ಘಟಪ್ರಭಾ:ನಿರಾಶ್ರಿತರಾಗಿರುವ ಕನ್ನಡಿಗರಿಗೆ ದೇಣಿಗೆ ಹಣ ವಿತರಣೆ: ಅಯೂಬ ಪೀರಜಾದೆ
ನಿರಾಶ್ರಿತರಾಗಿರುವ ಕನ್ನಡಿಗರಿಗೆ ದೇಣಿಗೆ ಹಣ ವಿತರಣೆ: ಅಯೂಬ ಪೀರಜಾದೆ
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಅ 25 :
ಬರುವ ನವ್ಹಂಬರ 1 ರಂದು ಆಚರಿಸಲಾಗುತ್ತಿರುವ ಕನ್ನಡ ರಾಜ್ಯೋತ್ಸವವನ್ನು ದುಂದು ವೆಚ್ಚ ಮಾಡದೇ ಅಲ್ಲದೇ ಅದ್ದೂರಿಯಾಗಿ ಆಚರಿಸದೇ ಸರಳವಾಗಿ ಆಚರಿಸಬೇಕು ಎಂದು ಕರ್ನಾಟಕ ವಿಶ್ವ
ನಿರ್ಮಾಣ ಸೇನೆಯ ಸಂಸ್ಥಾಪಕ ಅಧ್ಯಕ್ಷ ಅಯೂಬ ಪೀರಜಾದೆ ಹೇಳಿದರು.
ಅವರು ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು ರಾಜ್ಯದಲ್ಲಿ ಉಂಟಾಗಿರುವ ನೆರೆ ಪ್ರವಾಹದಿಂದಾಗಿ ಸಾವಿರಾರು ಕೋಟಿ ನಷ್ಟವಾಗಿದ್ದು ನೆರೆ ಸಂತ್ರಸ್ತರ ಕುಟುಂಬಗಳು ಬೀದಿಗೆ ಬಂದಿದ್ದು ಅವರ ನೆರವಿಗೆ ಕರ್ನಾಟಕ ವಿಶ್ವ ನಿರ್ಮಾಣ ಸೇನೆಯ ವತಿಯಿಂದ ರಾಜ್ಯಾದ್ಯಂತ 23 ಜಿಲ್ಲೆಗಳಿಂದ ತಲಾ ಒಂದು ಲಕ್ಷ ರೂ. ಗಳಂತೆ ಕರ್ನಾಟಕ ವಿಶ್ವ ನಿರ್ಮಾಣ ಸೇನೆಯ ಜಿಲ್ಲಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಕಾರ್ಯಕರ್ತರಿಂದ ಸ್ವಯಂ ಪ್ರೇರಣೆಯಿಂದ ಸಂಗ್ರಹಿಸಿದ ಹಣವನ್ನು ಮನೆ ಕಳೆದುಕೊಂಡ ನಿರಾಶ್ರಿತರಾಗಿರುವ ಕನ್ನಡಿಗರಿಗೆ ಹಣವನ್ನು ವಿತರಿಸಲಾಗುವುದು. ರಾಜ್ಯೋತ್ಸವದಂದು ಡಾಲ್ಬಿ ಬಳಕೆ ಮಾಡದೇ ಸಂತ್ರಸ್ತರ ಕಷ್ಟವನ್ನು ಅರಿತು ಮಾನವೀಯತೆಯ ಮತ್ತು ಕನ್ನಡಿಗರ ಹಿತದೃಷ್ಠಿಯಿಂದ ರಾಜ್ಯೋತ್ಸವವನ್ನು ಸರಳ ರೀತಿಯಾಗಿ ಆಚರಿಸಬೇಕು. ಉತ್ತರ ಕರ್ನಾಟಕದ ಕೊಡಗು, ಬಾಗಲಕೋಟ, ಬೆಳಗಾವಿ, ಗದಗ ಸೇರಿದಂತೆ ಒಟ್ಟು 23 ಜಿಲ್ಲೆಗಳ ನೆರೆ ಸಂತ್ರಸ್ತರಿಗೆ ಜಿಲ್ಲೆಗೆ ಒಂದು ಲಕ್ಷ ರೂ ದಂತೆ 23 ಲಕ್ಷ ರೂಗಳ ಜೊತೆಗೆ ಬಳಕೆ ಸಾಮಗ್ರಿಗಳನ್ನು ಕರ್ನಾಟಕ ವಿಶ್ವ ನಿರ್ಮಾಣ ಸೇನೆಯ ವತಿಯಿಂದ ನೀಡಲಾಗುತ್ತದೆ ತಿಳಿಸಿದರಲ್ಲದೇ ಕರ್ನಾಟಕ ವಿಶ್ವ ನಿರ್ಮಾಣ ಸೇವೆಯ ವತಿಯಿಂದ ನೆರೆ ಪ್ರವಾಹದಿಂದ ತತ್ತರಿಸಿದ ಜನರ ಸಂಕಷ್ಟಕ್ಕೆ ಸಾಕಷ್ಟು ಸಹಾಯ ನೀಡಲಾಗಿದೆ. ಸಂತ್ರಸ್ತ ಕನ್ನಡಿಗರ ನೋವಿಗೆ ಸ್ಪಂದಿಸುವುದಾಗಿ ತಿಳಿಸಿದರು.