ಗೋಕಾಕ:ಚಿತ್ರಕಲಾವಿದ ಶ್ರೀ ಶಂಕರ ಮುಂಗರವಾಡಿ ಶೃಧ್ದಾಂಜಲಿ ಸಭೆ
ಚಿತ್ರಕಲಾವಿದ ಶ್ರೀ ಶಂಕರ ಮುಂಗರವಾಡಿ ಶೃಧ್ದಾಂಜಲಿ ಸಭೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ
ಸಾಮಾಜಿಕ ಪ್ರಜ್ಞೆಯಿಂದ ,ಸಾಹಿತ್ಯ ನಾಟಕ ಚಿತ್ರಕಲೆ ಹಾಗೂ ಸಾಂಸ್ಕ್ರತಿಕ ವ್ಯಕ್ತಿತ್ವ ಹೊಂದಿ ಚಿತ್ರಕಲಾವಿದ ಶಂಕರ ಮುಂಗರವಾಡಿ ಬಾಳಿದರು, ಎಂದು ಕಲಾವಿದ ,ಸಾಹಿತಿ, ಜಯಾನಂದ ಮಾದರ ಹೇಳಿದರು
ಅವರ ನಗರದ ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯದಲ್ಲಿ ಶನಿವಾರದಂದು ಹಮ್ಮಿಕೊಂಡಿದ್ದ, ಶೃದ್ದಾಂಜಲಿ ಸಭೆಯಲ್ಲಿ ಮಾತನಾಡುತ್ತಾ ಶಿಸ್ತಿನ ಶಿಕ್ಷಕರಾಗಿ ಸುಧೀರ್ಘ ಕಾಲದ ಸೇವೆ ಮಾಡಿದ ಧೀಮಂತ ಕಲಾವಿದರಾಗಿದ್ದರು, ಮತ್ತು ವಿದ್ಯಾರ್ಥಿಗಳಲ್ಲಿ ಘನ ವ್ಯಕ್ತಿತ್ವ ಬೆಳಸಿದ್ದರು.
ಅದ್ಯಾಪಕಿ ಮಲ್ಲಮ ದಳವಾಯಿ ನಿರೂಪಿಸಿದರು. ಮಲಕಾರಿ ನಂದಿಕುರಳಿ ಸ್ವಾಗತಿಸಿದರು, ಬಾಳಗೌಡ ಪಾಟೀಲ ವಂದಿಸಿದರು, ಯುವ ವಿದ್ಯಾರ್ಥಿಗಳಾದ ಸೈಯದ ಗಲಗಲಿ,
ನೇತ್ರವತಿ ಬೆಳಗಲಿ, ಪ್ರವೀಣ ಯಡ್ರಾಂವಿ, ಮುತ್ತವ್ವಾ ಪೂಜೇರಿ, ಸುಸ್ಮೀತಾ ಛಾಯಪ್ಪಗೋಳ,
ಸವಿತಾ ಪಡಿಮನಿ, ಸಿದ್ರಾಮ ರಾಜಾಪೂರ, ರೋಹಿತ ಗಸ್ತಿ, ಲಕ್ಕಪ್ಪ ಯಡ್ರಾಂವಿ ಮತ್ತಿತರರು ಉಪಸ್ಥಿತರಿದ್ದರು.