ಗೋಕಾಕ:ನಗರಸಭೆಗೆ ಭೇಟಿ ನೀಡುತ್ತಿರುವದರಿಂದ ಜನತೆಗೆ ನಗರಸಭೆಯಿಂದ ಆಗುತ್ತಿದ್ದ ತೊಂದರೆಗಳು ಕಡಿಮೆಯಾಗಿವೆ : ಶಾಸಕ ಸತೀಶ
ನಗರಸಭೆಗೆ ಭೇಟಿ ನೀಡುತ್ತಿರುವದರಿಂದ ಜನತೆಗೆ ನಗರಸಭೆಯಿಂದ ಆಗುತ್ತಿದ್ದ ತೊಂದರೆಗಳು ಕಡಿಮೆಯಾಗಿವೆ : ಶಾಸಕ ಸತೀಶ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 23:
ಈಗಾಗಲೇ ನಾವು ನಗರಸಭೆಗೆ ಮೇಲಿಂದ ಮೇಲೆ ಭೇಟಿ ನೀಡುತ್ತಿರುವದರಿಂದ ಇಲ್ಲಿಯ ಜನತೆಗೆ ನಗರಸಭೆಯಿಂದ ಆಗುತ್ತಿದ್ದ ತೊಂದರೆಗಳು ಕಡಿಮೆಯಾಗಿವೆ ಎಂದು ಮಾಜಿ ಸಚಿವ ಹಾಗೂ ಶಾಸಕ ಸತೀಶ ಜಾರಕಿಹೊಳಿ ಹೇಳಿದರು
ಬುಧವಾರದಂದು ಸಾಯಂಕಾಲ ಇಲ್ಲಿನ ನಗರಸಭೆ ಕಾರ್ಯಾಲಯಕ್ಕೆ ಭೇಟಿ ನೀಡಿ ಜನತೆಯ ಸಮಸ್ಯೆಗಳನ್ನು ಆಲಿಸಿ, ಅಧಿಕಾರಿಗಳು ಹಾಗೂ ನಗರಸಭೆ ಸದಸ್ಯರೊಂದಿಗೆ ಚರ್ಚೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜನ ಸಾಮಾನ್ಯರ ಕೆಲಸ ಕಾರ್ಯಗಳನ್ನು ಮಾಡಲು ಮೀನಾ ಮೇಷ ಎನಿಸುತ್ತಿದ್ದ ಅಧಿಕಾರಿಗಳ ಕಾರ್ಯ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ . ನಾವು ಇದೆ ರೀತಿಯಾಗಿ ವಾರಕ್ಕೊಮ್ಮೆ ಭೇಟಿನೀಡಿ ಜನರ ಸಮಸ್ಯೆಗಳನ್ನು ಆಲಿಸುವುದಾಗಿ ತಿಳಿಸಿದರು. ಈಗಾಗಲೇ ಪೌರಕಾರ್ಮಿಕರ ವೇತನದಿಂದ 17 ನೂರ ರೂಗಳ ಕಮಿಷನ್ ಪಡೆಯುವ ಕಾರ್ಯ ಬಂದದಾಗಿದ್ದು ಮತ್ತು ನಗರದಲ್ಲಿ ಬೀದಿ ದೀಪಗಳ ಅಳವಡಿಕೆ ಕಾರ್ಯ ಸರಳವಾಗಿ ನಡೆಯುತ್ತಿವೆ ಇನ್ನು ಮುಂದಿನ ಸಮಸ್ಯೆಗಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇವೆ .
ಪ್ರಮುಖ ಸಮಸ್ಯೆಗಳಾದ 24×7 ಕುಡಿಯುವ ನೀರಿನ ಸಮಸ್ಯೆ ಹಾಗೂ ಒಳ ಚರಂಡಿ ಕಾಮಗಾರಿಯ ಬಗ್ಗೆ ಗಮನ ಹರಿಸಿ ಆ ಸಮಸ್ಯೆಗಳನ್ನು ಸಹ ಶೀಘ್ರದಲ್ಲೇ ಬಗೆ ಹರಿಸಲಾಗುವದು ಎಂದು ಶಾಸಕ ಸತೀಶ ಜಾರಕಿಹೊಳಿ ತಿಳಿಸಿದರು
ಗುಡ್ಡದ ಹತ್ತಿರ ರಿ.ಸ.ನಂ 221 ರಲ್ಲಿಯ ನಿವಾಸಿಗಳಿಗೆ ನಗರಸಭೆಯವರು ಮನೆ ಕರೆ ತುಂಬಿಸಿ ಕೋಳ್ಳುತ್ತಿದ್ದಾರೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಇದೊಂದು ಜಠಿಲ ಸಮಸ್ಯೆಯಾಗಿದ್ದು, ಉಪ ಚುನಾವಣೆಯ ನಂತರ ಇದರ ಬಗ್ಗೆ ಗಮನ ಹರಿಸಿ ಅಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲು ಕ್ರಮ ಕೈಗೋಳ್ಳಲಾಗುವದು.
ನೆರೆ ಸಂತ್ರಸ್ತರ ಸಮಸ್ಯೆಗಳ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದ ಅವರು ಸರ್ವೆ ಕಾರ್ಯದಲ್ಲಿ ಕೆಲವು ಲೋಪದೋಶಗಳಾಗಿದ್ದು ಮತ್ತು ಮನೆಗಳ ಸರ್ವೆ ಕಾರ್ಯ ದಲ್ಲಿ ಎ,ಬಿ ಮತ್ತು ಸಿ ಕೇಟಗೇರಿಯಲ್ಲಿ ಸಮಸ್ಯೆ ಆಗಿದ್ದು , ಸುಮೀ 248 ಜನ ಸಂತ್ರರ ಹೆಸರುಗಳು ತಾಂತ್ರಿಕ ದೋಷದಿಂದ ಮಾಯವಾಗಿವೆ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರುವದರೋಳಗಾಗಿ ತಾಲೂಕಾಡಳಿತ ನೇತೃತ್ವದಲ್ಲಿ ಅಧಿಕಾರಿಗಳ ಸಭೆಯನ್ನು ನಡೆಯಿಸಿ ಪರಿಹಾರ ಕಂಡುಕೋಳ್ಳಲಾಗುವದು. ಒಟ್ಟಿನಲ್ಲಿ ಸ್ವಲ್ಪ ಮಟ್ಟಿನ ನಗರಸಭೆ ಅಧಿಕಾರಿಗಳ ಕಾರ್ಯನಿರ್ವಹಣೆ ನೆಮ್ಮದಿ ತಂದಿದೆ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು .