RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಸಫಲಗೊಂಡ ಆಪರೇಷನ್ ಬಂಡೆ : ನಿರಾಳವಾದ ಗುಡ್ಡದ ಜನ

ಗೋಕಾಕ:ಸಫಲಗೊಂಡ ಆಪರೇಷನ್ ಬಂಡೆ : ನಿರಾಳವಾದ ಗುಡ್ಡದ ಜನ 

ಸಫಲಗೊಂಡ ಆಪರೇಷನ್ ಬಂಡೆ : ನಿರಾಳವಾದ ಗುಡ್ಡದ ಜನ

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ

 

ಸತತ ಸುರಿದ ಮಳೆಯಿಂದ ನಗರದ ಮಲ್ಲಿಕಾರ್ಜುನ/ ಮಲ್ಲಿಕಸಾಬ ಗುಡ್ಡದ ಮೇಲಿನ ಒಂದಕ್ಕೊಂದು ಅಪ್ಪಳಿಸಿ ಬೃಹದಾಕಾರದ ಬಂಡೆಗಲ್ಲುಗಳು ಸುಮಾರು 10 ಅಡ್ಡಿಯಷ್ಟು ಕುಸಿದು ಇಲ್ಲಿ ವಾಸಿಸುವ ಸಾವಿರಾರು ಜನರರಲ್ಲಿ ಆತಂಕವನ್ನು ಹುಟ್ಟಿಸಿತ್ತು .

ರವಿವಾರದಂದು ರಾತ್ರಿ ಸುರಿದ ಮಳೆಯಿಂದ ಕುಸಿತ ಕಂಡಿದ ಬಂಡೆಗಲ್ಲುಗಳನ್ನು ಕಂಡ ಭಯಭೀತರಾಗಿದ್ದ ಗುಡ್ಡದ ಜನರು ಯುವ ಮುಖಂಡ ಲಖನ್ ಜಾರಕಿಹೊಳಿ ಮತ್ತು ಶಾಸಕ ಸತೀಶ ಜಾರಕಿಹೊಳಿ ಅವರ ಗಮನಕ್ಕೆ ತಂದಾಗ ತಕ್ಷಣ ಕಾರ್ಯಪ್ರವೃತವಾದ ಸಹೋದರರು ತಮ್ಮ ಸ್ವಂತ ಖರ್ಚಿನಿಂದ ಬಂಡೆ ತೆರವುಗೊಳಿಸುವ ಕಾರ್ಯಕ್ಕೆ ಅನಿಯಾಗಿ ಎಲ್ಲ ತಯಾರಿ ಮಾಡಿಕೊಂಡು ತಮ್ಮ ಸ್ವಂತ ಕ್ವಾರಿಯಲ್ಲಿ ಕೆಲಸ ಮಾಡುವ ಇಲಕಲ್ ಮತ್ತು ರಾಜಸ್ಥಾನ ಮೂಲದ ಕಾರ್ಮಿಕರ ಸಹಾಯದಿಂದ ಬಂಡೆಗಲ್ಲು ಕೋರೆಯುವ ಕಾರ್ಯಕ್ಕೆ ಸಕಲ ಸಿದ್ದತೆ ಮಾಡಿಕೊಂಡು ಕಾರ್ಯಪ್ರವೃತವಾದರು.

ಮೂರುದಿನಗಳ ಯಶಸ್ವಿ ಕಾರ್ಯಚರಣೆ : ಬಂಡೆ ತೆರುವು ಕಾರ್ಯಾಚರಣೆ ಆಗಮಿಸಿದ್ದ ಮಹಾರಾಷ್ಟ್ರ ರಾಜ್ಯದ ಪುಣೆಯ ಎನ್.ಡಿ.ಆರ್.ಎಫ್ 5 ತಂಡದ 25 ಜನ ಸದಸ್ಯರು ತಂಡದ ಮುಖ್ಯಸ್ಥ ಬಿ.ಎಸ್.ಶಿವಪ್ರಸಾದರಾವ್ ಅವರ ಮಾರ್ಗದರ್ಶನದಲ್ಲಿ ಸತತ ಮೂರುದಿನಗಳ ಕಾರ್ಯಚರಣೆ ನಡೆಯಿಸಿ ಯಶಸ್ವಿಯಾಗಿ ಎರೆಡೂ ಬೃಹದಾಕಾರದ ಬಂಡೆಗಲ್ಲುಗಳನ್ನು ಕೋರೆಯುವಲ್ಲಿ ಯಶಸ್ಸು ಕಂಡಿತು.

ಸತೀಶ ಪೌಂಡೇಶನ್ ಮತ್ತು ಎಕ್ಸಪ್ಲೋರ ದಿ.ಔಡ್ಡೋರ ತಂಡದ ಸಾಥ್ : ಆಪತ್ತು ಕಾಲಗಳಲ್ಲಿ ತಮ್ಮದೆ ಆದ ಸೇವೆಯನ್ನು ಗೈಯುತ್ತಾ ಬಂದಿರುವ ನಗರದ ಸತೀಶ ಪೌಂಡೇಶನ್ ನೆರೆ ಬಂದಾಗ ಸಂತ್ರಸ್ತರ ನೆರವಿಗೆ ಧಾವಿಸಿ ಬಿದ್ದ ಮನೆಗಳ ಮತ್ತು ನಗರದಲ್ಲಿ ಸ್ವಚ್ಚತಾ ಕಾರ್ಯಕ್ಕೆ ಅನಿಯಾಗಿ ನೆರೆ ಸಂತ್ರಸ್ತರಿಗೆ ನೆರವಾದರೆ ಎಕ್ಸಪ್ಲೋರ ದಿ.ಔಡ್ಡೋರ ತಂಡ ಪ್ರವಾಹದಲ್ಲಿ ಸಿಲುಕ್ಕಿದ ಸುಮಾರು 100 ಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ಸಂರಕ್ಷಿಸಿ ಸುರಕ್ಷಿತ ಸ್ಥಳಗಳಲ್ಲಿ ಸ್ಥಳಾಂತರಿಸಿದ್ದು ಇಲ್ಲಿ ಉಲ್ಲೇಖನೀಯ . ಬಂಡೆಗಲ್ಲು ತೆರವು ಕಾರ್ಯಾಚರಣೆಯಲ್ಲಿಯೂ ಸಹ ತಮ್ಮ ಶ್ರಮದಾನ ನೀಡಿದ ಈ ಎರೆಡು ತಂಡಗಳು ಸಕ್ರೀಯವಾಗಿ ಬಂಡೆಗಲ್ಲು ತೆರುವು ಕಾರ್ಯಚರಣೆಯಲ್ಲಿ ಭಾಗಿಯಾಗಿ ಬಂಡೆಗಲ್ಲು ತೆರೆವು ಕಾರ್ಯಚರಣೆಯಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯ ನಿರ್ವಹಿಸಿದೆ.

ಒಟ್ಟಾರೆ ಮಳೆಯಿಂದ ಕುಸಿದ ಬಂಡೆಗಲ್ಲು ಗೋಕಾಕ ಜನರಲ್ಲಿ ಆತಂಕ ಸೃಷ್ಟಿಸಿದಲ್ಲದೆ ಸಾರ್ವಜನಿಕರ ನಿದ್ದೆಗೆಡಸಿತ್ತು, ತಾಲೂಕಾಡಳಿತ ,ಎನ್.ಡಿ.ಆರ್‌.ಎಫ್ ತಂಡ ಮತ್ತು ಸ್ಥಳೀಯರ ಸಹಕಾರದಿಂದ ಸತತ ಮೂರುದಿನಗಳ ವರೆಗೆ ನಡೆದ ಕಾರ್ಯಾಚರಣೆ ಯಶಸ್ಸು ಕಂಡು ಜನರು ನಿಟ್ಟುಸಿರು ಬಿಡುವಂತೆ ಮಾಡಿದ್ದು ಒಂದು ಅಚ್ಚರಿ ಎಂದರೆ ತಪ್ಪಾಗಲಾರದು .

Related posts: