ಗೋಕಾಕ:ಸಿಕ್ಕ ಹಣವನ್ನು ಬ್ಯಾಂಕಿಗೆ ಮರಳಿಸಿ ಪ್ರಮಾಣಿಕತೆ ಮೆರೆದ ಸ್ನೇಹಿತರು
ಹಣಹಸಿಕ್ಕ ಹಣವನ್ನು ಬ್ಯಾಂಕಿಗೆ ಮರಳಿಸಿ ಪ್ರಮಾಣಿಕತೆ ಮೆರೆದ ಸ್ನೇಹಿತರು
ಗೋಕಾಕ ಜು 27: ಸ್ಟೇಟ್ ಬ್ಯಾಂಕಿನಲ್ಲಿ ಚಕ್ಕ ಬುಕ್ಕ ಪಡೆಯಲು ಹೋದಾಗ ಸ್ಲೀಪ ಕೌಂಟರನಲ್ಲಿ ಸಿಕ್ಕ ಸುಮಾರು 44 ಸಾವಿರ ರೂಪಾಯಿಯ ಬ್ಯಾಗನ್ನು ಬ್ಯಾಂಕ ಮ್ಯಾನೇಜರ್ ಅವರಿಗೆ ನೀಡಿ , ಸಿಸಿಟಿವಿ ಪ್ರೋಟೇಜ ನೋಡಿ ಹಣ ಕಳೆದು ಕೊಂಡವರಿಗೆ ಮರಳಿಸಿದ ಘಟನೆ ಗೋಕಾಕದಲ್ಲಿ ನಡೆದಿದೆ.
ನಗರದ ಬಸವೇಶ್ವರ ವೃತ್ತದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಚಕ್ ಬುಕ್ಕ ಪಡೆಯಲು ಹೋಗಿದ್ದ ಸ್ನೇಹಿತರಾದ ಗುರು ಯಮಕನಮರಡಿ ಮತ್ತು ರಾಹುಲ ಕಲಾಲ ಅವರಿಗೆ ಸ್ಲೀಪ್ ಕೌಂಟರನಲ್ಲಿ ಬ್ಯಾಗೊಂದು ದೊರೆತಿದೆ ಬ್ಯಾಗ ತೆಗೆದು ನೋಡಿದಾಗ ಅದರಲ್ಲಿ ಸುಮಾರು 44 ಸಾವಿರ ಹಣ ಇರುವುದನ್ನು ಗಮನಿಸಿದ ಸ್ನೇಹಿತರು ಬ್ಯಾಗನ್ನು ಬ್ಯಾಂಕನ ಮ್ಯಾನೇಜರ್ ಅವರಿಗೆ ಒಪ್ಪಿಸಿ ಸಿಸಿಟಿವಿ ಪ್ರೋಟೇಜ ನೋಡಿ ಹಣ ಕಳೆದುಕೊಂಡ ತಾಲೂಕಿನ ಕೋಳವಿ ಗ್ರಾಮದ ಶಿವಲಿಂಗ ಮಾಳಪ್ಪ ಕಳ್ಳಿಗುದ್ದಿ ಅವರಿಗೆ ಮರಳಿಸಿದ್ದಾರೆ
ಬ್ಯಾಂಕಿಗೆ ಹಣ ಜಮೆ ಮಾಡಲು ಬಂದಿದ್ದ ಶಿವಲಿಂಗ ಕಳ್ಳಿಗುದ್ದಿ ಹಣ ಬ್ಯಾಂಕಿನಲ್ಲಿ ಬಿಟ್ಟು ಹೋಗಿದ್ದಾರೆ ನೆನಪಿಗೆ ಬಂದ ನಂತರ ಮರಳಿ ಬ್ಯಾಂಕಿಗೆ ಬಂದು ಮ್ಯಾನೇಜರ್ ದೂರು ನೀಡಿದ್ದಾರೆ ನಂತರ ಸಿಸಿಟಿವಿ ಪ್ರೋಟೆಜ ನೋಡಿ ಹಣವನ್ನು ಮರಳಿಸಿದ್ದಾರೆ