ಗೋಕಾಕ:ಸಾಮಾಜ ಸೇವೆಯಲ್ಲಿ ಯುವಕರು ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದ ಏಳ್ಳಿಗೆಗೆ ಶ್ರಮಿಸಬೇಕು : ಜಾವೇದ ಗೋಕಾಕ
ಸಾಮಾಜ ಸೇವೆಯಲ್ಲಿ ಯುವಕರು ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದ ಏಳ್ಳಿಗೆಗೆ ಶ್ರಮಿಸಬೇಕು : ಜಾವೇದ ಗೋಕಾಕ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 6 :
ಸಾಮಾಜ ಸೇವೆಯಲ್ಲಿ ಯುವಕರು ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದ ಏಳ್ಳಿಗೆಗೆ ಶ್ರಮಿಸಬೇಕು ಎಂದು ಅಂಜುಮನ ಏ ಇಸ್ಲಾಂ ಕಮೀಟಿಯ ಅಧ್ಯಕ್ಷ ಜಾವೇದ ಗೋಕಾಕ ಹೇಳಿದರು
ರವಿವಾರದಂದು ಇಲ್ಲಿಯ ತಂಜೀಮ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕರ್ನಾಟಕ ಮುಸ್ಲಿಂ ವಿಕಾಸ್ ಪರಿಷತ್ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಉಚಿತ ಸುನ್ನತೆ ಇಬ್ರಾಹಿಂ (ಖತನಾ) ಕ್ಯಾಂಪಗೆ ಚಾಲನೆ ನೀಡಿ ಅವರು ಮಾತನಾಡಿದರು
ಆಧಾತ್ಮ ಮತ್ತು ಶಿಕ್ಷಣ ಒಂದೇ ನಾನ್ಯದ ಎರೆಡು ಮುಖಗಳು ಆದಾತ್ಮದ ಜೊತೆಗೆ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಿ ಮಕ್ಕಳನ್ನು ಸಾಮಾಜದ ಮುಖ್ಯವಾಹಿನಿಗೆ ಬರಲು ಪಾಲಕರು ಸಹಕರಿಸಿದರೆ ಸದೃಢ ಸಮಾಜ ನಿರ್ಮಿಸಲು ಸಾಧ್ಯ . ಕಳೆದ 14 ವರ್ಷಗಳಿಂದ ಇಲ್ಲಿಯ ಕರ್ನಾಟಕ ಮುಸ್ಲಿಂ ವಿಕಾಸ ಪರಿಷತ್ ಸಂಸ್ಥೆಯು ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವದು ಶ್ಲಾಘನೀಯ ಅವರ ಈ ಸಮಾಜಿಕ ಕಾರ್ಯ ಹೀಗೆಯೇ ಮುಂದುವರೆಯಲ್ಲಿ ಎಂದು ಶುಭ ಹಾರೈಸಿದರು.
ದಿವ್ಯ ಸಾನಿಧ್ಯವನ್ನು ವಹಿಸಿದ ಕಾರಿ ಜಬಿವುಲ್ಲಾ ಅವರು ಆರ್ಶಿವಚನ ನೀಡಿದರು .
ಮುಂಜಾನೆಯಿಂದ ನಡೆದ ಉಚಿತ ಶಿಬಿರದಲ್ಲಿ ಸುಮಾರು 200 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ಈ ಶಿಬಿರದ ಸದುಉಪಯೋಗ ಪಡೆದುಕೊಂಡರು
ಈ ಸಂದರ್ಭದಲ್ಲಿ ಸಂಸ್ಥೆಯ ಮುಖಂಡರಾದ ಅಬ್ಬಾಸ ಕೆ ದೇಸಾಯಿ , ಸಾಧಿಕ ಹಲ್ಯಾಳ, ಮಹಾರಾಷ್ಟ್ರ ಸಾಂಗಲಿಯ ಡಾ.ಇಕಬಾಲ ಶರೀಕಮಸಲತ್ತ , ಡಾ. ಇಸಾಕ ಔರಂಗವಾಲೇ , ಎಸ್ ಎ ಕೋತವಾಲ, ಎ.ಎ.ದೇಸಾಯಿ , ದುರ್ಗಪ್ಪ ಶಾಸ್ತ್ರಿ ಗೋಲ್ಲರ , ಅಕ್ಬರ ಜಮಾದಾರ , ಇಲಾಹಿ ಖೈರದಿ, ಮೌಲಾನಾ ಆಸೀಪ , ನೂರೆಇಲಾಹಿ ಜಮಾದಾರ, ಖಾಜಾ ಮತ್ತೆ , ಮುಗುಟ ಪೈಲವಾನ , ಮೊಶಿನ ಮಕಾನದಾರ , ಸೈಯದ ಮುಲ್ಲಾ , ಯಾಕುಬ ಮುಜಾವರ , ಆಕ್ರಂ ಹಯಾತಖಾನ, ರಪೀಕ ಗುಳೇದಗುಡ್ಡ , ಮಲ್ಲಿಕ ಅರಳಿಕಟ್ಟಿ , ದಾದಾಪೀರ ಅಥಣಿ , ಸೊಹೇಲ ಸೈಯದ , ದಾದಾಪೀರ ಪೀರಜಾದೆ, ಅಶಪಾಕ ನಿಂಬರಗಿ , ಮೈಬೂಬ ಸಿಲ್ಲೇದಾರ , ಶಬ್ಬೀರ ಮೋಮಿನ ,ಸೇರಿದಂತೆ ಅನೇಕರು ಉಪಸ್ಥಿತರಿದ್ದರು