RNI NO. KARKAN/2006/27779|Tuesday, November 5, 2024
You are here: Home » breaking news » ಘಟಪ್ರಭಾ:ರೆಹಮಾನ ಪೌಂಡೆಷನ್ ಬೆಳಗಾವಿ ವತಿಯಿಂದ ಉಚಿತ ಆರೋಗ್ಯ ತಪಾಸನಾ ಶಿಬಿರ

ಘಟಪ್ರಭಾ:ರೆಹಮಾನ ಪೌಂಡೆಷನ್ ಬೆಳಗಾವಿ ವತಿಯಿಂದ ಉಚಿತ ಆರೋಗ್ಯ ತಪಾಸನಾ ಶಿಬಿರ 

ರೆಹಮಾನ ಪೌಂಡೆಷನ್ ಬೆಳಗಾವಿ ವತಿಯಿಂದ ಉಚಿತ ಆರೋಗ್ಯ ತಪಾಸನಾ ಶಿಬಿರ

 

 
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಅ 14 :

 
ರೆಹಮಾನ ಪೌಂಡೆಷನ್ ಬೆಳಗಾವಿ, ಸ್ಥಳೀಯ ಕೆಎಚ್‍ಐ ಆಸ್ಪತ್ರೆ, ಶ್ರೀ ಜೆ.ಜಿ. ಕೋ ಆಸ್ಪತ್ರೆ ಮತ್ತು ಕರವೇ ಸ್ವಾಭಿಮಾನ ಬಣದ ಸಂಯುಕ್ತಾಶ್ರಯದಲ್ಲಿ ಮಲ್ಲಾಪೂರ ಪಿಜಿ ಪಟ್ಟಣದ ಬೆಲ್ಲದ ಪೇಟೆಯಲ್ಲಿರುವ ಮದಿನಾ ಶಾದಿ ಹಾಲ್‍ದಲ್ಲಿ ಹಮ್ಮಿಕೊಳ್ಳಲಾದ ಉಚಿತ ಆರೋಗ್ಯ ತಪಾಸನಾ ಶಿಬಿರದಲ್ಲಿ ವಿವಿಧ ಖಾಯಿಲೆಗಳಿಗೆ ತುತ್ತಾಗಿರುವ ಪಟ್ಟಣದ ಮತ್ತು ಸುತ್ತ ಮುತ್ತಲಿನ ಗ್ರಾಮಗಳ ಸುಮಾರು 400ಕ್ಕೂ ಹೆಚ್ಚು ಜನರು ಚಿಕಿತ್ಸೆ ಹಾಗೂ ಔಷದೋಪಚಾರದ ಲಾಭ ಪಡೆದರು.
ಇದಕ್ಕೂ ಮುನ್ನ ನಡೆದ ಸಮಾರಂಭದಲ್ಲಿ ಮದಿನಾ ಮಸೀದಿಯ ಸಮೀತಿಯವರಿಂದ ಶಿಬಿರಕ್ಕೆ ಆಗಮಿಸಿದ ವೈದ್ಯರುಗಳನ್ನು ಸತ್ಕರಿಸಲಾಯಿತು. ಪ್ರಾಸ್ತಾವಿಕವಾಗಿ ಕರವೇ ಸ್ವಾಭಿಮಾನ ಬಣದ ರಮೇಶ ಜಿರಲಿ ಮಾತನಾಡಿದರು.
ಈ ಶಿಬಿರದಲ್ಲಿ ಡಾ. ಮಾಝ ಲಖಾನಿ, ಡಾ. ಜಾವೇದ ಜಗದಾಳ, ಡಾ. ಬಿ.ಎನ್.ಶಿಂಧೆ, ಡಾ. ಪ್ರಕಾಶ ತೆರಣಿ, ಡಾ. ಮಹಮ್ಮದ, ಡಾ. ಫಾತೀಮಾ, ಡಾ.ಅರ್ಶಿಯಾ, ಡಾ. ವಿರೇಶ ವಾಲಿ, ಪ.ಪಂ ಸದಸ್ಯ ನಾಗರಾಜ ಚಚಡಿ, ಯುನೂಸ ಶೇಖ, ಮುನ್ನಾ ಕೊಣ್ಣೂರ, ಫಯಾಜ ಶೇಖ, ದಸ್ತಗೀರ ಹಿಡಕಲ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಕೆಎಚ್‍ಐ ಆಸ್ಪತ್ರೆಯ ಮುಖ್ಯಾಧಿಕಾರಿಗಳಾದ ಡಾ|| ಘನಶ್ಯಾಮ ವೈದ್ಯ ಮತ್ತು ಶ್ರೀ ಜೆ.ಜಿ. ಕೋ ಆಸ್ಪತ್ರೆಯ ಮುಖ್ಯಾಧಿಕಾರಿಗಳಾದ ಡಾ|| ಬಿ.ಕೆ.ಎಚ್. ಪಾಟೀಲ ಅವರುಗಳು ತಮ್ಮ ಸಿಬಂದ್ದಿಗಳನ್ನು ಈ ಶಿಬಿರಕ್ಕೆ ಕಳುಹಿಸಿಕೊಟ್ಟು ಶಿಬಿರದ ಯಶಸ್ಸಿಗೆ ಸಹಕರಿದರು.

Related posts: