RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ: ಬಾವಿ ತೋಡಿದ ಶಿರಸಿಯ ದಿಟ್ಟ ಮಹಿಳೆಗೆ : ಕರವೇ ಸನ್ಮಾನ

ಗೋಕಾಕ: ಬಾವಿ ತೋಡಿದ ಶಿರಸಿಯ ದಿಟ್ಟ ಮಹಿಳೆಗೆ : ಕರವೇ ಸನ್ಮಾನ 

ಬಾವಿ ತೋಡಿದ ಶಿರಸಿಯ ದಿಟ್ಟ ಮಹಿಳೆಗೆ : ಕರವೇ ಸನ್ಮಾನ

ಗೋಕಾಕ ಜು 25: ಸಾಧಿಸುವ ಛಲ ಇದ್ದರೆ ಜೀವನದಲ್ಲಿ ಏನೂ ಬೇಕಾದರೂ ಸಾಧಿಸಲು ಸಾಧ್ಯವೆಂದು ತೋರಿಸಿಕೊಟ್ಟ ಮಹಿಳಾ ಸಾಧಕರಿಯರ ಪ್ರಶಸ್ತಿ ಪಡೆದ ಉತ್ತರ ಕನ್ನಡ ಜಿಲ್ಲೆಯ, ಶಿರಸಿಯ ಗೌರಿ ಚಂದ್ರಶೇಖರ ನಾಯಕ ಇತರರಿಗೆ ಮಾದರಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು.

ಅವರು ಸೋಮವಾರ ರಾತ್ರಿ ಶಿರಸಿಯ ಶ್ರೀಮತಿ ಗೌರಿ ಚಂದ್ರಶೇಖರ ನಾಯಕ ಅವರ ಮನೆಗೆ ಭೇಟಿ ನೀಡಿ ಸತ್ಕರಿಸಿ ಮಾತನಾಡಿದರು.

ತಮ್ಮ ತೋಟದಲ್ಲಿ ಸುಮಾರು 250 ಅಡಿಕೆ ಮತ್ತು ತೆಂಗಿನ ಗಿಡಗಳು ತೋಟಕ್ಕೆ ನೀರಿಲ್ಲದೇ ಬಿಸಿಲಿನ ಬೇಗೆಗೆ ಒಣಗುತ್ತಿದ್ದನ್ನು ಮನಗಂಡು ಅವುಗಳಿಗೆ ನೀರುಣಿಸುವ ಸಲುವಾಗಿ ಸುಮಾರು 8 ಅಡಿ ಅಗಲ, 60 ಅಡಿ ಆಳದ ಬಾವಿಯನ್ನು ತೋಡಿದ 51 ರ ವಯೋಮಾನದ ದಿಟ್ಟ ಮಹಿಳೆ ಶ್ರೀಮತಿ ಗೌರಿ ಚಂದ್ರಶೇಖರ ನಾಯಕ ಸತತ ತಿಂಗಳ ಕಾಲ ಪರಿಶ್ರಮಪಟ್ಟಿದ್ದಾರೆ. ಸರಕಾರ, ಪಂಚಾಯತಿ ಸೇರಿದಂತೆ ಯಾರ ಸಹಕಾರ ಕೇಳದೇ ಏಕಾಂಗಿಯಾಗಿ ಭಾವಿ ತೋಡಿ ಸಾಧನೆಗೆ ಅಸಾಧ್ಯವಾದುದೆನಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಸುವರ್ಣಾ ನ್ಯೂಸ್ ಸಂಸ್ಥೆಯವರು ಏಪ್ರಿಲ್ ತಿಂಗಳಲ್ಲಿ ಮಹಿಳಾ ಸಾಧಕಿಯರು ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದು ಶ್ಲಾಘನೀಯವಾಗಿದೆ. ಇವರ ಈ ಪರಿಸರ ಮತ್ತು ಸಾಮಾಜಿಕ ಕಾಳಜಿ ಮುಂದುವರೆಯಲು ಎಂದು ಶುಭ ಹಾರೈಸಿದ್ದಾರೆ.

ಈ ಸರಳ ಸಮಾರಂಭದಲ್ಲಿ ವೇದಿಕೆ ಕಾರ್ಯದರ್ಶಿ ಸಾಧಿಕ್ ಹಲ್ಯಾಳ, ಕೃಷ್ಣಾ ಖಾನಪ್ಪನವರ, ಮಾರಿಕಾಂಬಾ ಚೀಟ್ಸ್ ಪಂಡನ ನಿರ್ದೇಶಕರಾದ ಬಸವರಾಜ ಹತ್ತರಕಿ, ರಾಜು ಕೆಂಚನಗುಡ್ಡ, ಮಹಾಂತೇಶ ಹಿರೇಮಠ, ಕರವೇ ಉಪಾಧ್ಯಕ್ಷ ದೀಪಕ್ ಹಂಜಿ, ನಿಜಾಮ್ ನದಾಫ್, ಮುಗುಟ ಪೈಲವಾನ, ಬಸವರಾಜ ಗಾಡಿವಡ್ಡರ, ಶಂಕರ ಹಾಲವ್ವಗೋಳ, ರಫೀಕ್ ಗುಳೆದಗುಡ್ಡ, ಆನಂದ ಖಾನಪ್ಪನವರ ಉಪಸ್ಥಿತರಿದ್ದರು

Related posts: