RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಗೋಕಾದಲ್ಲಿ ಬಂಡೆ ಕುಸಿತ,ಆತಂಕದಲ್ಲಿ ಸಾರ್ವಜನಿಕರು : ಬಂಡೆಕಲ್ಲು ತೆರುವಿಗೆ ಸುರಕ್ಷಿತ ಕ್ರಮ ಲಖನ್ ಜಾರಕಿಹೊಳಿ

ಗೋಕಾಕ:ಗೋಕಾದಲ್ಲಿ ಬಂಡೆ ಕುಸಿತ,ಆತಂಕದಲ್ಲಿ ಸಾರ್ವಜನಿಕರು : ಬಂಡೆಕಲ್ಲು ತೆರುವಿಗೆ ಸುರಕ್ಷಿತ ಕ್ರಮ ಲಖನ್ ಜಾರಕಿಹೊಳಿ 

ಗೋಕಾದಲ್ಲಿ  ಬಂಡೆ            ಕುಸಿತ,ಆತಂಕದಲ್ಲಿ ಸಾರ್ವಜನಿಕರು : ಬಂಡೆಕಲ್ಲು ತೆರುವಿಗೆ ಸುರಕ್ಷಿತ ಕ್ರಮ ಲಖನ್ ಜಾರಕಿಹೊಳಿ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 21:

 

 

ಕಳೆದ ಎರಡು ತಿಂಗಳುಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಮಲ್ಲಿಕಾರ್ಜುನ/ಮಲ್ಲಿಕಜಾನ ಗುಡ್ಡದ ಮೇಲಿನ ಬಂಡೆಗಳು ಕುಸಿಯುತ್ತಿರುವ ಘಟನೆ ನಡೆದಿದೆ

ಶುಕ್ರವಾರದಿಂದ ಸುರಿಯುತ್ತಿರುವ ಭಾರಿ ಪ್ರಮಾಣದ ಮಳೆಯಿಂದ ಗೋಕಾಕ ನಗರದ ಮಲ್ಲಿಕಾರ್ಜುನ ಗುಡ್ಡದ ಕೆಲ ಬಂಡೆಕಲ್ಲುಗಳು ಕುಸಿದು ಗುಡ್ಡದಲ್ಲಿ ವಾಸಿಸುವ ಜನರಲ್ಲಿ ಆತಂಕ ಸೃಷ್ಟಿ ಮಾಡಿವೆ

ಇದಕ್ಕೆ ಸಂಬಂಧಪಟ್ಟ ಅಲ್ಲಿನ ಸಾರ್ವಜನಿಕರು ಯುವ ಮುಖಂಡ ಲಖನ ಜಾರಕಿಹೊಳಿ ಅವರಿಗೆ ಭೇಟಿಯಾಗಿ ತಮ್ಮ ಅಳಲನ್ನು ತೊಡಿಕೊoಡಿದಾರೆ.ಇದಕ್ಕೆ ಪೂರಕವಾಗಿ ಲಖನ ಜಾರಕಿಹೊಳಿ ಅವರು ಗುಡ್ಡದ ಮೇಲೆ ವಾಸಿಸುವ ಸಾರ್ವಜನಿಕರಿಗೆ ಅಭಯ ಹಸ್ತ ನೀಡಿ ಶಾಸಕ ಸತೀಶ ಜಾರಕಿಹೋಳಿ ಅವರೊಂದಿಗೆ ದೂರವಾಣಿ ಮುಖಾಂತರ ಮಾತನಾಡಿ ತಮ್ಮ ಸ್ವಂತ ಖರ್ಚಿನಲ್ಲಿ ಆ ಬಂಡೆಕಲ್ಲನ್ನು ತೆರವುಗೊಳಿಸಲು ಸುರಕ್ಷಿತ ಕ್ರಮ ಕೈಗೊಂಡಿದ್ದಾರೆ.


ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ಲಖನ ಜಾರಕಿಹೊಳಿ ಅವರು ಸತತ ಸುರಿಯುತ್ತಿರುವ ಮಳೆಯಿಂದ ಮಲ್ಲಿಕಾರ್ಜುನ ಗುಡ್ಡದಲ್ಲಿಯ ಒಂದು ಬಂಡೆಕಲ್ಲುಗಳು ಸ್ವಲ್ಪ ಕುಸಿತ ಕಂಡಿದೆ. ಇಳಕಲ್ ಮತ್ತು ತಮಿಳುನಾಡಿನಿಂದ ತಾಂತ್ರಿಕ ತಂಡಗಳನ್ನು ಕರೆಯಿಸಿ ಆದಷ್ಟು ಬೇಗ ಕುಸಿದ ಕಲ್ಲನ್ನು ಅಲ್ಲಿಂದ ತೆರವುಗೊಳಿಸಲಾಗುವದು ಇದಕ್ಕೆ ಅಲ್ಲಿ ವಾಸಿಸುವ ಜನರು ಆತಂಕ ಪಡಬಾರದು ಎಂದು ಯುವ ಮುಖಂಡ ಲಖನ್ ಜಾರಕಿಹೊಳಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ .

ಈ ಸಂದರ್ಭದಲ್ಲಿ ಬಸವರಾಜ ದೇಶನೂರ, ಆರೀಪ ಪೀರಜಾದೆ, ಸದಾ ಹಡಪದ, ಮಹ್ಮದ್ ಹನೀಪ ಅಂಡಗಿ ,     ಶ್ರೀಮತಿ      ರಂಗವ್ವ ಸನದಿ, ಡಾ.ಸಂಗೋಳ್ಳಿ, ಗೌಡಪ್ಪ ಚ್ವೌಬಾರಿ, ಶ್ರೀಮತಿ  ಬಾಗವ್ವ   ಭಜಂತ್ರಿ ಸೇರಿದಂತೆ ಅನೇಕರು ಇದ್ದರು

 

Related posts: