇ ಪ್ರಶ್ನಿಸುವಂತಾಗಿತ್ತು ಎಂದು ಖೇದ ವ್ಯಕ್ತ ಪಡಿಸಿರುವ ಅವರು ಕಾನೂನಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವ ಸಮಾಜಘಾತುಕ ವ್ಯಕ್ತಿಗಳ ಮೇಲೆ ಮಾತ್ರ ಕ್ರಮಕೈಗೊಳ್ಳಬೇಕಾದ ಪೋಲೀಸ್ ಇಲಾಖೆಯ ಅಧಿಕಾರಿಗಳು ಕಾನೂನು ಬದ್ಧವಾಗಿ ನ್ಯಾಯಯುತವಾದ ಹೋರಾಟ ಮಾಡುವ ಸಾಮಾಜಿಕ ಕಾರ್ಯಕರ್ತರ ಮೇಲೆ ಕೇಸ್ ನಮೂದಿಸಿ ಸನ್ನಡತೆಯ ಪತ್ರ ಬರೆಸಿಕೊಳ್ಳಲು ಸೂಚಿಸುವದು ಎಲ್ಲಿಯ ನ್ಯಾಯ? ಎಂದು ಗೋಕಾಕ ಪೋಲೀಸ್ ಇಲಾಖೆಯ ಕಾರ್ಯವೈಖರಿಯನ್ನೇ ಪ್ರಶ್ನಿಸಿದ್ದಾರೆ.
ಇದೇ ಕಾರಣದಿಂದ ನಗರದಲ್ಲಿ ಇರುವ ಪೋಲೀಸ್ ಇಲಾಖೆಯ ಕಾರ್ಯವೈಖರಿಯ ಸಂಧಿಗ್ಧ ಪರಿಸ್ಥಿತಿಯನ್ನು ಹಾಗೂ ಇಡೀ ಪೋಲೀಸ್ ಇಲಾಖೆಯನ್ನೇ ನಿಯಂತ್ರಿಸುತ್ತಿರುವ ರಾಜಕೀಯ ಶಕ್ತಿಯ ಕರಾಳ ಪರಿಸ್ಥಿತಿಯನ್ನು ಜಿಲ್ಲೆಯ ವರಿಷ್ಠ ಪೋಲೀಸ್ ಅಧಿಕಾರಿಗಳ ಗಮನಕ್ಕೆ ತಂದು ಮುಂದಿನ ದಿನಗಳಲ್ಲಿ ಪೋಲೀಸ್ ಇಲಾಖೆ ನಿಷ್ಪಕ್ಷಪಾತದಿಂದ ನಡೆಯುವಂತೆ ಸೂಕ್ತ ಕ್ರಮಕೈಗೊಳ್ಳಲು ಆಗ್ರಹಿಸಿ ಬುಧವಾರ ದಿ: 02-10-2019 ರಂದು ಮುಂ: 11-00 ಗಂಟೆಗೆ ಹೋರಾಟಗಾರರ ಪರವಾಗಿ ಉತ್ತರ ವಲಯದ ಪೋಲೀಸ್ ಮಹಾನಿರೀಕ್ಷಕರು ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವದು ಎಂದು ತಿಳಿಸಿದ್ದಾರೆ.

Related posts: