RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಇದುವೆ ನಮ್ಮ ಕರುನಾಡು ಹಾಡು ಬಿಡುಗಡೆ ಗೋಳಿಸಿದ ಶಾಸಕ ಸತೀಶ ಜಾರಕಿಹೊಳಿ

ಗೋಕಾಕ:ಇದುವೆ ನಮ್ಮ ಕರುನಾಡು ಹಾಡು ಬಿಡುಗಡೆ ಗೋಳಿಸಿದ ಶಾಸಕ ಸತೀಶ ಜಾರಕಿಹೊಳಿ 

ಇದುವೆ ನಮ್ಮ ಕರುನಾಡು ಹಾಡು ಬಿಡುಗಡೆ ಗೋಳಿಸಿದ ಶಾಸಕ ಸತೀಶ ಜಾರಕಿಹೊಳಿ

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 28 :

ಕರ್ನಾಟಕ ರಾಜೋತ್ಸವ ಪ್ರಯುಕ್ತ ಇಲ್ಲಿಯ ಮಾರ್ಡನ್ ಮೆಲೋಡಿಸ್ ಆರ್ಸ್ಕ್ರೆಸ್ಟ್ರಾ ತಂಡದವರು ರಚಿಸಿರುವ ಇದುವೇ ನಮ್ಮ ಕರುನಾಡು ಎಂಬ ನಾಡಗೀತೆಯನ್ನು ಸೋಮವಾರದಂದು ಹಿಲ್ ಗಾರ್ಡನ್ ಕಛೇರಿಯಲ್ಲಿ ಯಮಕನಮರಡಿ ಶಾಸಕ , ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ಬಿಡುಗಡೆ ಮಾಡಿದರು

ನಂತರ ಮಾತನಾಡಿದ ಅವರು ಕರ್ನಾಟಕ ಕಂಡ ಮಹನೀಯರನ್ನು ಯುವ ಜನಾಂಗಕ್ಕೆ ಪರಿಚಯಿಸುವ , ನಾಡಿನ ಗತವೈಭವವನ್ನು ಸಾರುವ ಇದುವೇ ನಮ್ಮ ಕರುನಾಡು ಗೀತೆಯನ್ನು ರಚಿಸಿ ಕನ್ನಡವನ್ನು ಉಳಿಸಿ ಬೆಳೆಸುವ ರಿಯಾಜ ಚೌಗಲಾ ನೇತೃತ್ವದ ಆರ್ಕ್ರೆಸ್ಟ್ರಾ ತಂಡದ ಕಾರ್ಯ ಶ್ಲಾಘನೀಯವಾಗಿದೆ ನಾಡನ್ನು ಪ್ರತಿನಿಧಿಸುವ ಮತ್ತು ನಾಡಿಗಾಗಿ ಹೋರಾಡಿ ಬಾಳಿ ಬದುಕುತ್ತಿರುವ ಮಹನೀಯರು ಇಂದು ನಮಗೆ ಆರ್ದಶವಾಗಿದ್ದಾರೆ ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಾವು ಸಾಗಿ ಕನ್ನಡ ಮತ್ತು ಕರ್ನಾಟಕವನ್ನು ಗಟ್ಟಿ ಗೋಳಿಸಬೇಕಾಗಿದೆ
ರಾಜೋತ್ಸವದ ಸವಿನೆನಪಿನಲ್ಲಿ ಮಾಡಿರುವ ಈ ಹಾಡನ್ನು ಎಲ್ಲ ಕನ್ನಡಿಗರು ಕೇಳಿ ಆನಂದಿಸಬೇಕೆಂದು ಸತೀಶ ಜಾರಕಿಹೊಳಿ ಅವರು ಮನವಿ ಮಾಡಿಕೊಂಡಿದ್ದಾರೆ
ಸಾಮಾಜಿಕ ಜಾಲತಾಣದಲ್ಲಿ ಈ ಹಾಡನ್ನು ಕೇಳಲು https://youtu.be/comke2piWkY
ವಿಳಾಸಕ್ಕೆ ಸಂರ್ಪಕಿಸಬೇಕೆಂದು ಆರ್ಕ್ರೆಸ್ಟ್ರಾ ತಂಡದ ನಾಯಕ ರಿಯಾಜ ಚೌಗಲಾ ಮತ್ತು ಗುರುಪಾದ ಮದನ್ನವರ ಹೇಳಿದ್ದಾರೆ

ಈ ಸಂದರ್ಭದಲ್ಲಿ ಶಿವು ಪಾಟೀಲ ,ಮುನೀರ ಖತೀಬ, ಆರೀಪ ಪೀರಜಾದೆ ,  ಶಿವಾಜಿ ಪಾಟೀಲ , ಜುಬೇರ ಮಿರ್ಜಾಬಾಯಿ , ಆಜಾದ ಸನದಿ , ಮುಗುಟ ಪೈಲವಾನ , ಶಾಹಿನ ಸೈಯದ, ಶಿವಾನಂದ ಪೂಜೇರಿ ಸೇರಿದಂತೆ ಇತರರು ಇದ್ದರು

Related posts: