RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ನಿಟ್ಟುಸಿರು ಬಿಟ್ಟ ಗುಡ್ಡದ ಜನ : ಯಶಸ್ವಿಯಾಗಿ ಮುಗಿದ ಬಂಡೆಗಲ್ಲುಗಳ ತೆರವು ಕಾರ್ಯಾಚರಣೆ

ಗೋಕಾಕ:ನಿಟ್ಟುಸಿರು ಬಿಟ್ಟ ಗುಡ್ಡದ ಜನ : ಯಶಸ್ವಿಯಾಗಿ ಮುಗಿದ ಬಂಡೆಗಲ್ಲುಗಳ ತೆರವು ಕಾರ್ಯಾಚರಣೆ 

ನಿಟ್ಟುಸಿರು ಬಿಟ್ಟ ಗುಡ್ಡದ ಜನ : ಯಶಸ್ವಿಯಾಗಿ ಮುಗಿದ ಬಂಡೆಗಲ್ಲುಗಳ ತೆರವು ಕಾರ್ಯಾಚರಣೆ

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 24 :

 

ಕೆಳೆದ ಮೂರನಾಲ್ಕು ದಿನಗಳಿಂದ ಮಲ್ಲಿಕಸಾಬ / ಮಲ್ಲಿಕಾರ್ಜುನ ಗುಡ್ಡದ ಜನರ ನಿದ್ದೆ ಕೆಡಸಿರುವ ಬೃಹದಾಕಾರದ ಬಂಡೆಗಲ್ಲುಗಳ ತೆರವು ಕಾರ್ಯಾಚರಣೆ ಗುರುವಾರದಂದು ಸಾಯಂಕಾಲ ಯಶಸ್ವಿಯಾಗಿ ಪೂರ್ಣಗೊಂಡಿತ್ತು

ಕಳೆದ ಮೂರುದಿನಗಳಿಂದ ಈ ಬೃಹದಾಕಾರದ ಬಂಡೆಗಲ್ಲುಗಳನ್ನು ತೆರುವು ಗೋಳಿಸುವ ಕಾರ್ಯಾಚರಣೆಯಲ್ಲಿ ಪುಣೆಯ ಎನ್.ಡಿ.ಆರ್.ಎಫ್ ತಂಡದ 25 ಜನರ ಸದಸ್ಯರು , ರಾಜಸ್ಥಾನ ,ಇಳಕಲ್ ನ ಬಂಡೆಕಲ್ಲು ಕೋರೆಯುವ ತಜ್ಞರು ಸತತ ಕಾರ್ಯಾಚರಣೆಯಲ್ಲಿ ತೊಡಗಿ ಕಾರ್ಯಚರಣೆಯನ್ನು ಯಶಸ್ವಿ ಗೋಳಿಸಿದರು

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋ಼ಳ ಅವರು ಬೃಹದಾಕಾರದ ಬಂಡೆಗಲ್ಲು ತೆರುವು ಕಾರ್ಯಾಚರಣೆ ಅತ್ಯಂತ ಸಾವಾಲಿನದ್ದಾಗಿತ್ತು , ಎನ್.ಡಿ‌.ಆರ್.ಎಫ್ ಯೋಧರ ತಂಡ, ಸತೀಶ ಪೌಂಡೇಶನ್ ಮತ್ತು ಸ್ಥಳೀಯ ಎಕ್ಸಪ್ಲೋರ ದಿ.ಔಡ್ಡೋರ ತಂಡದ ಸಹಾಯದಿಂದ ಸತತ ಮೂರುದಿನಗಳ ಕಾರ್ಯಾಚರಣೆ ಯಶಸ್ವಿ ಕಂಡಿದೆ ಎಂದ ತಹಶೀಲ್ದಾರ್ ಅವರು ಈ ಕಾರ್ಯಚರಣೆಗೆ ಪ್ರತ್ಯೇಕವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ತಾಲೂಕಾಡಳಿತ ವತಿಯಿಂದ ಧನ್ಯವಾದಗಳು ಅರ್ಪಿಸಿದರು.

ಸತತ ಮೂರುದಿನಗಳ ಕಾಲ ನಡೆದ ತೆರುವು ಕಾರ್ಯಾಚರಣೆಯಲ್ಲಿ 211 ಮತ್ತು 110 ಟನಗಳ ಬೃಹದಾಕಾರದ ಬಂಡೆಗಲ್ಲುಗಳನ್ನು ಬ್ಲಾಸ್ಟಿಂಗ್ ಪೌಡರ್ ಹಾಕಿ ಛೀದ್ರಗೋಳಿಲಾಯಿತ್ತು

ಈ ಸಂದರ್ಭದಲ್ಲಿ ಎನ್.ಡಿ ಆರ್.ಎಫ್ ನ ಮುಖ್ಯಸ್ಥ ಬಿ.ಎಸ್.ಪ್ರಸಾದರಾವ್ , ‌ಸತೀಶ ಪೌಂಡೇಶನ್ ನ ಆರೀಪ ಪೀರಜಾದೆ , ಕಂದಾಯ ನಿರೀಕ್ಷಕ ಶಿವಾನಂದ ಹಿರೇಮಠ , ಆಯ್ಯೂಬಖಾನ , ಕಿಶೋರ ತೋಟಗಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು

Related posts: