ಗೋಕಾಕ:ಸಮಾಜ ಸೇವೆಯೇ ಬೇರೆ, ರಾಜಕೀಯವೇ ಬೇರೆ : ಬಂಡೆಗಲ್ಲುಗಳ ತೆರವು ಕಾರ್ಯಚರಣೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸತೀಶ
ಸಮಾಜ ಸೇವೆಯೇ ಬೇರೆ, ರಾಜಕೀಯವೇ ಬೇರೆ : ಬಂಡೆಗಲ್ಲುಗಳ ತೆರವು ಕಾರ್ಯಚರಣೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸತೀಶ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 23 :
ಸಮಾಜ ಸೇವೆಯೇ ಬೇರೆ, ರಾಜಕೀಯವೇ ಬೇರೆ ರಾಜಕೀಯಕ್ಕೂ ಬಂಡೆ ತೆರವು ಕಾರ್ಯಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು
ಬುಧವಾರದಂದು ನಗರದ ಮಲ್ಲಿಕಾರ್ಜುನ/ ಮಲ್ಲಿಕಸಾಬ ಗುಡ್ಡದ ಮೇಲೆ ಕುಸಿದಿರುವ ಬಂಡೆಗಲ್ಲುಗಳ ತೆರವು ಕಾರ್ಯಾಚರಣೆ ಸ್ಥಳಕ್ಕೆ ಬೇಟಿನೀಡಿದ ನಂತರ ಸುದ್ದಿಗಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.
ತುರ್ತು ಸಂದರ್ಭದಲ್ಲಿ ಸಾರ್ವಜನಿಕರಿಗೆ ನೆರವು ನೀಡಲು ನಾವು ಸದಾಸಿದ್ದರಿದ್ದು, ಅವಕಾಶ ಸಿಕ್ಕಲ್ಲಿ ಸಾಮಾಜ ಸೇವೆ ಮಾಡಿದ್ದೇವೆ. ಇದು ಪಬ್ಲಿಕ್ ಕೆಲಸ ಇದು ಯಾರ ಬೇಕಾದ್ರು ಮಾಡಬಹುದು.ನಮ್ಮದೆ ಯಾದ ಬ್ಲ್ಯಾಸ್ಟಿಂಗ್ ಟಿಂ, ಟೆಕ್ನಿಕಲ್ ಟಿಂ ಇದೆ ಅವಕಾಶ ಸಿಕ್ಕಾಗ ಅವುಗಳನ್ನು ಬಳಸಿಕೊಳ್ಳುತ್ತೇವೆ. ಈಗಾಗಲೇ ಒಂದು ಬಂಡೆ ತೆರವುಗೊಳಿಸಲಾಗಿದೆ.ಇನ್ನೊಂದು ಬಂಡೆ ತೆರವುಗೊಳಿಸಿದ್ರೆ ಭಯ ದೂರವಾಗಲಿದೆ.ಇನ್ನೊಂದು ಬಂಡೆ ತೆರವು ಬಗ್ಗೆ ಅಧಿಕಾರಗಳು ನಿರ್ಣಯ ಮಾಡ್ತಾರೆ ನಂತರ ಆ ಕಾರ್ಯಾಚರಣೆಯನ್ನು ಸಹ ಮಾಡಲಾಗುವದು ಎಂದ ಸತೀಶ , ರಮೇಶ ಜಾರಕಿಹೊಳಿ ಜನರ ಸಮಸ್ಯೆಗಳನ್ನು ತಿಳಿದುಕೊಂಡು ಕೆಲಸ ಮಾಡಬೇಕು.ನಾವು ಅವರಿಗೆ ಏನು ಹೇಳೊಕೆ ಆಗಲ್ಲ ಎಂದ ಅವರು ನಾನೇನು ಬಂಡೆಗಲ್ಲಿಗೆ ಸರಿ ಅಂತ ಹೇಳಿಲ್ಲ. ನನ್ನ ಸ್ವತಃ ಖರ್ಚಿನಲ್ಲಿ ಕೆಲಸ ಮಾಡುತ್ತಿದ್ದೇನೆ
ಫೋಟೋ, ಬ್ಯಾನರ್ ಹಾಕೋದ್ರಲ್ಲಿ ತಪ್ಪಿಲ್ಲ.
ನಾನೇನು ನಗರಸಭೆ ಹೆಸರಲ್ಲಿ ಮೋಸ ಮಾಡಿಲ್ಲ.
ಸ್ವತಃ ಹಣದಲ್ಲಿ ಕೆಲಸ ಮಾಡುತ್ತಿದ್ದೇನೆ .
ಚುನಾವಣೆ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡಿದ್ದೇವೆ
ನಗರಸಭೆ ಅವ್ಯಹಾರದ ಬಗ್ಗೆ ಇಷ್ಟರಲ್ಲಿಯೆ ಇನ್ನೋಂದು ಹಾಡು ರೀಲಿಸ್ ಆಗಲಿದೆ ಕಾದು ನೋಡಿ ಎಂದು ಹೇಳಿದರು
ಈ ಸಂದರ್ಭದಲ್ಲಿ ಆತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ, ಎನ್ .ಡಿ.ಆರ್.ಎಫ್. ತಂಡದ ಮುಖ್ಯಸ್ಥ ಬಿ.ಎಸ್.ಪ್ರಸಾದರಾವ್ ಆರೀಪ ಪೀರಜಾದೆ, ಅಯ್ಯೂಬ ಖಾನ ಸೇರಿದಂತೆ ಇತರರು ಇದ್ದರು