ಗೋಕಾಕ:ಭರದಿಂದ ಸಾಗಿದೆ ಬಂಡೆಗಲ್ಲುಗಳ ಕೋರೆಯುವ ಕಾರ್ಯ : ಸಾಯಂಕಾಲದ ವರೆಗೆ ಪೂರ್ಣಗೊಂಡ 221 ಟನ್ ಗಾತ್ರದ ಬಂಡೆಗಲ್ಲು ತೆರವು ಕಾರ್ಯಾಚರಣೆ
ಭರದಿಂದ ಸಾಗಿದೆ ಬಂಡೆಗಲ್ಲುಗಳ ಕೋರೆಯುವ ಕಾರ್ಯ : ಸಾಯಂಕಾಲದ ವರೆಗೆ ಪೂರ್ಣಗೊಂಡ 221 ಟನ್ ಗಾತ್ರದ ಬಂಡೆಗಲ್ಲು ತೆರವು ಕಾರ್ಯಾಚರಣೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 23 :
ಸತತ ಸುರಿಯುತ್ತಿರುವ ಮಳೆಯಿಂದ ಗುಡ್ಡದ ಮೇಲಿನ ಬಂಡೆಕಲ್ಲುಗಳು ಕುಸಿಯುತ್ತಿರುವದರಿಂದ ಭಯ ಭೀತಗೊಂಡಿರುವ ಮಲ್ಲಿಕಾರ್ಜುನ/ ಮಲ್ಲಿಕಸಾಬ ಗುಡ್ಡದ ಮೇಲೆ ವಾಸಿಸುತ್ತಿರುವ ಸಾರ್ವಜನಿಕರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ
ಬುಧವಾರದಂದು ಬೆಳ್ಳಿಯೇ ಬಂಡೆ ಕೋರೆಯುವ ಕಾರ್ಯಕ್ಕೆ ಅನಿಯಾಗಿರುವ ಎನ್ ಡಿ ಆರ್ ಎಫ್ ತಂಡಕ್ಕೆ ಸ್ಥಳೀಯ ಸತೀಶ್ ಪೌಂಡೇಶನ್ ಕಾರ್ಯಕರ್ತರು ಸಾಥ ನೀಡಿದ್ದಾರೆ. ಈಗಾಗಲೇ ಇಟಾಚಿ ಮೂಲಕ ಬಂಡೆ ಇರುವ ಸ್ಥಳ ತಲುಪಿರುವ ಸತೀಶ್ ಪೌಂಡೇಶನ್ ಮತ್ತು ಎನ್ ಡಿ ಆರ್ ಎಫ್ ತಂಡ ಕಾರ್ಯಚರಣೆಯಲ್ಲಿ ತೊಡಗಿದ್ದಾರೆ
ನಿನ್ನೆ ಬೆಳಗಿನಿಂದಲೂ ಸಹ ಕಾರ್ಯಾಚರಣೆ ಪ್ರಾರಂಭ ಮಾಡಿದ್ದ ಸತೀಶ್ ಪೌಂಡೇಶನ್, ೨೨೦ ಟನ್ ಇರುವ ಬಂಡೆಯನ್ನು ೪-೫-೩- ಟನ್ ಗಳಾಗಿ ಕಟ್ ಮಾಡಿ ಕೆಳಗೆ ತರುವ ಕಾರ್ಯಕ್ಕೆ ಈ ಎರೆಡು ತಂಡಗಳು ಅನಿಯಾಗಿವೆ
ಬಂಡೆಯನ್ನು ಕಟ್ ಮಾಡಿ ಕೆಳಗೆ ತರುವ ಕೆಲಸಕ್ಕೆ ಅನಿಯಾಗಲಿರುವ ಎನ್ ಡಿ ಆರ್ ಎಫ್ ತಂಡ, ಈಗಾಗಲೇ ಬೆಟ್ಟದ ಕೆಳಗಿರುವ ಮನೆಗಳನ್ನು ಖಾಲಿ ಮಾಡಿ ಎಂದು ನಗರಸಭೆ ವತಿಯಿಂದ ಡೊಂಗುರ ಸಾರಿ ಸುರಕ್ಷಿತ ಕ್ರಮ ಕೈಗೊಂಡಿದೆ .
ಬೃಹದಾಕಾರದ ಬಂಡೆ ಕೋರೆಯುವ ಕಾರ್ಯಕ್ಕೆ ಚಾಲನೆ : ಕಳೆದ ಮೂರು ದಿನಗಳಿಂದ ಗೋಕಾಕ ಜನತೆಯಲ್ಲಿ ಭಯ ಹುಟ್ಟಿಸಿರುವ ಬೃಹದಾಕಾರದ ಬಂಡೆಗಲ್ಲುಗಳ ತೆರುವಿನ ಕಾರ್ಯಾಚರಣೆ ಪ್ರಾರಂಭಗೊಂಡಿದ್ದು , ರಾಜಸ್ಥಾನ ಮೂಲದ ಬೀಮಾ, ಆನಂದ ಕುಮಾರ , ರಹೀಮ ಸೇರಿದಂತೆ ಇತರರು ಬಂಡೆಕೋರೆಯುವ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ .ಮಧ್ಯಾಹ್ನ 12 ಘಂಟೆಗೆ ಪ್ರಾರಂಭಗೊಂಡ ಕಾರ್ಯಾಚರಣೆ ಸಾಯಂಕಾಲದವರೆಗೆ 221 ಟನ್ ನ ಬೃಹದಾಕಾರದ ಬಂಡೆಗಲ್ಲನ್ನು ಐದೈದು ಅಡ್ಡಿಯಂತೆ ಬ್ಲಾಸ್ಟ ಮಾಡಿ ಒಂದು ಬಂಡೆಯನ್ನು ಪೂರ್ತಿಯಾಗಿ ತೆರುವುಗೋಳಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬಂಡೆಗಲ್ಲುಗಳು ಉರುಳಿ ಕೆಳಗಡೆ ಹೋಗದಂತೆ ಹಿಟಾಚಿಯಿಂದ ಸುಮಾರು 10 ಅಡ್ಡಿ ತೆಗ್ಗು ಕೋರೆಯಲಾಗಿದೆ.
ಕಾರ್ಯಾಚರಣೆಗೆ ಮಳೆ ಅಡ್ಡಿ : ಮಧ್ಯಾಹ್ನ ಸುಮಾರು 12 ಘಂಟೆಯಿಂದ ಪ್ರಾರಂಭವಾಗಿರುವ ಬಂಡೆಕಲ್ಲುಗಳು ಕೋರೆಯುವ ಕಾರ್ಯಾಚರಣೆಗೆ ಸತತ ಸುರಿಯುತ್ತಿರುವ ಮಳೆ ಅಡ್ಡಿಯಾಯಿತ್ತು .ಕಳೆದ ನಾಲ್ಕು ದಿನಗಳಿಂದ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿರುವ ಬೃಹದಾಕಾರದ ಬಂಡೆಗಲ್ಲುಗಳ ಕಾರ್ಯಾಚರಣೆಗೆ ಇಂದು ಚಾಲನೆ ಸಿಕ್ಕಿತಾದರು ಮಳೆರಾಯನ ಆಗಮನ ಅಡ್ಡಿಪಡೆಸಿದ್ದರಿಂದ ಕೆಲಕಾಲ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಮಳೆ ನಿಂತ ಮೇಲೆ ಮತ್ತೆ ಕಾರ್ಯಚರಣೆ ಪ್ರಾರಂಭವಾಗಿ ಸುಮಾರು 221 ಟನ್ ಬೃಹದಾಕಾರದ ಬಂಡೆಗಲ್ಲುನ್ನು ಜಿಲೆಟಿನ್ ಸಹಾಯದಿಂದ (ಬ್ಲಾಸ್ಟಿಂಗ) ಫೌಡರ ಹಾಕಿ 20 ಅಡಿ ಅಗಲದ ಬಂಡೆಗಲ್ಲನ್ನು ಸುಮಾರು ಐದೈದು ಅಡ್ಡಿಯಷ್ಟು ಛೀದ್ರಗೋಳಿಸಲಾಯಿತ್ತು
ಸ್ಥಳದಲ್ಲಿ ಬಿಡುಬಿಟ್ಟಿರುವ ಅಧಿಕಾರಿಗಳು : ಬಂಡೆ ಕೋರೆಯುವ ಕಾರ್ಯಚರಣೆಯ ಸ್ಥಳದಲ್ಲಿ ಬಿಡು ಬಿಟ್ಟಿರುವ ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ, ಎನ್ ಡಿ ಆರ್ ಎಫ್ ತಂಡದ ಮುಖ್ಯಸ್ಥ ಬಿ.ಆರ್.ಪ್ರಸಾದರಾವ್ ಕಾರ್ಯಾಚರಣೆಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ. ಸಿಪಿಐ ಶ್ರೀಧರ ಸತಾರೆ ಅವರ ನೇತೃತ್ವದಲ್ಲಿ ಸೂಕ್ತ ಪೊಲೀಸ ಬಂದೋಬಸ್ತ್ ಕಲ್ಪಿಸಲಾಗಿದೆ.
ಕಾರ್ಯಾಚರಣೆ ನೋಡಲು ತಂಡೋಪ ತಂಡವಾಗಿ ಬರುತ್ತಿರುವ ಜನರು : ಮಲ್ಲಿಕಾರ್ಜುನ/ಮಲ್ಲಿಕಸಾಬ ಗುಡ್ಡದಲ್ಲಿ ಕುಸಿದಿರುವ ಬೃಹದಾಕಾರದ ಬಂಡೆಗಲ್ಲುಗಳ ತೆರುವು ಕಾರ್ಯಾಚರಣೆಯನ್ನು ನೋಡಲು ಜನರು ತಂಡೋಪ ತಂಡವಾಗಿ ಗುಡ್ಡದ ಮೇಲೆ ಬರುತ್ತಿದ್ದು , ಪೊಲೀಸರು ಜನರನ್ನು ಚದುರಿಸಲು ಹರಸಹಾಸ ಪಡುತ್ತಿದ್ದಾರೆ.
ಎನ್.ಡಿ ಆರ್ ಎಫ್ ಮತ್ತು ಸತೀಶ ಪೌಂಡೇಶನ್ ಭಾಗಿ : ಮಳೆಯಿಂದ ಕುಸಿತ ಕಂಡಿರುವ ಬೃಹದಾಕಾರದ ಬಂಡೆಗಲ್ಲುಗಳನ್ನು ತೆರೆವುಗೊಳಿಸುವ ಕಾರ್ಯದಲ್ಲಿ ಮಹಾರಾಷ್ಟ್ರ ಪುಣೆಯಿಂದ ಆಗಮಿಸಿರುವ ಎನ್.ಡಿ.ಆರ್.ಎಫ್ ನ 25 ಜನ ಯೋಧರು ಮತ್ತು ಸತೀಶ ಜಾರಕಿಹೊಳಿ ಅವರ ಗ್ರ್ಯಾನೆಟ್ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರು ಭಾಗಿಯಾಗಿ ಬಂಡೆಗಲ್ಲು ಬ್ಲಾಸ್ಟ್ ಮಾಡುವಲ್ಲಿ ಸಹಕರಿಸುತ್ತಿದ್ದರೆ ಅವರಿಗೆ ಬೇಕಾಗುವ ಅವಶ್ಯಕ ವಸ್ತುಗಳನ್ನು ಕೆಳಗಿನಿಂದ ಪೂರೈಸಲು ಸತೀಶ ಜಾರಕಿಹೊಳಿ ಪೌಂಡೇಶನ್ ಸದಸ್ಯರು ಸಹಾಯ ಮಾಡುತ್ತಿದ್ದಾರೆ.