ಘಟಪ್ರಭಾ:ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ : ಲಖನ್ ಜಾರಕಿಹೊಳಿ
ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ : ಲಖನ್ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಅ 10 :
ಆರೋಗ್ಯವಂತ ವ್ಯಕ್ತಿಗೆ ಜೀವನದಲ್ಲಿ ಕ್ರೀಡೆ, ವ್ಯಾಯಮ ಅತೀ ಮುಖ್ಯ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಅವರ ಆರೋಗ್ಯ ವೃದ್ಧಿ ಜತೆಗೆ ಯುವಕರಲ್ಲಿ ಛಲ ಹಾಗೂ ಬುದ್ಧಿ ಶಕ್ತಿ ಹೆಚ್ಚುತ್ತದೆ ಎಂದು ಕಾಂಗ್ರೇಸ್ ಮುಖಂಡ ಲಖನ್ ಜಾರಕಿಹೊಳಿ ಹೇಳಿದರು.
ಅವರು ಗುರುವಾರ ಘಟಪ್ರಭಾದ ಎಸ್‍ಡಿಟಿ ಶಾಲಾ ಮೈದಾನದಲ್ಲಿ 6ನೇ ಬಾರಿಗೆ ಏರ್ಪಡಿಸಿದ ಘಟಪ್ರಭಾ ಪ್ರೀಮಿಯರ್ ಲೀಗ್ ಕ್ರಿಕೇಟ ಪಂದ್ಯಾಳಿಯನ್ನು ಉದ್ಘಾಟಿಸಿ ಮಾತನಾಡುತ್ತ, ನಿರಂತರ ದುಡಿದು ಆರೋಗ್ಯ ಕೆಡಿಸಿಕೊಂಡು ನಂತರ ಆಸ್ಪತ್ರೆಗೆ ದುಡ್ಡು ಹಾಕುವ ಬದಲು ಪ್ರತಿಯೊಬ್ಬರು ಒಂದೊಂದು ಕ್ರೀಢೆಯಲ್ಲಿ ಭಾಗವಹಿಸಿದರೆ ಜೀವನ ಪೂರ್ತಿ ಸಧೃಢವಾಗಿ ಇರಬಹುವುದು ಹಾಗೂ ಕ್ರೀಢೆಯಲ್ಲಿ ಯಾರು ರಾಜಕೀಯ ಮಾಡಬಾರದೆಂದು ಹೇಳಿದರು.
ಪಂದ್ಯಾವಳಿಯಲ್ಲಿ ಸ್ಥಳೀಯ ಆಟಗಾರರಿರುವ 7 ತಂಡಗಳು ಭಾಗವಹಿಸುತ್ತಿದ್ದು, ಪೈನಲ್ ಗೆಲ್ಲುವ ತಂಡಗೆ ಪ್ರಥಮ ಬಹುಮಾನ 50 ಸಾವಿರ ಹಣ ಹಾಗೂ ಟ್ರೋಫಿಯನ್ನು ಲಖನ್ ಜಾರಕಿಹೊಳಿ ನೀಡಿದ್ದಾರೆ. ದ್ವೀತಿಯ ಬಹುಮಾನ 25 ಸಾವಿರ ರೂ.ಗಳನ್ನು ಜಯಶೀಲ ಶೆಟ್ಟಿ ನೀಡಿದ್ದಾರೆ. ತೃತೀಯ ಬಹುಮಾನ 10 ಸಾವಿರ ರೂ.ಗಳನ್ನು ಪ್ರಕಾಶ ಡಾಂಗೆ ನೀಡಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧುಪದಾಳ ಗ್ರಾಮ ಪಂಚಾಯತ್ ಅಧ್ಯಕ್ಷ ಎಸ್.ಐ.ಬೆನವಾಡಿ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಪ್ರಕಾಶ ಡಾಂಗೆ, ಪ್ರಕಾಶ ಬಾಗೇವಾಡಿ, ಡಿ.ಎಂ.ದಳವಾಯಿ, ಕಲ್ಲಪ ಕಾಡದವರ, ರಮೇಶ ತುಕ್ಕಾನಟ್ಟಿ, ಪ್ರಕಾಶ ಕಂಬಾರ, ಪುಟ್ಟು ಗಂಡ್ವಗೋಳ, ನವೀನ ಹೊಸಮನಿ, ರಾಜು ಕಾಡದವರ, ರಾಜು ಸಂಪಗಾವಿ, ರೇಹಮನ್ ಮೊಕಾಶಿ, ಈರಣ್ಣ ಸಂಗಮನವರ, ಭರಮು ಗಾಡಿವಡ್ಡರ ಹಾಜರಿದ್ದರು.