RNI NO. KARKAN/2006/27779|Thursday, December 12, 2024
You are here: Home » breaking news » ಮೂಡಲಗಿ:ಬೋಧಕೇತರ ಕೆಲಸ ಕಾರ್ಯಗಳಲ್ಲಿ ಶಿಕ್ಷಕರನ್ನು ಬಳಸಿಕೋಳ್ಳದಂತೆ ಶಿಕ್ಷಕರ ಆಗ್ರಹ

ಮೂಡಲಗಿ:ಬೋಧಕೇತರ ಕೆಲಸ ಕಾರ್ಯಗಳಲ್ಲಿ ಶಿಕ್ಷಕರನ್ನು ಬಳಸಿಕೋಳ್ಳದಂತೆ ಶಿಕ್ಷಕರ ಆಗ್ರಹ 

ಬೋಧಕೇತರ ಕೆಲಸ ಕಾರ್ಯಗಳಲ್ಲಿ ಶಿಕ್ಷಕರನ್ನು ಬಳಸಿಕೋಳ್ಳದಂತೆ ಶಿಕ್ಷಕರ ಆಗ್ರಹ

 
ನಮ್ಮ ಬೆಳಗಾವಿ ಇ – ವಾರ್ತೆ , ಮೂಡಲಗಿ ಅ 22 :

 

 

ಪ್ರಾಥಮಿಕ ಶಾಲಾ ಶಿಕ್ಷಕರನ್ನು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ (ಬಿ.ಎಲ್.ಒ) ತಾಲೂಕಿನ ದಂಡಾಧಿಕಾರಿಗಳು, ಪುರಸಭೆ ಮತ್ತು ಪಂಚಾಯತ ಮುಖ್ಯಾಧಿಕಾರಿಗಳು ನಿಯೋಜಿಸಿದ್ದಾರೆ. ಬೋಧಕೇತರ ಕೆಲಸ ಕಾರ್ಯಗಳಲ್ಲಿ ಶಿಕ್ಷಕರು ತೊಡಗುವದರಿಂದ ಶೈಕ್ಷಣಿಕ ಕಾರ್ಯಚಟುವಟಿಕೆಗಳು ಕುಂಠಿತವಾಗುತ್ತಿವೆ ಎಂದು ಮೂಡಲಗಿ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವತಿಯಿಂದ ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಿ ತಮಗಾಗುತ್ತಿರುವ ತೊಂದರೆಗಳ ಕುರಿತು ತಿಳಿಸಿದ್ದಾರೆ.
ಪಟ್ಟಣದಲ್ಲಿ ಮಂಗಳವಾರ ತಹಶೀಲ್ದಾರರವರಿಗೆ ಮನವಿ ಸಲ್ಲಿಸಿದ ಅವರು ಪ್ರಸಕ್ತ ವರ್ಷ ಮಳೆಯಿಂದಾಗಿ ತಾಲೂಕಿನಲ್ಲಿ ಬಹುತೇಕ ಶಾಲೆಗಳು ಪ್ರವಾಹ ಪೀಡಿತವಾಗಿ ಶೈಕ್ಷಣಿಕ ಕಾರ್ಯಚಟುವಟಿಕೆಗಳಿಗೆ ತೊಂದರೆಯಾಗಿದೆ. ಸರಕಾರಿ ಶಾಲೆಗಳ ಹಾಗೂ ಮಕ್ಕಳ ಭವಿಷ್ಯದ ಹಿತದೃಷ್ಠಿಯಿಂದ ಮಾರಕವಾಗಿದೆ. ಸಾರ್ವಜನಿಕವಾಗಿ ಶಿಕ್ಷಕರುಗಳಿಗೆ ತೀವೃ ತೊಂದರೆಯಾಗುತ್ತಿದೆ. ಶಾಲಾ ಮಕ್ಕಳಿ ಬೋಧನೆ, ಶೈಕ್ಷಣಿಕ ಕಾರ್ಯಚಟುವಿಕೆಗಳ ಕುಂಠಿತ, ಶಾಲಾ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಗಮನ ನೀಡಲು ಅವಕಾಶ ಇಲ್ಲದಂತಾಗಿದೆ.ಸರಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಮೂಡುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಮನವಿ ಸ್ವೀಕರಿಸದ ತಹಶೀಲ್ದಾರ ಡಿ.ಜೆ ಮಹಾತ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಆಗುತ್ತಿರುವ ತೊಂದರೆಗಳ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರುವದಾಗಿ ಹೇಳಿದರು.
ಈ ಸಂದರ್ಭದಲ್ಲಿ ತಾಲೂಕಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಆರ್ ತರಕಾರ, ಕಾರ್ಯದರ್ಶಿ ಎಲ್ ಎಮ್ ಬಡಕಲ, ಜಿಲ್ಲಾ ಕಾರ್ಯದರ್ಶಿ ಎಸ್.ಎಮ್ ಲೋಕನ್ನವರ, ಸಂಘಟನಾ ಕಾರ್ಯದರ್ಶಿ ವಾಯ್.ಡಿ ಜಲ್ಲಿ, ಖಜಾಂಚಿ ಎಸ್.ಎಲ್ ಪಾಟೀಲ, ಸಂಘಟನೆಯ ಆರ್.ಎಮ್ ಮಹಾಲಿಂಗಪೂರ, ಮಾಲತೇಶ ಸಣ್ಣಕ್ಕಿ, ಎಸ್.ಜಿ ಗುಡಗುಡಿ, ಕೆ.ಆರ್ ಅಜ್ಜಪ್ಪನವರ, ಎಮ್.ಜಿ ಮಾವಿನಗಿಡದ, ಅಶೋಕ ರಾಗನ್ನವರ, ಎಸ್.ಎಮ್ ನಾಗನೂರ, ರಾಜು ಕಂಕಣವಾಡಿ, ಸರೇಶ ತಳವಾರ, ಜಿ.ಬಿ ನಾಯಿಕ, ಎಸ್.ಎಮ್ ಮಂಗಿ, ರಾಜು ಕೋಳದುರ, ಕೆ.ಎಲ್.ಮೀಶಿ, ಪಿ.ಬಿ ಕುಲಕರ್ಣಿ, ಎಸ್.ಎಸ್ ಪಾಟೀಲ ಮತ್ತು ವಲಯದ ಬಿ.ಎಲ್.ಒಗಳು ಹಾಜರಿದ್ದರು.

Related posts: