RNI NO. KARKAN/2006/27779|Saturday, October 19, 2024
You are here: Home » breaking news » ಬೆಳಗಾವಿ :ಬೆಳಗಾವಿ ಜಿಲ್ಲಾ ವಿಭಜನೆ ಪ್ರಸ್ತಾವಣೆ ಸದ್ಯಕ್ಕೆ ಸರ್ಕಾರದ ಮುಂದಿಲ್ಲ : ಮುಖ್ಯಮಂತ್ರಿ ಯಡಿಯೂರಪ್ಪ

ಬೆಳಗಾವಿ :ಬೆಳಗಾವಿ ಜಿಲ್ಲಾ ವಿಭಜನೆ ಪ್ರಸ್ತಾವಣೆ ಸದ್ಯಕ್ಕೆ ಸರ್ಕಾರದ ಮುಂದಿಲ್ಲ : ಮುಖ್ಯಮಂತ್ರಿ ಯಡಿಯೂರಪ್ಪ 

ಬೆಳಗಾವಿ ಜಿಲ್ಲಾ ವಿಭಜನೆ ಪ್ರಸ್ತಾವಣೆ ಸದ್ಯಕ್ಕೆ ಸರ್ಕಾರದ ಮುಂದಿಲ್ಲ : ಮುಖ್ಯಮಂತ್ರಿ ಯಡಿಯೂರಪ್ಪ

 
ನಮ್ಮ ಬೆಳಗಾವಿ ಇ – ವಾರ್ತೆ ಬೆಳಗಾವಿ ಅ 3 :

 
ಬೆಳಗಾವಿ ಜಿಲ್ಲಾ ವಿಭಜನೆ ಪ್ರಸ್ತಾವಣೆ ಸದ್ಯಕ್ಕೆ ಸರ್ಕಾರದ ಮುಂದಿಲ್ಲ.ಒಂದು ವೇಳೆ ಹೊಸ ಜಿಲ್ಲೆಗಳ ರಚನೆ ಸಂದರ್ಭದಲ್ಲಿ ಗೋಕಾಕನ್ನು ಜಿಲ್ಲಾ ಕೇಂದ್ರವನ್ನಾಗಿ ಪರಿಗಣಿಸುವ ಭರವಸೆಯನ್ನು ಮುಖ್ಯಮಂತ್ರಿ ಬಿ.ಎಸ. ಯಡಿಯೂರಪ್ಪ ಅವರು ನೀಡಿದರು.
ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಗೋಕಾಕ ಜಿಲ್ಲೆಗೆ ಆಗ್ರಹಿಸಿ ನಿಯೋಜಿತ ಗೋಕಾಕ ಜಿಲ್ಲಾ ರಚನಾ ಹೋರಾಟ ಸಮಿತಿಯವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಅರ್ಪಿಸಿದ ಸಂದರ್ಭದಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು ರಾಜ್ಯದಲ್ಲಿ ಹೊಸ ಜಿಲ್ಲೆಗಳ ರಚನೆಯನ್ನು ಅಲ್ಲಗೆಳೆದರು.
ಬೆಳಗಾವಿ ಜಿಲ್ಲೆಯ ಗೋಕಾಕ ಹಾಗೂ ಚಿಕ್ಕೋಡಿ ತಾಲೂಕಿನವರು ಹೊಸ ಜಿಲ್ಲೆಗಾಗಿ ಹೋರಾಟ ನಡೆಸುತ್ತ ಬಂದಿದ್ದಾರೆ. ಕಳೆದ 30 ವರ್ಷಗಳಿಂದ ಜಿಲ್ಲೆಯಲ್ಲಿಯೇ ದೊಡ್ಡದಾಗಿರುವ ಗೋಕಾಕನ್ನು ಹೊಸ ಜಿಲ್ಲೆಯನ್ನಾಗಿ ಮಾಡುವ ಕೂಗು ನಿರಂತರವಾಗಿ ಕೇಳಿ ಬರುತ್ತಿದೆ. ಒಂದು ವೇಳೆ ಬೆಳಗಾವಿ ಜಿಲ್ಲೆಯನ್ನು ವಿಭಜಿಸುವ ಪ್ರಸ್ತಾಪ ಬಂದರೆ ಗೋಕಾಕಕ್ಕೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು. ಸದ್ಯಕ್ಕಂತು ನಮ್ಮ ಮುಂದೆ ಹೊಸ ಜಿಲ್ಲೆಗಳ ರಚನೆ ಇಲ್ಲ. ಅಲ್ಲದೆ ಬೆಳಗಾವಿಯನ್ನು ವಿಂಗಡಿಸುವ ಪ್ರಸ್ತಾಪ ಇಲ್ಲವೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಹೋರಾಟ ಸಮಿತಿ ಮುಖಂಡರಾದ ಎಸ್.ಎ.ಕೋತವಾಲ, ಬಸಗೌಡ ಪಾಟೀಲ, ಅಶೋಕ ಪೂಜಾರಿ, ಈರಪ್ಪಾ ಕಡಾಡಿ, ಡಾ. ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ಜೆ.ಎಚ್. ಪಟೇಲರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ಮತ್ತು ಚಿಕ್ಕೋಡಿ ಹೊಸ ಜಿಲ್ಲೆಗಳನ್ನಾಗಿ ಘೋಷಿಸಿ ಆದೇಶ ಹೊರಡಿಸಿದ್ದರು. ಆದರೆ ಕೆಲ ರಾಜಕೀಯ ಪಿತೂರಿಯಿಂದ ಜಿಲ್ಲೆಯೂ ಯಥಾಪ್ರಕಾರವಾಗಿ ವಿಭಜನೆಗೊಳ್ಳದೆ ಈಗಲೂ ಮುಂದುವರೆದಿದೆ. ಬೆಳಗಾವಿ ಜಿಲ್ಲೆಯಲ್ಲಿಯೇ ಗೋಕಾಕ ನಗರ ಅತಿದೊಡ್ಡದಾಗಿದೆ. ವಾಸುದೇವ ರಾವ, ಹುಂಡೇಕಾರ ಹಾಗೂ ಗದ್ದಿಗೌಡರ ನೇತೃತ್ವದ ಜಿಲ್ಲಾ ಪನರಃ ವಿಂಗಡಣಾ ಆಯೋಗವು ಗೋಕಾಕನ್ನು ಜಿಲ್ಲಾ ಕೇಂದ್ರಕ್ಕೆ ಶೀಫಾರಸ್ಸು ಮಾಡಿದೆ. ಆಡಳಿತಾತ್ಮಕ ದೃಷ್ಠಿಯಿಂದ ಗೋಕಾಕನ್ನು ಜಿಲ್ಲಾ ಕೇಂದ್ರವನ್ನಾಗಿ ಪರಿವರ್ತಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡರು.
ಬೆಳಗಾವಿ ಜಿಲ್ಲೆಯನ್ನು ವಿಭಜಿಸಿದರೆ ಕನ್ನಡ ಭಾಷೆಗೆ ಯಾವುದೇ ಅನ್ಯಾಯವಾಗುವುದಿಲ್ಲ. ಈ ಬಗ್ಗೆ ಜಿಲ್ಲಾ ವಿಭಜನೆಗೆ ಕೆಲ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿರುವುದು ವಿಷಾಧಕರ ಸಂಗತಿ. ಗಡಿ ಸಮಸ್ಯೆಗೂ ಯಾವುದೇ ಧಕ್ಕೆ ಬರುವುದಿಲ್ಲ ಕನ್ನಡಿಗರ ಸಂಖ್ಯೆ ಕಡಿಮೆಯಾಗುತ್ತದೆ ಎನ್ನುವುದಕ್ಕೆ ಯಾವುದೇ ಆಧಾರÀವಿಲ್ಲ. ಕನ್ನಡಪರ ಹೋರಾಟದಲ್ಲಿ ಇಡೀ ರಾಜ್ಯದ ಜನರು ಭಾಗವಹಿಸುತ್ತಾರೆ. ಜಿಲ್ಲಾ ವಿಂಗಡನೆಯಾದರೂ ನಾವೆಲ್ಲ ಸೇರಿಯೇ ಲೋಕಸಭಾ ಚುನಾವಣೆಯನ್ನು ಎದುರಿಸುತ್ತೇವೆ. ಜಿಲ್ಲಾ ವಿಂಗಡನೆ ಮಾಡಿದರೆ ಎಂಇಎಸ್ ಪ್ರಾಬಲ್ಯವಿರುವ ಪ್ರದೇಶಗಳು ಸಹಿತ ವಿಭಜನೆಗೆಗೊಳ್ಳುತ್ತೇವೆ. ಬೆಳಗಾವಿ ಸಮಸ್ಯೆಗೂ ಈ ಜಿಲ್ಲೆಯನ್ನು ವಿಂಗಡನೆ ಮಾಡುವುದಕ್ಕೂ ಯಾವುದೇ ಸಂಬಂದÀವಿಲ್ಲ. ಕೂಡಲೇ ಆಡಳಿತಾತ್ಮಕ ದೃಷ್ಠಿಯಿಂದ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕನ್ನು ಹೊಸ ಜಿಲ್ಲೆಯನ್ನಾಗಿ ಘೋಷಿಸುವಂತೆ ಮುಖ್ಯಮಂತ್ರಿಗಳಿಗೆ ಹೋರಾಟ ಸಮಿತಿಯ ಪ್ರಮುಖರು ಮನವರಿಕೆ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಮುಖಂಡರಾದ ಸಿದ್ದಲಿಂಗ ದಳವಾಯಿ, ಅಶೋಕ ಪಾಟೀಲ, ಸುಭಾಷ ಢವಳೇಶ್ವರ, ವಕೀಲರ ಸಂಘದ ಅದ್ಯಕ್ಷ ಉದಯ ಸಿಂಪಿ, ಹಿರಿಯ ನ್ಯಾಯವಾದಿ ಎಸ್. ಎಂ. ಹತ್ತಿಕಟಗಿ, ಎಂ.ಆರ್. ಬೋವಿ, ಎಸ್. ವ್ಹಿ. ದೇಮಶೆಟ್ಟಿ, ಶಿವಾನಂದ ಡೋಣಿ, ನಿಂಗಪ್ಪಾ ಫೀರೋಜಿ, ಪರಶುರಾಮ ಭಗತ್, ವೀರಣ್ಣಾ ಹೊಸುರ, ಕೆಂಚಗೌಡ ಪಾಟೀಲ, ಶಂಕರ ಬಿಳಕುಂದಿ, ವಿಠ್ಠಲ ಸವದತ್ತಿ, ಹಣಮಂತ ತೇರದಾಳ, ಮುತ್ತಪ್ಪಾ ಕುಳ್ಳೂರ, ಪರುಶೆಟ್ಟಿ, ಕನ್ನಡಪರ ಸಂಘಟನೆಗಳ ಬಸವರಾಜ ಖಾನಪ್ಪನವರ, ಕಿರಣ ಡಮಾಮಗರ, ಮುಂತಾದವರು ಉಪಸ್ಥಿತರಿದ್ದರು.

Related posts: