RNI NO. KARKAN/2006/27779|Wednesday, November 6, 2024
You are here: Home » breaking news » ಗೋಕಾಕ:ಗೋಕಾಕ ಜಿಲ್ಲೆಗಾಗಿ ಉಪ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರ ಸೂಕ್ತವಾಗಿದೆ : ಬಸವರಾಜ ಖಾನಪ್ಪನವರ

ಗೋಕಾಕ:ಗೋಕಾಕ ಜಿಲ್ಲೆಗಾಗಿ ಉಪ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರ ಸೂಕ್ತವಾಗಿದೆ : ಬಸವರಾಜ ಖಾನಪ್ಪನವರ 

ಗೋಕಾಕ ಜಿಲ್ಲೆಗಾಗಿ ಉಪ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರ ಸೂಕ್ತವಾಗಿದೆ : ಬಸವರಾಜ ಖಾನಪ್ಪನವರ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 3 :

 

 

ಗೋಕಾಕ ಜಿಲ್ಲೆಯನ್ನಾಗಿಸಲು ಬುಧವಾರದಂದು ನಗರದ ಶೂನ್ಯ ಸಂಪಾದನ ಮಠದಲ್ಲಿ ನಡೆದ ಸಭೆಯಲ್ಲಿ ಚರ್ಚೆಯಾದಂತೆ ಬರುವ ಉಪ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರ ಸೂಕ್ತವಾಗಿದ್ದು , ಮತಕ್ಷೇತ್ರದ ಜನರು ಜಿಲ್ಲೆಗಾಗಿ ಪಕ್ಷ ಭೇದ ಮರೆತು ಈ ನಿರ್ಧಾರವನ್ನು ಬೆಂಬಲಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಸಾರ್ವನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಗೋಕಾಕ ಜಿಲ್ಲೆಗಾಗಿ ಆಗ್ರಹಿಸಿ ಸುಮಾರು ದಶಕಗಳಿಂದ ಹೋರಾಟಗಳು ನಡೆಸುತಾ ಬಂದರು ಸಹ ಇದುವರೆಗೆ ಯಾವುದೇ ಸರಕಾರಗಳು ಇದಕ್ಕೆ ಸ್ವಂದಿಸಿಲ್ಲ ಆದ್ದರಿಂದ ಈ ಉಗ್ರ ನಿರ್ಧಾರ ಕೈಗೋಳುವ ಮೂಲಕ ಸರಕಾರಕ್ಕೆ ಛಾಟಿ ಬಿಸಬೇಕಾಗಿದೆ ಅಂದಾಗ ಮಾತ್ರ ಜಿಲ್ಲಾ ಹೋರಾಟಕ್ಕೆ ಮಹತ್ವ ಬರಲು ಸಾಧ್ಯವಾಗಿದೆ ಆ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚೆಯಾದಂತೆ ಎಲ್ಲರೂ ಒಗ್ಗಟಿನಿಂದ ಉಪ ಚುನಾವಣೆಯನ್ನು ಬಹಿಷ್ಕರಿಸಲು ಒಮ್ಮತದಿಂದ ನಿರ್ಧರಿಸಬೇಕು ಮತ್ತು ತಾಲೂಕಿನ ಎಲ್ಲ ಸ್ಥಳೀಯ ಚುನಾಯಿತ ಪಪಂ,ಜಿಪಂ,ತಾಪಂ,ಗ್ರಾಪಂ,ಮತ್ತು ನಗರಸಭೆಗೆ ಚುನಾಯಿತರಾದವರು ಮತ್ತು ಸರಕಾದ ಅಧೀನದಲ್ಲಿರುವ ಎಲ್ಲ ಸಂಂಘ ಸಂಸ್ಥೆಗಳ ಜನಪ್ರತಿನಿಧಿಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ಪ್ರಕಟಿಸಿ ಜಿಲ್ಲಾ ಹೋರಾಟವನ್ನು ಬೆಂಬಲಿಸುವ ಕಠಿಣ ನಿರ್ಧಾರ ಕೈಕೋಳಬೇಕಾಗಿದೆ ಆಂದಾಗ ಮಾತ್ರ ಸರಕಾರ ಈ ವಿಷಯವನ್ನು ಗಂಭೀರವಾಗಿ ತಗೆದುಕೋಳ್ಳಲು ಸಾಧ್ಯ ಎಂದಿರುವ ಖಾನಪ್ಪನವರ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಪ್ರಬಲ್ಯವನ್ನು ಹೊಂದಿರುವ ಜಾರಕಿಹೊಳಿ ಸಹೋದರರು ಸರಕಾರದ ಮೇಲೆ ಒತ್ತಡ ಹೇರಿ ಗೋಕಾಕ ನೂತನ ಜಿಲ್ಲೆಯನ್ನಾಗಿಸಲು ಮುಂಚೂಣಿಯಲ್ಲಿ ಇರಬೇಕೆಂದು ಖಾನಪ್ಪನವರ ಮನವಿ ಮಾಡಿಕೊಂಡಿದ್ದಾರೆ.

Related posts: