RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಬಹುದು : ಲಖನ್ ಜಾರಕಿಹೊಳಿ

ಗೋಕಾಕ:ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಬಹುದು : ಲಖನ್ ಜಾರಕಿಹೊಳಿ 

ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಬಹುದು : ಲಖನ ಜಾರಕಿಹೊಳಿ 

 

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 12 :

 

 

 

ಇಂದಿನ ಯುವ ಪಿಳೀಗೆಯು ಮೊಬೈಲಗಳಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡದೇ ತಮ್ಮ ದೈನಂದಿನ ಕಾರ್ಯಗಳ ಜೊತೆಗೆ ಕ್ರೀಡೆಗಳಲ್ಲೂ ಪಾಲ್ಗೊಳ್ಳಬೇಕೆಂದು ಯುವ ಧುರೀಣ ಲಖನ್ ಜಾರಕಿಹೊಳಿ ಹೇಳಿದರು.
ಶನಿವಾರದಂದು ನಗರದ ಶ್ರೀ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಕೆ.ಬಿ.ಸ್ಪೋಟ್ರ್ಸ ವತಿಯಿಂದ ಆಯೋಜಿಸಿದ್ದ ಗೋಕಾಕ ಪ್ರೀಮಿಯರ್ ಲೀಗ್ (GPL) – ಸೀಸನ್ 4 ಕ್ರಿಕೇಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡೆಗಳಲ್ಲಿ ಹೆಚ್ಚು ಹೆಚ್ಚಾಗಿ ಪಾಲ್ಗೊಳ್ಳುವುದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಬಹುದು ಎಂದು ತಿಳಿಸಿದರು.
ಇಂದಿನ ಒತ್ತಡದ ಜೀವನದಲ್ಲಿ ಯುವಕರು ದುಶ್ಚಟಗಳಿಗೆ ಮಾರು ಹೋಗದೇ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ ಎಂದು ಸಲಹೆ ನೀಡಿದರಲ್ಲದೇ, ಕ್ರೀಡಾಪಟುಗಳು ಸೋಲು ಗೆಲುವಿಗೆ ಮಹತ್ವ ನೀಡದೇ ಕ್ರೀಡಾ ಮನೋಭಾವದಿಂದ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿ ಪ್ರತಿಭಾನ್ವಿತ ಕ್ರೀಡಾಪಟುಗಳಾಗಿ ಕ್ರೀಡೆಗೆ ಹೆಸರುವಾಸಿಯಾದ ನಮ್ಮ ತಾಲೂಕಿಗೆ ಕೀರ್ತಿ ತನ್ನಿರಿ ಎಂದು ಹಾರೈಸಿದರು.
ಯುವ ಧುರೀಣ ಲಖನ್ ಜಾರಕಿಹೊಳಿ ಅವರು ಈ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ 66,666 ರೂ, ನಗದು ಬಹುಮಾನ ಹಾಗೂ ಟ್ರೋಫಿ, ಮತ್ತು ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 33,333 ರೂ ನಗದು ಬಹುಮಾನ ಹಾಗೂ ಟ್ರೋಫಿ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ವೇದಿಕೆ ಮೇಲೆ ನಗರಸಭೆ ಸದಸ್ಯರಾದ ಸಂತೋಷ ಮಂತ್ರಣ್ಣವರ, ಪ್ರಕಾಶ ಮುರಾರಿ, ಮುಖಂಡರಾದ ಬಸವರಾಜ ಸಾಯಣ್ಣವರ, ಅಶೋಕ ಸಾಯಣ್ಣವರ, ಸದಾ ಕಲಾಲ, ಬಸವರಾಜ ದೇಶನೂರ, ವಿಜಯ ಜತ್ತಿ, ಬಸವರಾಜ ಮಾಳಗಿ, ಜಾವೀದ ಗೋಕಾಕ, ಆಸೀಫ್ ಖೋಜಾ ದಸಗೀರ ಶಾಬಾಷಖಾನ ಹಾಗೂ ಪಂದ್ಯಾವಳಿಗಳ ನಿರ್ಣಾಯಕರಾದ ಸಂತೋಷ ನಾಯಿಕ (ಭಟ್), ಅನಿಲ ಮುರಾರಿ, ಪ್ರವೀಣ ಜೀರಗಾಳ, ಮಾರುತಿ ಪ್ರಭುಗೋಳ, ಕಿರಣ ಅಂದಾನಿ, ಸಂಪತ್ ಬಾಗಲಕೋಟೆ, ಮಂಜು ಅಮ್ಮಣಗಿ ಸೇರಿದಂತೆ ಅನೇಕರು ಇದ್ದರು.

Related posts: