ಗೋಕಾಕ:ಬೆಳ್ಳಂ ಬೆಳಗ್ಗೆ ಬಂಡೆ ಕೊರೆಯುವ ಕೆಲಸಕ್ಕೆ ಅನಿಯಾದ ಎನ್ ಡಿ ಆರ್ ಎಫ್ ತಂಡ ಮತ್ತು ಸತೀಶ ಜಾರಕಿಹೊಳಿ ಫೌಂಡೇಶನ್
ಬೆಳ್ಳಂ ಬೆಳಗ್ಗೆ ಬಂಡೆ ಕೊರೆಯುವ ಕೆಲಸಕ್ಕೆ ಅನಿಯಾದ ಎನ್ ಡಿ ಆರ್ ಎಫ್ ತಂಡ ಮತ್ತು ಸತೀಶ ಜಾರಕಿಹೊಳಿ ಫೌಂಡೇಶನ್
ನಮ್ಮ ಬೆಳಗಾವಿ ಇ -ವಾರ್ತೆ , ಗೋಕಾಕ ಅ 23 :
ಸತತ ಸುರಿಯುತ್ತಿರುವ ಮಳೆಯಿಂದ ಗುಡ್ಡದ ಮೇಲಿನ ಬಂಡೆಕಲ್ಲುಗಳು ಕುಸಿಯುತ್ತಿರುವದರಿಂದ ಭಯ ಭೀತಗೊಂಡಿರುವ ಮಲ್ಲಿಕಾರ್ಜುನ/ ಮಲ್ಲಿಕಸಾಬ ಗುಡ್ಡದ ಮೇಲೆ ವಾಸಿಸುತ್ತಿರುವ ಸಾರ್ವಜನಿಕರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ
ಬುಧವಾರದಂದು ಬೆಳ್ಳಿಯೇ ಬಂಡೆ ಕೋರೆಯುವ ಕಾರ್ಯಕ್ಕೆ ಅನಿಯಾಗಿರುವ ಎನ್ ಡಿ ಆರ್ ಎಫ್ ತಂಡಕ್ಕೆ ಸ್ಥಳೀಯ ಸತೀಶ್ ಪೌಂಡೇಶನ್ ಕಾರ್ಯಕರ್ತರು ಸಾಥ ನೀಡಿದ್ದಾರೆ. ಈಗಾಗಲೇ ಇಟಾಚಿ ಮೂಲಕ ಬಂಡೆ ಇರುವ ಸ್ಥಳ ತಲುಪಿರುವ ಸತೀಶ್ ಪೌಂಡೇಶನ್ ಮತ್ತು ಎನ್ ಡಿ ಆರ್ ಎಫ್ ತಂಡ ಕಾರ್ಯಚರಣೆಯಲ್ಲಿ ತೊಡಗಿದ್ದಾರೆ
ನಿನ್ನೆ ಬೆಳಗಿನಿಂದಲೂ ಸಹ ಕಾರ್ಯಾಚರಣೆ ಪ್ರಾರಂಭ ಮಾಡಿದ್ದ ಸತೀಶ್ ಪೌಂಡೇಶನ್, ೨೨೦ ಟನ್ ಇರುವ ಬಂಡೆಯನ್ನು ೪-೫-೩- ಟನ್ ಗಳಾಗಿ ಕಟ್ ಮಾಡಿ ಕೆಳಗೆ ತರುವ ಕಾರ್ಯಕ್ಕೆ ಈ ಎರೆಡು ತಂಡಗಳು ಅನಿಯಾಗಿವೆ
ಬಂಡೆಯನ್ನು ಕಟ್ ಮಾಡಿ ಕೆಳಗೆ ತರುವ ಕೆಲಸಕ್ಕೆ ಅನಿಯಾಗಲಿರುವ ಎನ್ ಡಿ ಆರ್ ಎಫ್ ತಂಡ, ಈಗಾಗಲೇ ಬೆಟ್ಟದ ಕೆಳಗಿರುವ ಮನೆಗಳನ್ನು ಖಾಲಿ ಮಾಡಿ ಎಂದು ನಗರಸಭೆ ವತಿಯಿಂದ ಡೊಂಗುರ ಸಾರಿ ಸುರಕ್ಷಿತ ಕ್ರಮ ಕೈಗೊಂಡಿದೆ .
ಸ್ಥಳದಲ್ಲಿ ಬಿಡುಬಿಟ್ಟಿರುವ ಅಧಿಕಾರಿಗಳು : ಬಂಡೆ ಕೋರೆಯುವ ಕಾರ್ಯಚರಣೆಯ ಸ್ಥಳದಲ್ಲಿ ಬಿಡು ಬಿಟ್ಟಿರುವ ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ, ಎನ್ ಡಿ ಆರ್ ಎಫ್ ತಂಡದ ಮುಖ್ಯಸ್ಥ ಬಿ.ಆರ್.ಪ್ರಸಾದರಾವ್ ಕಾರ್ಯಾಚರಣೆಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ .ಮಳೆ ನಿಂತರೆ ಸಾಯಂಕಾಲದ ವರೆಗೆ ಕಾರ್ಯಚರಣೆ ಮುಗಿಯುವ ನೀರಿಕ್ಷೆ ಇದೆ ಎಂದು ಹೇಳಲಾಗುತ್ತಿದ್ದೆ