ಗೋಕಾಕ:ಗೋಕಾಕದಲ್ಲಿ ಬಂಡೆಕಲ್ಲು ಕುಸಿತ , ತಹಶೀಲ್ದಾರ್ ಭೇಟಿ ಪರಿಶೀಲನೆ
ಗೋಕಾಕದಲ್ಲಿ ಬಂಡೆಕಲ್ಲು ಕುಸಿತ , ತಹಶೀಲ್ದಾರ್ ಭೇಟಿ ಪರಿಶೀಲನೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 21 :
ಕಳೆದ ಎರಡು ತಿಂಗಳುಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಮಲ್ಲಿಕಾರ್ಜುನ/ಮಲ್ಲಿಕಜಾನ ಗುಡ್ಡದ ಮೇಲಿನ ಬಂಡೆಕಲ್ಲು ಕುಸಿದ ಸ್ಥಳಕ್ಕೆ ಸೋಮವಾರ ಸಾಯಂಕಾಲ ತಹಶೀಲ್ದಾರ್ ಪ್ರಕಾಶ ಹೋಳೆಪ್ಪಗೋಳ ಭೇಟಿ ನೀಡಿ ಪರಿಶೀಲನೆ ನಡೆಸಿದರು
ನಂತರ ಮಾತನಾಡಿದ ಅವರು ಸತತ ಸುರಿದ ಮಳೆಯಿಂದ ಅತ್ಯಂತ ಹಳೆಯ ಬಂಡೆಕಲ್ಲು ಸ್ವಲ್ಪ ಮಟ್ಟಿಗೆ ಕುಸಿದಿದ್ದೆ, ಸಾರ್ವಜನಿಕರು ಭಯ ಪಡುವ ಅವಶ್ಯಕತೆ ಇಲ್ಲ ಆದಷ್ಟು ಬೇಗ್ ತಾಂತ್ರಿಕ ಅಭಿಯಂತರರಿಂದ ಪರಿಶೀಲಿಸಿ ಬಂಡೆಕಲ್ಲು ತೆರುವುಗೋಳಿಸಲು ಸೂಕ್ತ ಕ್ರಮ ಕೈಗೋಳ್ಳಲಾಗುವದು ಎಂದು ಹೇಳಿದರು
ಈ ಸಂದರ್ಭದಲ್ಲಿ ಸರ್ಕಲ್ ಶಿವಾನಂದ ಹಿರೇಮಠ, ಬಸವರಾಜ ದೇಶನೂರ , ಆರೀಪ ಪೀರಜಾದೆ, ಸದಾ ಹಡಪದ, ಹನೀಫ್ ಅಂಡಗಿ, ಕಿಶೋರ ತೊಟ್ಟಗಟ್ಟಿ, ಆನಂದ ನಿಡಸೊಸಿ, ಸೇರಿದಂತೆ ಇತರರು ಇದ್ದರು