RNI NO. KARKAN/2006/27779|Thursday, November 7, 2024
You are here: Home » breaking news » ಗೋಕಾಕ:ನೆರೆ ಸಂತ್ರಸ್ತರಿಗೆ ಪರಹಾರ ನೀಡುವಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ವಿಫಲವಾಗಿದೆ : ಮಾಜಿ ಶಾಸಕ ಕೋನರೆಡ್ಡಿ ಆರೋಪ

ಗೋಕಾಕ:ನೆರೆ ಸಂತ್ರಸ್ತರಿಗೆ ಪರಹಾರ ನೀಡುವಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ವಿಫಲವಾಗಿದೆ : ಮಾಜಿ ಶಾಸಕ ಕೋನರೆಡ್ಡಿ ಆರೋಪ 

ನೆರೆ ಸಂತ್ರಸ್ತರಿಗೆ ಪರಹಾರ ನೀಡುವಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ವಿಫಲವಾಗಿದೆ : ಮಾಜಿ ಶಾಸಕ ಕೋನರೆಡ್ಡಿ ಆರೋಪ

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 1:

 

ನೆರೆ ಸಂತ್ರಸ್ತರಿಗೆ ಪರಹಾರ ನೀಡುವಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ವಿಫಲವಾಗಿದೆ ಎಂದು ಜೆಡಿಎಸ್ ಮುಖಂಡ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಆರೋಪಿಸಿದರು
ಮಂಗಳವಾರದಂದು ನಗರದ ಖಾಸಗಿ ಹೋಟೆಲನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು
ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಬಹುಭಾಗ ಅತಿವೃಷ್ಟಿಯಿಂದ ಹಾನಿಯಾಗಿ ಸಾವಿರಾರು ಜನ ಮನೆಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ ಅವರ ನೆರವಿಗೆ ದಾವಿಸಿ ಅವರ ಬದುಕನ್ನು ಕಟ್ಟ ಕೋಡಬೇಕಾದ ಸರಕಾರಗಳು ಇಂದು ಈ ಭಾಗದ ಜನರಿಗೆ ಮಲತಾಯಿ ಧೋರಣೆ ತೋರುತ್ತಿರುವದು ಸಮಂಜಸವಲ್ಲ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ನೆರೆ ತುತ್ತಾಗಿ ಮನೆಗಳನ್ನು ಕಳೆದುಕೊಂಡ ಕುಟುಂಬಗಳಿಗೆ ತಕ್ಷಣದಲ್ಲಿ 1 ಲಕ್ಷ ಪರಿಹಾರ ಕೋಡುವದಾಗಿ ಘೋಷಿಸಿ ಇಂದು ಬರಿ 25 ಸಾವಿರ ರೂಪಾಯಿಗಳ ಮೊತ್ತವನ್ನು ಕೋಡುವದಾಗಿ ಹೇಳಿ ಮಾತು ತಪ್ಪುತ್ತಿದ್ದಾರೆ ಅವರದ್ದೆ ಸರಕಾರ ಕೇಂದ್ರದಲ್ಲಿ ಇದ್ದರು ಸಹ ಕೇಂದ್ರದಿಂದ ಸೂಕ್ತ ಪರಿಹಾರ ಕೋಡಿಸುವಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ವಿಫಲವಾಗಿದ್ದಾರೆ ಎಂದು ವ್ಯಂಗವಾಡಿದ ಅವರು ಕೇಂದ್ರ ಸರಕಾರ ಅತಿವೃಷ್ಟಿ ಉಂಟಾದ ಪ್ರದೇಶಗಳಿಗೆ ಅಧ್ಯಯನ ತಂಡ ಕಳುಹಿಸಿ ಅವರ ವರದಿಯನ್ನು ಪಡೆದರು ಸಹ ಅದನ್ನು ಮತ್ತೊಮ್ಮೆ ಪರಿಶೀಲಿಸಲು ಹೇಳಿರುವದು ದುರಾದೃಷ್ಟವಾಗಿದೆ ಹಿಂದೆ ಕೇಂದ್ರದ ಅಧ್ಯಯನ ತಂಡಗಳು ಒಪ್ಪಿಸಿದ ವರದಿಗಳ ಆಧಾರಗಳ ಮೇಲೆ ಪರಿಹಾರ ನೀಡಲಾಗುತ್ತಿತ್ತು ಆದರೆ ಈ ಸರಕಾರ ಆ ಕೆಲಸಕ್ಕೆ ಕೈ ಹಾಕದಿರುವದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದರು

ಕೊಡಗು ಮಾದರಿಯಲ್ಲಿ ಪರಿಹಾರ ನೀಡಲಿ : ಹಿಂದೆ ಜೆಡಿಎಸ್ ಸರಕಾರ ಅಧಿಕಾರದಲ್ಲಿದ್ದಾಗ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೊಡಗಿನಲ್ಲಿ ಅತಿವೃಷ್ಟಿ ಉಂಟಾದ ಸಂದರ್ಭದಲ್ಲಿ ತಕ್ಷಣ ನೆರವಿಗೆ ದಾವಿಸಿ ಮನೆ ಕಳೆದುಕೊಂಡವರಿಗೆ 10 ಲಕ್ಷ ಪರಿಹಾರ ವಿತರಿಸಿ ನೆರೆ ಸಂತ್ರಸ್ತರ ಬದುಕನ್ನು ಕಟ್ಟಲು ಸಹಕಾರಿಯಾಗಿತ್ತು ಆದರೆ ಇಂದಿನ ಬಿಜೆಪಿ ಸರಕಾರ ಪರಿಹಾರ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು

ಸರ್ವ ಪಕ್ಷಗಳ ನಿಯೋಗ ಒಯ್ಯಲ್ಲಿ : ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೇಂದ್ರ ಸರಕಾರವನ್ನು ಮನವರಿಕೆ ಮಾಡಲು ಹೆದರಿಕೆ ಉಂಟಾದರೆ ಸರ್ವ ಪಕ್ಷಗಳ ನಿಯೋಗ ಕರೆದುಕೊಂಡು ಹೋಗಿ ಪ್ರಧಾನಮಂತ್ರಿ ಮೋದಿ ಅವರಿಗೆ ಮನವರಿಕೆ ಮಾಡಲಿ ಅದನ್ನು ಬಿಟ್ಟು ಬಿಜೆಪಿ ಪಕ್ಷದ ಆತಂರಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕಾಲ ಹರಣ ಮಾಡುವದು ಸರಿಯಲ್ಲ ವೆಂದು ಛಾಟಿ ಬಿಸಿದರು

ಉಪ ಚಃನಾವಣೆಗೆ ಸ್ವತಂತ್ರ ಸ್ವರ್ಧೆ : ಬರುವ ದಿನಗಳಲ್ಲಿ ಗೋಕಾಕ ಮತಕ್ಷೇತ್ರಕ್ಕೆ ಜರಗುವ ಉಪ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗುವದು ಆ ಸಂಬಂಧ ಪಕ್ಷದ ಸ್ಥಳೀಯ ಮುಖಂಡರ ಅಭಿಪ್ರಾಯಗಳನ್ನು ಸಂಗ್ರಹಿಸಲು ಸಭೆ ಆಯೋಜಿಸಲಾಗಿದೆ ಸಭೆಯಲ್ಲಿ ಚರ್ಚೆಯಾದ ವಿಷಯಗಳನ್ನು ಪಕ್ಷದ ವರಿಷ್ಠರ ಗಮನಕ್ಕೆ ತಂದು ಸೂಕ್ತ ಅಭ್ಯರ್ಥಿಯನ್ನು ಉಪ ಚುನಾವಣೆ ನಿಲ್ಲಿಸಲಾಗುವದು ಎಂದು ಹೇಳಿದರು. ಈಗಾಗಲೇ ಪಕ್ಷದ ವರಿಷ್ಠ ಎಚ್.ಡಿ.ದೇವೆಗೌಡ ಅವರು ಬಿಜೆಪಿಯ ಅಶೋಕ ಪೂಜಾರಿ ಅವರನ್ನು ಸಂಪರ್ಕಿಸಿ ಜೆಡಿಎಸ್ ಪಕ್ಷದಿಂದ ಟಿಕೆಟ್ ನೀಡುವುದಾಗಿ ಆಶ್ವಾಸನೆ ನೀಡಿದ್ದಾರೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಆ ಕುರಿತು ಇನ್ನೂ ಯಾವುದೇ ನಿರ್ಧಾರವಾಗಿಲ್ಲ ಅಶೋಕ ಪೂಜಾರಿ ಅವರು ಮೊದಲು ಜೆಡಿಎಸ್ ಪಕ್ಷದಲ್ಲಿ ಇದ್ದು ಪಕ್ಷವನ್ನು ಸಂಘಟಿಸಿದವರು ಆ ಕಾರಣಕ್ಕಾಗಿ ದೇವೆಗೌಡ ಅವರು ಮಾತನಾಡಿರ ಬಹುದು ಆದರೆ ಇನ್ನುವರೆಗೂ ಯಾವುದೇ ನಿರ್ಧಾರ ವಾಗಿಲ್ಲ ಸ್ಥಳೀಯ ಮುಖಂಡರ ಅಭಿಪ್ರಾಯ ಪಡೆದು ಪಕ್ಷದ ವರಿಷ್ಠರಿಗೆ ತಿಳಿಸಲಾಗುವದು ಎಂದು ಮಾಜಿ ಶಾಸಕ ಕೋನರೆಡ್ಡಿ ಹೇಳಿದರು

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರುಗಳಾದ ಶಂಕರ ಮಾಡಲಗಿ, ಪ್ರಕಾಶ ಸೋನವಾಲ್ಕರ, ಎಲ್.ಬಿ.ಹುಳ್ಳೇರ, ಪಿ.ಎಂ ಪಾಟೀಲ, ಸತೀಶ ಒಂಟಗುಡಿ, ಎಸ್,ಎಂ.ಮುಲ್ಲಾ ,ಗುರು ಹುಳ್ಳೇರ ಸೇರಿದಂತೆ ಅನೇಕರು ಇದ್ದರು

Related posts: