RNI NO. KARKAN/2006/27779|Wednesday, December 18, 2024
You are here: Home » Others » ಸಾಹಿತಿ ಸುರಕೋಡ ಅವರಿಗೆ ರಾಮದುರ್ಗದಲ್ಲಿಯೇ ಪ್ರಶಸ್ತಿ ವಿತರಿಸಲಿ:: ಸುರಕೋಡ ಅವರಿಗೆ ಸನ್ಮಾನಿಸದ ಕರವೇ ಅಧ್ಯಕ್ಷ ಖಾನಪ್ಪನವರ ಆಗ್ರಹ

ಸಾಹಿತಿ ಸುರಕೋಡ ಅವರಿಗೆ ರಾಮದುರ್ಗದಲ್ಲಿಯೇ ಪ್ರಶಸ್ತಿ ವಿತರಿಸಲಿ:: ಸುರಕೋಡ ಅವರಿಗೆ ಸನ್ಮಾನಿಸದ ಕರವೇ ಅಧ್ಯಕ್ಷ ಖಾನಪ್ಪನವರ ಆಗ್ರಹ 

ಸಾಹಿತಿ ಸುರಕೋಡ ಅವರಿಗೆ ರಾಮದುರ್ಗದಲ್ಲಿಯೇ ಪ್ರಶಸ್ತಿ ವಿತರಿಸಲಿ:: ಸುರಕೋಡ ಅವರಿಗೆ ಸನ್ಮಾನಿಸದ ಕರವೇ ಅಧ್ಯಕ್ಷ ಖಾನಪ್ಪನವರ ಆಗ್ರಹ
ಗೋಕಾಕ ಮೆ-03 : ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಪ್ರತಿಷ್ಠಿತ ಪ್ರೊ. ಕೆ.ಜಿ. ಕುಂದಣಗಾರ ಗಡಿನಾಡು ಸಾಹಿತ್ಯ ಪ್ರಶಸ್ತಿ ಪಡೆದ ಜಿಲ್ಲೆಯ ಪ್ರೇಮ ಲೋಕದ ಮಾಯಾವಿ ಕೃತಿ ಖ್ಯಾತಿಯ ಸಾಹಿತಿ ಶ್ರೀ ಹಸನ್ ನಹೀಮ ಸುರಕೋಡ ಅವರಿಗೆ ಸಂಸ್ಕøತಿ ಇಲಾಖೆ ರಾಮದುರ್ಗದಲ್ಲಿಯೇ ಪ್ರಶಸ್ತಿ ವಿತರಿಸುವ ಕಾರ್ಯ ಮಾಡಲಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಅಧ್ಯಕ್ಷ ಬಸವರಾಜ ಖಾನಪ್ಪನವರ ಆಗ್ರಹಿಸಿದ್ದಾರೆ.
ಅವರು ಪ್ರೊ. ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತಿ ಪ್ರಶಸ್ತಿ ಪಡೆದ ರಾಮದುರ್ಗದ ಸಾಹಿತಿ ಶ್ರೀ ಹಸನ ನಹೀಮ ಸುರಕೋಡ ಅವರ ಮನೆಗೆ ಭೇಟಿ ನೀಡಿ ಅವರನ್ನು ಸತ್ಕರಿಸಿ ಮಾತನಾಡಿದರು.
ಕನ್ನಡ, ಹಿಂದಿ, ಇಂಗ್ಲೀಷ ಮತ್ತು ಉರ್ದು ಭಾಷೆಗಳಲ್ಲಿ ಪರಿಣಿತರಾಗಿರುವ ಹಸನ ಸುರಕೋಡ ಅವರು ಸಮಾಜವಾದಿ ಚಿಂತನೆಗಳನ್ನು ಕನ್ನಡಕ್ಕೆ ತಂದ ಕೀರ್ತಿಗೆ ಭಾಜನರಾಗಿದ್ದಾರೆ. ಕೋಮು ಸೌಹಾರ್ದದ ನೆಲೆಗಳನ್ನು ಬಿಂಬಿಸುವ ಹಲವಾರು ಬರಹಗಳು ಇವರಿಂದ ಕನ್ನಡಕ್ಕೆ ಅನುವಾದಿತವಾಗಿವೆ.
ಉರ್ದು ಭಾಷೆಯ ಮಹಾಕವಿ ಪೈಜಅಹ್ಮದ ಪೈ ಅವರ ಕಾವ್ಯ ಮತ್ತು ಬದುಕು, ಮಂಟೋ ಅವರ ಕಥನ ಕೃತಿಗಳು, ಅಮೃತಾ ಪ್ರೀತಂ ಅವರ ಆತ್ಮಕತೆ ಹಾಗೂ ಅಸ್ಗರಅಲಿ ಇಂಜಿನೀಯರ್ ಅವರ ವೈಚಾರಿಕ ಬರಹಗಳ ಹಾಗೂ ರಾಮಮನೋಹರ ಲೋಹಿಯಾ ಜೀವನ ಚರಿತ್ರೆಯನ್ನು ಕನ್ನಡಕ್ಕೆ ಅನುವಾದಿಸಿದ ಕೀರ್ತಿ ಇವರದು. ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಇವರಿಗೆ ಕುವೆಂಪು ಭಾಷಾ ಭಾರತಿ, ಪ್ರಾಧಿಕಾರದ ಗೌರವ ಪ್ರಶಸ್ತಿ ಸೇರಿದಂತೆ ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ. ಇಂತಹ ಖ್ಯಾತ ಬರಹಗಾರ ಹಸನ ನಹೀಮ ಸುರಕೋಡ ಅವರಿಗೆ ಈ ಬಾರಿಯ ಪ್ರೊ. ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ ಲಭಿಸಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯ.
67 ವರ್ಷದ ಸುರಕೋಡರವರು ಪ್ರಸ್ತುತ ಅನಾರೋಗ್ಯಪೀಡಿತರಾಗಿರುವದರಿಂದ ಬೆಂಗಳೂರಿಗೆ ಹೋಗಿ ಪ್ರಶಸ್ತಿ ಸ್ವೀಕರಿಸುವಷ್ಟು ಸಶಕ್ತರಾಗಿಲ್ಲ. ಆದ್ದರಿಂದ ಸರಕಾರ ಇವರಿಗೆ ರಾಮದುರ್ಗದಲ್ಲಿಯೇ ಪ್ರಶಸ್ತಿ ವಿತರಿಸಿ ಗೌರವ ಸಲ್ಲಿಸಬೇಕೆಂದು ಕ.ರ.ವೇ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಅವರು ಕನ್ನಡ ಮತ್ತು ಸಂಸ್ಕøತಿ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಕ.ರ.ವೇ ರಾಮದುರ್ಗ ತಾಲೂಕಾಧ್ಯಕ್ಷ ಜ್ಞಾನೇಶ್ವರ (ಜೆ.ಬಿ.ಎಂ) ಸಾಧಿಕ ಹಲ್ಯಾಳ , ಪತ್ರಕರ್ತ ವಿರೇಂದ್ರ ಪತಕಿ, ಮುಗುಟ ಪೈಲವಾನ, ಫಕೀರಪ್ಪ ಗಣಾಚಾರಿ ಉಪಸ್ಥಿತರಿದ್ದರು.

Related posts: