ಗೋಕಾಕ:ಮೂಲಭೂತ ಸೌಕರ್ಯ ಕೇಳುವ ನಿರಾಶ್ರಿತರಿಗೆ ಅಧಿಕಾರಿಗಳ ದಬ್ಬಾಳಿಕೆ : ನಿರಾಶ್ರಿತರಿಗಿಲ್ಲ ಮೂಲ ಸೌಕರ್ಯ
ಮೂಲಭೂತ ಸೌಕರ್ಯ ಕೇಳುವ ನಿರಾಶ್ರಿತರಿಗೆ ಅಧಿಕಾರಿಗಳ ದಬ್ಬಾಳಿಕೆ : ನಿರಾಶ್ರಿತರಿಗಿಲ್ಲ ಮೂಲ ಸೌಕರ್ಯ
ನಮ್ಮ ಬೆಳಗಾವಿ ವಿಶೇಷ
ಗೋಕಾಕ ಅ 19 : ಗೋಕಾಕ ನಗರಕ್ಕೆ ಹಿಂದೆಂದು ಕಂಡು ಕಾಣದ ನೆರೆ ಬಂದು ಸುಮಾರು ಎರೆಡು ತಿಂಗಳು ಕಳೆದರು ಸಹ ನೆರೆಗೆ ತುತ್ತಾಗಿ ಎಲ್ಲವನ್ನು ಕಳೆದುಕೊಂಡು ನಿರಾಶ್ರಿತರಾದವರ ಕಷ್ಟಗಳಿಗೆ ಶಾಶ್ವತ ಪರಿಹಾರ ದೊರೆಯುವ ಯಾವುದೇ ಮುನ್ನಸೂಚನೆಗಳು ಕಾಣುತ್ತಿಲ್ಲ ಬದಲಾಗಿ ಮೂಲಭೂತ ಸೌಕರ್ಯ ಕೇಳುವ ನಿರಾಶ್ರಿತರಿಗೆ ಅಧಿಕಾರಿಗಳ ದಬ್ಬಾಳಿಕೆ ಹೆಚ್ಚಾಗುತ್ತಿದ್ದೆ
ಕಳೆದ ಎರೆಡು ತಿಂಗಳಿನಿಂದ ನರಕಯಾತನೆ ಅನುಭವಿಸುತ್ತಿರುವ ನಿರಾಶ್ರಿತರಿಗಾಗಿ ನಗರದ ಹೊರ ವಲಯದ ಅರಣ್ಯ ಇಲಾಖೆಯ ಭೂಮಿಯಲ್ಲಿ ತಾತ್ಕಾಲಿಕ ತಗಡಿನ ಶೆಡಗಳನ್ನು ನಿರ್ಮಿಸಿ ಕೈತೋಳೆದು ಕೊಂಡಿರುವ ತಾಲೂಕಾಡಳಿತ ಅವರಿಗೆ ಒದಗಿಸಬೇಕಾದ ಮೂಲಭೂತ ಸೌಕರ್ಯಗಳನ್ನು ದೊರಕಿಸುವಲ್ಲಿ ಸಂಪೂರ್ಣ ವಿಫಲವಾದಂತೆ ಭಾಸವಾಗುತ್ತಿದೆ
ನಗರದ ಆಶ್ರಯ ಬಡಾವಣೆಯ ಹಿಂದೆ ಇರುವ ಸಮಾಜಿಕ ಅರಣ್ಯ ಇಲಾಖೆ ಕಛೆರಿಯ ಪಕ್ಕದಲ್ಲಿ ತರಾತುರಿಯಲ್ಲಿ ಕೆಲ ತಗಡಿನ ಶೆಡ್‌ಗಳನ್ನು ಹಾಕಿ ಪರಿಹಾರ ಕೇಂದ್ರದಲ್ಲಿ ವಾಸವಾಗಿದ್ದ ಸಂತ್ರಸ್ತರಿಗೆ ಕೇವಲ 12×15 ಅಳತೆಯ 60 ಶೆಡ್‌ಗಳನ್ನು ನಿರ್ಮಿಸಿದ್ದು ಅದರಲ್ಲಿ 78 ಕುಟುಂಬಗಳು ವಾಸವಾಗಿವೆ.
ನೆಲವನ್ನು ಗಟ್ಟಿಗೊಳಿಸದೇ(ಕಾಂಕ್ರೀಟ್) ಹಳೆಯ ತಗಡುಗಳನ್ನು ಹಾಕಿ ಶೆಡ್ ನಿರ್ಮಿಸಲಾಗಿದ್ದು ತಗಡುಗಳಿಗೆ ಎಲ್ಲೆಂದರಲ್ಲಿ ತೂತು ಬಿದ್ದಿವೆ.ಶನಿವಾರದಂದು ಸಾಯಂಕಾಲ ನಗರದಲ್ಲಿ ಆದ ಭಾರಿ ಮಳೆಗೆ ಇಲ್ಲಿ ನಿರ್ಮಿತಗೊಂಡ ಎಲ್ಲ ಶೆಡಗಳು ದೋ ಎಂದು ಸೋರಿ ನಿರಾಶ್ರಿತರು ನರಕ ಯಾತನೆಯನ್ನು ಅನುಭವಿಸಿದ್ದಾರೆ.
ತಾತ್ಕಾಲಿಕ ಶೆಡಗಳಲ್ಲಿ ನಿರ್ಮಿಸಲಾಗಿರುವ ಸ್ನಾನಗೃಹಗಳಿಗೆ ಬಾಗಿಲುಗಳೇ ಇಲ್ಲ. ವಿದ್ಯುತ್ ಸೌಲಭ್ಯದ ಹೆಸರಿನಲ್ಲಿ ಒಂದೆರಡು ಬಲ್ಬಗಳನ್ನು ಹಾಕಲಾಗಿದ್ದು ನಿರಾಶ್ರಿತರ ಮಕ್ಕಳಿಗೆ ರಾತ್ರೀ ವೇಳೆಯಲ್ಲಿ ಅಭ್ಯಾಸ ಮಾಡಲು ತುಂಬಾ ತೊಂದರೆ ಯಾಗುತ್ತಿದ್ದೆ . ಇದಲ್ಲದೇ ಗುಡ್ಡಗಾಡು ಪ್ರದೇಶದಕ್ಕೆ ಹಚ್ಚಿಕೊಂಡು ಈ ಶೆಡ್ ಗಳಿರುವುದರಿಂದ ರಾತ್ರಿ ಸಮಯದಲ್ಲಿ ಸೊಳ್ಳೆ ಹಾಗೂ ಹುಳಗಳ ಕಾಟದ ಶಂಕೆಯಿದ್ದೆ , ಇದ್ದರಿಂದ ಶೆಡಗಳಲ್ಲಿ ವಾಸವಾಗಿರುವ ಸಂತ್ರಸ್ತರು ರಾತ್ರಿಯೆಲ್ಲ ಜಾಗರಣೆ ಮಾಡುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ . ದಿನಾಲೂ ಒಂದು ಗಂಟೆ ಕುಡಿಯುವ ನೀರು ಬಿಟ್ಟಂತೆ ಮಾಡಿ ಬಂದ್ ಮಾಡುವುದರಿಂದ ಸರಿಯಾಗಿ ಕುಡಿಯಲು ನೀರು ಸಿಗುತ್ತಿಲ್ಲ.
ನಗರಸಭೆಯಿಂದ ಒಂದು ಟ್ಯಾಂಕರ್ ನೀರು ನಿಲ್ಲಿಸಲಾಗುತ್ತಿದ್ದು ಅದರಲ್ಲಿಯ ನೀರು ಕುಡಿಯುವ ಸ್ಥಿತಿ ಇದ್ದು ಅದು ಕೂಡ 3 ದಿನಗಳಿಂದ ಖಾಲಿಯಾಗಿ ಹಾಗೇ ನಿಂತಿದೆ ಎಂದು ನಿರಾಶ್ರಿತರು ಆರೋಪಿಸುತ್ತಾರೆ. ಶೆಡ್‌ಗಳ ಒಳಗೆ ನೆಲದಲ್ಲಿ ಮರಳು, ಮಣ್ಣು ಇರುವುದರಿಂದ ಊಟವನ್ನೂ ಮಾಡಲು ಆಗದ ಸ್ಥಿತಿ ಇದೆ. ಇದರಿಂದ ನಿರಾಶ್ರಿತರ ಪರಿಸ್ಥಿತಿ ಬೆಂಕಿಯಿಂದ ಬಾಣಲೆಗೆ ಹಾಕಿದಂತಾಗಿದೆ.
ತೋರಿಕೆಗೆ ಮಾತ್ರ ನೆರೆ ಪೀಡಿತರಿಗೆ ಶೆಡ್‌ಗಳನ್ನು ನಿರ್ಮಿಸಲಾಗಿದೆ ವಿನಹ ಅವರಿಗೆ ಯಾವ ಮೂಲ ಸೌಲಭ್ಯ ಒದಗಿಸಲಾಗಿಲ್ಲ. ಬೆಳಗಾವಿ ನಂತರ ಅತ್ಯಂತ ದೊಡ್ಡ ನಗರವಾದ ಗೋಕಾಕ ನಗರದಲ್ಲಿಯೇ ನೆರೆ ಪೀಡಿತರ ಪರಿಸ್ಥಿತಿ ಹೀಗಾದರೆ ಗ್ರಾಮಾಂತರ ಪ್ರದೇಶದ ಪರಿಸ್ಥಿತಿ ಹೇಗಿರಬೇಕು ಎನ್ನುವುದು ತಿಳಿಯದಾಗಿದೆ
ನಿರಾಶ್ರಿತರ ಮೇಲೆ ಅಧಿಕಾರಿಗಳ ದಬ್ಬಾಳಿಕೆ : ಕಳೆದ ಎರೆಡು ತಿಂಗಳ ಹಿಂದೆ ಬಂದ ನೆರೆಗೆ ನಲುಗಿ ಶೆಡಗಳಲ್ಲಿ ಆಶ್ರಯ ಪಡೆದಿರುವ ನಿರಾಶ್ರಿತರು ತಮಗೆ ಬೇಕಾದ ಸೌಲಭ್ಯಗಳನ್ನು ಪಡೆದುಕೋಳ್ಳಲು ಸಲುವಾಗಿ ಮಾಧ್ಯಮದವರಿಗೆ ಮತ್ತು ಪರಿಚಯಸ್ಥರ ಮುಂದೆ ತಮ್ಮ ಅಳಲನ್ನು ಹೇಳಿಕೊಂಡರೆ ಇಲ್ಲಿಯ ಮೇಲುಸ್ತುವಾರಿಯನ್ನು ನೋಡಿಕೋಳ್ಳತ್ತಿರುವ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಶಿಕ್ಷಕ ಹನುಮಂತಗೋಳ ಅವರು ನಿರಾಶ್ರಿತರಿಗೆ ಆವಾಜ ಹಾಕುತ್ತಿದ್ದಾರೆ ಎಂದು ಇಲ್ಲಿಯ ನಿರಾಶ್ರಿತರು ದೂರಿತ್ತಿದ್ದಾರೆ. ಇಲ್ಲಿ ವಾಸವಾಗಿರುವ ನಿರಾಶ್ರಿತರು ತಮಗೆ ಬೇಕಾದ ಮೂಲ ಸೌಕರ್ಯಗಳನ್ನು ಕೇಳಲು ಸಹ ಹಿಂಜರಿಯುವ ಪರಿಸ್ಥಿತಿ ಈ ಶೆಡಗಳಲ್ಲಿ ನಿರ್ಮಾಣ ಆಗಿದೆ ಇದರಿಂದ ಯಾವುದೇ ಅಚ್ಚುಕಟ್ಟಾದ ವವ್ಯಸ್ಥೆ ಇಲ್ಲಿ ಇಲ್ಲದಿದ್ಧರು ಸಹ ಎಲ್ಲವೂ ಸರಿಯಾಗಿದೆ ಎಂಬಂತೆ ವರ್ತಿಸುವ ಘನಘೋರ ಪರಿಸ್ಥಿಯನ್ನು ಇಲ್ಲಿ ಆಶ್ರಯ ಪಡೆದಿರುವ ನಿರಾಶ್ರಿತರು ಅನುಭವಿಸುತ್ತಿದ್ದಾರೆ
ಬರ್ಹಿದಸೆಗಾಗಿ ಜಗಳ : ಇಲ್ಲಿಯ ಆಶ್ರಯ ಬಡಾವಣೆಯ ಪಕ್ಕದಲ್ಲಿಯೇ ನಿರ್ಮಾಣ ವಾಗಿರುವ ಸುಮಾರು 60 ತಗಡಿನ ಶೆಡಗಳಲ್ಲಿ ಸುಮಾರು 300 ಕ್ಕೂ ಹೆಚ್ಚು ನಿರಾಶ್ರಿತರು ವಾಸಿಸುತ್ತಿದ್ದಾರೆ. ಇವರಿಗೆ ಕೆವಲ ಸ್ನಾನ ಮಾಡಲು ಮಾತ್ರ ಇಲ್ಲಿ ಬಾಗಲಿಲ್ಲದ ಶೆಡಗಳನ್ನು ನಿರ್ಮಿಸಲಾಗಿದೆ ಹೊರೆತು ಶೌಚ್ಚಕ್ಕೆ ಯಾವುದೆ ವ್ಯವಸ್ಥೆ ಮಾಡಲಾಗಿಲ್ಲ ಇದರಿಂದ ಇಲ್ಲಿ ಆಶ್ರಯ ಪಡೆದಿರುವವರು ಬರ್ಹಿದಸೆಗಾಗಿ ಬಯಲನ್ನೇ ಅವಲಂಭಿಸಿದ್ದಾರೆ ಪಕ್ಕದಲ್ಲಿ ಗುಡ್ಡಗಾಡು ಪ್ರದೇಶ ವಿರುವದರಿಂದ ಬಯಲಿನಲ್ಲಿಯೇ ಬರ್ಹಿದಸೆಗೆ ಹೋಗುವದು ಅನಿರ್ವಾಯ ಹೀಗೆ ಬರ್ಹಿದಸೆಗಾಗಿ ಹೋಗುವ ನಿರಾಶ್ರಿತರೊಂದಿಗೆ ಪಕ್ಕದ ಆಶ್ರಯ ಬಡಾವಣೆಯಲ್ಲಿ ವಾಸಿಸುವ ಸಾರ್ವಜನಿಕರಿಂದ ಕಿರಿಕಿರಿ ಉಂಟಾಗುತ್ತಿದ್ದೆ , ಇದರಿಂದ ಇಲ್ಲಿ ವಾಸಿಸುವ ನಿವಾಸಿಗಳು ನಿರಾಶ್ರಿತರ ಶೆಡಗಳಲ್ಲಿ ಬಂದು ಜಗಳವಾಡುವ ಪ್ರಸಂಗಳು ಸಹ ನಡೆಯುತ್ತಿವೆ. ಎಲ್ಲವನ್ನು ಕಳೆದುಕೊಂಡು ಕಂಗಾಲಾಗಿರುವ ಸಂತ್ರಸ್ತರು ಸರಕಾರದಿಂದ ಸೂಕ್ತ ಸೌಲಭ್ಯ ಪಡೆದು ತಮ್ಮ ಜೀವನ ಕಟ್ಟಿಕೋಳುವ ಮಧ್ಯದಲ್ಲಿ ಹಿಂತಹ ಸವಾಲುಗಳನ್ನು ಎದುರಿಸಿ ಮತ್ತಷ್ಟು ಕುಗ್ಗುತ್ತಿರುವದು ಗಾಯದ ಮೇಲೆ ಬರೆ ಎಳೆದಂತಾಗಿದೆ.
20 ರೂ ಬಾಂಡ ಮೇಲೆ ಸಹಿ ಸಂಗ್ರಹ : ಅರಣ್ಯ ಇಲಾಖೆಯ ಜಾಗದಲ್ಲಿ ನಿರ್ಮಿಸಿರು 60 ತಾತ್ಕಾಲಿಕ ಶೆಡಗಳಲ್ಲಿ ವಾಸವಾಗಿರುವ ಸುಮಾರು 70 ಕ್ಕೂ ಹೆಚ್ಚು ಕುಟುಂಬಗಳ ಮುಖ್ಯಸ್ಥರಿಂದ 20 ರೂ ಬಾಂಡಗಳ ಮೇಲೆ 3 ತಿಂಗಳ ಅವಧಿಗೆ ಮಾತ್ರ ಇಲ್ಲಿ ವಾಸಿಸಿ ನಂತರ ಶೆಡಗಳನ್ನು ತೆರವು ಮಾಡಿ ಹೋಗಬೇಕು ಎಂದು ಅಧಿಕಾರಿಗಳು ಕರಾರು ಪತ್ರಗಳನ್ನು ಬರೆಸಿ ಕೋಳ್ಳುತ್ತಿದ್ದಾರೆ ಎಂದು ಇಲ್ಲಿ ವಾಸವಾಗಿರುವ ನಿರಾಶ್ರಿತರು ತಮ್ಮ ಅಳಲನ್ನು ತೊಡಿಕೋಳುತ್ತಿದ್ದಾರೆ. ಕೆವಲ ಮೂರು ತಿಂಗಳು ಇಲ್ಲಿ ಇದ್ದು , ಪುನಃ ಇಲ್ಲಿಂದ ಎಲ್ಲಿಗೆ ಹೋಗುವದು ಎಂದು ನಮಗೆ ತಿಳಿಯದಾಗಿದೆ ಇಲ್ಲಿ ವಾಸವಾಗಿರುವ ನಾವೆಲ್ಲ ಬಾಡಿಗೆ ದಾರರಾಗಿದ್ಧೇವೆ ಶಾಶ್ವತ ಸೂರು ಕಲ್ಪಿಸಿ ನಮಗೆ ಇಲ್ಲಿಂದ ಹೋರ ಕಳುಹಿಸಲ್ಲಿ ಇಲ್ಲವಾದರೆ ಸರಕಾರದಿಂದ ಬಾಡಿಗೆದಾರರಿಗೂ ಕನಿಷ್ಠ 2 ಲಕ್ಷ ಪರಿಹಾರ ನೀಡಲಿ ಎಂದು ಇಲ್ಲಿಯ ನಿರಾಶ್ರಿತರ ಬೇಡಿಕೆಯಾಗಿದೆ.
ನೆರೆ ಬಂದ ಹೋದ ಮೇಲೆ ಗೋಕಾಕ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಮಾನವೀಯತೆಯ ಆಧಾರ ಮೇಲೆ ಕುಂದು ಕೊರತೆಗಳನ್ನು ವಿಚಾರಿಸಬೇಕಾದ ಜಿಲ್ಲಾಧಿಕಾರಿಗಳು ಇತ್ತ ಗಮನ ಹರಿಸಿಲ್ಲ, ಗೋಕಾಕದಲ್ಲಿಯ ಶೆಡ್‌ಗಳಿಗೆ ಸ್ವತಃ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಸೌಲಭ್ಯ ಒದಗಿಸಬೇಕೆನ್ನುವುದು ನಿರಾಶ್ರಿತರ ಬೇಡಿಕೆಯಾಗಿದೆ.
ನೆರೆ ಬಂದು ನಮ್ಮ ಜೀವನವನ್ನೇ ಕಷ್ಟಕ್ಕೆ ಇಡುಮಾಡಿದೆ ಇದರಿಂದ ಸುಧಾರಿಸಿಕೋಳ್ಳಲು ನಾವು ಹರಸಹಾಸ ಪಡುತ್ತಿದ್ಧೇವೆ ನೆರೆಗೆ ಮನೆಗಳನ್ನು ಕಳೆದುಕೊಂಡ ಮಾಲೀಕರಿಗೆ ಸರಕಾರದಿಂದ 5 ಲಕ್ಷ ಪರಿಹಾರ ಘೋಷಿಸಿದಂತೆ ಬಾಡಿಗೆ ಮನೆಗಳಲ್ಲಿ ವಾಸವಾಗಿ ನೆರೆಗೆ ತುತ್ತಾದವರಿಗೂ ಸಹ ಕನಿಷ್ಠ 2 ಲಕ್ಷ ಪರಿಹಾರ ನೀಡಿ ನಮ್ಮ ಬದುಕನ್ನು ಕಟ್ಟಿಕೋಳ್ಳಲು ಸರಕಾರ ಮುಂದಾಗಬೇಕು –ರಮೇಶ, ಶೆಡದಲ್ಲಿ ವಾಸವಾಗಿರುವ ನಿರಾಶ್ರಿತ.
ನಗರದ ಹೊರವಲಯದಲ್ಲಿ ತಾತ್ಕಾಲಿಕ ತಗಡಿನ ಶೆಡಗಳಲ್ಲಿ ವಾಸವಾಗಿರುವ ನಿರಾಶ್ರಿತರಿಗೆ ಹೆಸರಿಗೆ ಎಂಬಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ನಿರಾಶ್ರಿತರು ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ತಾಲೂಕಾಡಳಿತ ಎಚ್ಚೆತ್ತುಕೊಂಡು ಸೂಕ್ತ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಮುಂದಾಗಬೇಕು
― ಬಸವರಾಜ ಖಾನಪ್ಪನವರ ಕರವೇ ತಾಲೂಕಾಧ್ಯಕ್ಷರು ಗೋಕಾಕ