ಗೋಕಾಕ:ಕ್ರೀಡಾ ಪಟುಗಳು ಸೋಲು ಗೆಲುವಿಗೆ ಮಹತ್ವ ನೀಡದೇ ಕ್ರೀಡಾ ಮನೋಭಾವದಿಂದ ಪಾಲ್ಗೊಳಬೇಕು : ಸತೀಶ ಜಾರಕಿಹೊಳಿ
ಕ್ರೀಡಾ ಪಟುಗಳು ಸೋಲು ಗೆಲುವಿಗೆ ಮಹತ್ವ ನೀಡದೇ ಕ್ರೀಡಾ ಮನೋಭಾವದಿಂದ ಪಾಲ್ಗೊಳಬೇಕು : ಸತೀಶ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ, 18 :
ಕ್ರೀಡಾ ಪಟುಗಳು ಸೋಲು ಗೆಲುವಿಗೆ ಮಹತ್ವ ನೀಡದೇ ಕ್ರೀಡಾ ಮನೋಭಾವದಿಂದ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿ ಪ್ರತಿಭಾನ್ವಿತ ಕ್ರೀಡಾಪಟುಗಳಾಗಿ ಕ್ರೀಡೆಗೆ ಹೆಸರುವಾಸಿಯಾದ ನಮ್ಮ ಗೋಕಾಕ ತಾಲೂಕಿಗೆ ಕೀರ್ತಿ ತನ್ನಿರಿ ಎಂದು ಮಾಜಿ ಸಚಿವ, ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಶುಕ್ರವಾರದಂದು ನಗರದ ಶ್ರೀ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಕೆ.ಬಿ.ಸ್ಪೋಟ್ರ್ಸ ವತಿಯಿಂದ ಆಯೋಜಿಸಿದ್ದ ಗೋಕಾಕ ಪ್ರೀಮಿಯರ್ ಲೀಗ್ (Gpl) – ಸೀಸನ್ 4 ಕ್ರಿಕೇಟ್ ಪಂದ್ಯಾವಳಿಯ ಪೈನಲ್ ಪಂದ್ಯದಲ್ಲಿ ವಿಜೇತಗೊಂಡ ತಂಡಕ್ಕೆ ಬಹುಮಾನ ವಿತರಿಸಿ ಮಾತನಾಡಿದರು.
ಇಂದಿನ ಒತ್ತಡದ ಜೀವನದಲ್ಲಿ ಯುವಕರು ದುಶ್ಚಟಗಳಿಗೆ ಮಾರು ಹೋಗದೇ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ ಎಂದು ಸಲಹೆ ನೀಡಿದರು.
ಕ್ರೀಡೆಗೆ ಗೋಕಾಕವು ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿದ್ದು ಜೊತೆಗೆ ಲಖನ್ ಜಾರಕಿಹೊಳಿ ಅವರು ಕೂಡಾ ಕ್ರೀಕೆಟ್ ಕ್ರೀಡೆಗೆ ಪ್ರೋತ್ಸಾಹ ನೀಡಿದ್ದಾರೆ. ಇಂಹತ ಕ್ರೀಡೆ ಆಯೋಜನೆ ಮಾಡುವ ಮೂಲಕ ದೇಶವು ಕ್ರೀಡೆಯಲ್ಲಿ ಪಾಲ್ಗೊಳ್ಳಲಿ ಹಾರೈಸಿದರು
ಯುವ ಧುರೀಣ ಲಖನ್ ಜಾರಕಿಹೊಳಿ ಅವರು ಈ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಗೋಕಾಕ ಸೂಪರ್ ಕಿಂಗ್ಸ್ ತಂಡಕ್ಕೆ 66,666 ರೂ, ನಗದು ಬಹುಮಾನ ಹಾಗೂ ಟ್ರೋಫಿ, ಮತ್ತು ದ್ವಿತೀಯ ಸ್ಥಾನ ಪಡೆದ ಗೋಕಾಕ ನೈಟ್ ರೈಡರ್ಸ ತಂಡಕ್ಕೆ 33,333 ರೂ ನಗದು ಬಹುಮಾನ ಹಾಗೂ ಟ್ರೋಫಿ ನೀಡಿದರು.
ಈ ಸಂದರ್ಭದಲ್ಲಿ ವೇದಿಕೆ ಮೇಲೆ ನಗರಸಭೆ ಸದಸ್ಯರಾದ ಭಗವಂತ ಹುಳ್ಳಿ, ಸಂತೋಷ ಮಂತ್ರಣ್ಣವರ, ಮುಖಂಡರಾದ ಅಶೋಕ ಸಾಯಣ್ಣವರ, ಸದಾ ಕಲಾಲ, ಬಸವರಾಜ ದೇಶನೂರ, ಕಿಶೋರ ಶೆಟ್ಟಿ (ಭಟ್), ಜಾವೀದ ಗೋಕಾಕ, ಆಸೀಫ್ ಖೋಜಾ, ದಸಗೀರ ಶಾಬಾಷಖಾನ, ನಯೀಮ ಜಮಾದಾರ, ಶ್ರೀಧರ ಅಂಬಲಿ, ಅನೀಲ ಮುರಾರಿ, ಹಾಗೂ ಪಂದ್ಯಾವಳಿಗಳ ನಿರ್ಣಾಯಕರಾದ ಸಂತೋಷ ನಾಯಿಕ (ಭಟ್), ಅನಿಲ ಮುರಾರಿ, ಪ್ರವೀಣ ಜೀರಗಾಳ, ಮಾರುತಿ ಪ್ರಭುಗೋಳ, ಕಿರಣ ಅಂದಾನಿ, ಸಂಪತ್ ಬಾಗಲಕೋಟೆ, ಮಂಜು ಅಮ್ಮಣಗಿ ಸೇರಿದಂತೆ ಅನೇಕರು ಇದ್ದರು.