ಗೋಕಾಕ:ರಮೇಶ ಜಾರಕಿಹೊಳಿಗೆ ಲೈನ ಕ್ಲೀಯರ್ ಮಾಡಿ ಅಶೋಕ ಪೂಜಾರಿಗೆ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಿಸಿದ ಸರಕಾರ
ರಮೇಶ ಜಾರಕಿಹೊಳಿಗೆ ಲೈನ ಕ್ಲೀಯರ್ ಮಾಡಿ ಅಶೋಕ ಪೂಜಾರಿಗೆ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಿಸಿದ ಸರಕಾರ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ
ರಾಜ್ಯ ಸರ್ಕಾರ ರಾಜ್ಯ ಸಚಿವ ದರ್ಜೆಯ ಸ್ಥಾನಮಾನದೊಂದಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರ ವಿವಿಧ ನಿಮಗ, ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷರನ್ನು ನೇಮಿಸಿ ಆದೇಶ ಹೊರಡಿಸಿದೆ.
ಅದರಂತೆ ಗೋಕಾಕನ ಬಿಜೆಪಿ ಮುಖಂಡ ಅಶೋಕ ನಿಂಗಯ್ಯ ಪೂಜಾರಿ ಅವರನ್ನು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಸರಕಾರದ ಈ ನಿಲುವಿನಿಂದ ಗೋಕಾಕ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಉಪ ಚುನಾವಣೆಗೆ ಬಿಜಿಪಿ ಟಿಕೆಟ್ ಪಕ್ಕಾ ಆಗಿದ್ದು , ಜಾರಕಿಹೊಳಿ ಸಹೋದದರ ಮಧ್ಯೆ ಗೋಕಾಕ ಗದ್ದುಗೆಗೆ ನೆರ ಪೈಪೋಟಿ ನಡೆಯಲಿದೆ
ಈಗಾಗಲೇ ಅಶೋಕ ಪೂಜಾರಿ ಅವರು ಉಪ ಚುನಾವಣೆಗೆ ಗೋಕಾಕ ಕ್ಷೇತ್ರದಿಂದ ಸ್ವರ್ಧಿಸಲು ತಮ್ಮ ಬೆಂಬಲಿಗರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಆದರೆ ಇನ್ನುವರೆಗು ಚುನಾವಣೆಗೆ ನಿಲುವನ್ನು ಸ್ವಷ್ಟ ಪಡೆಸಿಲ್ಲ , ಜೆಡಿಎಸ್ ವರಿಷ್ಠ ಎಚ್.ಡಿ ದೇವೆಗೌಡ ಅವರೂ ಸಹ ಅಶೋಕ ಪೂಜಾರಿ ಅವರೊಂದಿಗೆ ಮಾತುಕತೆ ನಡೆಯಿಸಿ ತಮ್ಮ ಪಕ್ಷದಿಂದ ಸ್ವರ್ಧಿಸುವದಾರೆ ಚುನಾವಣೆಯಲ್ಲಿ ಅವರ ಜೊತೆ ಇದ್ದು ಕೆಲಸಮಾಡುವ ಭರವಸೆಯನ್ನು ನೀಡಿದ್ದಾರೆ ಎಂಬ ಗುಮಾನಿಗಳು ಕ್ಷೇತ್ರದಾದ್ಯಂತ ಹರಿದಾಡುತ್ತಿರುವ ಸಂದರ್ಭದಲ್ಲಿ ಸರಕಾರ ಅಶೋಕ ಪೂಜಾರಿ ಅವರನ್ನು ರಾಜ್ಯ ಸಚಿವ ದರ್ಜೆಯ ಸ್ಥಾನ ಮಾನ ನೀಡಿ ನಿಗಮ ಮಂಡಳಿಗೆ ಅಧ್ಯಕ್ಷ ಸ್ಥಾನಕ್ಕೆ ನೇಮಿಸಿ ಗೋಕಾಕ ಕ್ಷೇತ್ರಕ್ಕೆ ರಮೇಶ ಜಾರಕಿಹೊಳಿ ಅವರ ದಾರಿ ಸುಗಮವನ್ನಾಗಿಸಿದೆ.
ಕಳೆದ ಹಲವು ವರ್ಷಗಳಿಂದ ಗೋಕಾಕ ಮತಕ್ಷೇತ್ರದಲ್ಲಿ ಬದಲಾವಣೆಗಾಗಿ ನಮ್ಮ ಹೋರಾಟ ಎಂದು ಹೇಳಿ ಚುನಾವಣೆ ಸ್ವರ್ಧಿಸುತ್ತಿದ್ದ ಅಶೋಕ ಪೂಜಾರಿ ಅವರಿಗೆ ಸರಕಾರದ ಈ ನಿರ್ಧಾರ ನುಂಗಲಾರದ ತುತ್ತಾಗಿ ಪರಿಣಮಿಸಿದ್ದನ್ನು ಅಲ್ಲಗಳೆಯುವಂತಿಲ್ಲ ಸರಕಾರ ನೀಡಿದ ಸ್ಥಾನ ಮಾನವನ್ನು ಪಡೆದುಕೊಂಡು ಉಪ ಚುನಾವಣೆಯಲ್ಲಿ ರಮೇಶ ಜಾರಕಿಹೊಳಿ ಅವರನ್ನು ಬೆಂಬಲಿಸುತ್ತಾರೆ ಅಥವಾ ಈ ಹುದ್ದೆಯನ್ನು ದಿಕ್ಕರಿಸಿ ತಮ್ಮ ಬೆಂಬಲಿಗರ ಅಭಿಪ್ರಾಯ ಪಡೆದು ಪಕ್ಷೇತರರಾಗಿ ಸ್ವರ್ಧಿಸುತ್ತಾರೋ ಎಂಬುದನ್ನು ಕಾದು ನೋಡಬೇಕಾಗಿದೆ