RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಕರ್ನಾಟಕ ಕಂಡ ಅಪ್ರತಿಮ ಅಧಿಕಾರಿ ಎಂ ಎನ್ ವೆಂಕಟಾಚಲಯ್ಯ : ಬಸವರಾಜ ಖಾನಪ್ಪನವರ

ಗೋಕಾಕ:ಕರ್ನಾಟಕ ಕಂಡ ಅಪ್ರತಿಮ ಅಧಿಕಾರಿ ಎಂ ಎನ್ ವೆಂಕಟಾಚಲಯ್ಯ : ಬಸವರಾಜ ಖಾನಪ್ಪನವರ 

ಕರ್ನಾಟಕ ಕಂಡ ಅಪ್ರತಿಮ ಅಧಿಕಾರಿ ಎಂ ಎನ್ ವೆಂಕಟಾಚಲಯ್ಯ : ಬಸವರಾಜ ಖಾನಪ್ಪನವರ

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 30 :

 
ಕರ್ನಾಟಕ ಕಂಡ ಅಪ್ರತಿಮ ಅಧಿಕಾರಿ ಎಂ ಎನ್ ವೆಂಕಟಾಚಲಯ್ಯ ಅಗಲಿಕೆಯಿಂದ ಕರ್ನಾಟಕ ಬಡವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು

ಬುಧವಾರದಂದು ನಗರದ ಕರವೇ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಶೃದ್ದಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು

ಎಂ.ಎನ್ ವೆಂಕಟಾಚಲಯ್ಯ ಅವರು ಲೋಕಾಯುಕ್ತರಿದ್ದಾಗ ಭ್ರಷ್ಟಚಾರದ ವಿರುದ್ಧ ಬಹಿರಂಗವಾಗಿ ದನಿಯೆತ್ತಿದರು. ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಓಡಾಡಿ ಆಸ್ಪತ್ರೆ, ಸರ್ಕಾರಿ, ಖಾಸಗಿ, ಅರೆಖಾಸಗಿ ಕಚೇರಿಗಳು, ಶಾಲೆಗಳು ಮೊದಲಾದ ಸ್ಥಳಗಳ ಭ್ರಷ್ಟಾಚಾರದ ವಿವಿಧ ರೂಪಗಳನ್ನು ಬಯಲಿಗೆಳೆದು ಭ್ರಷ್ಟ ವ್ಯವಸ್ಥೆಯಗೆ ನಡುಕು ಹುಟ್ಟಿಸಿ ಧೈರ್ಯ ತೋರಿದ ಏಕಮೇವ ವ್ಯಕ್ತಿ ಎಂ.ಎನ್ ವೆಂಕಟಾಚಲಯ್ಯ ಅವರು ಅನೇಕ ಭ್ರಷ್ಟ ಅಧಿಕಾರಿಗಳ ಲೆಕ್ಕಕ್ಕೆ ಸಿಗದ ಆಸ್ತಿಪಾಸ್ತಿಗಳನ್ನು ಹೊರಕ್ಕೆ ತೆಗೆದರು. ಭ್ರಷ್ಟಾಚಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಸೇವೆಯಿಂದ ಅಮಾನತುಗೊಳಿಸಲು ಶಿಫಾರಸು ಮಾಡಿದರು. ಬೆಂಗಳೂರಿನ ಸುತ್ತುಮುತ್ತ ಇರುವ ಐದು ನಗರ ಸಭೆಗಳಲ್ಲಿ ನಡೆದ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ಬಯಲಿಗೆಳೆದರು. ಇವರ ಕಾರ್ಯವೈಖರಿಯನ್ನು ವಿರೋಧಿಸಿದವರೂ ಕೊನೆಗೆ ಇವರ ಕ್ಷಮೆ ಕೇಳುವಂತಾಯಿತು. ಅಂತಹ ಮೇರು ವ್ಯಕ್ತಿತ್ವ ಅವರದ್ದು , ಎಂ ಎನ್ ವೆಂಕಟಾಚಲಯ್ಯ, ಎಂದೇ ಖ್ಯಾತರಾದ ‘ಮನೇಪಲ್ಲಿ ನಾರಾಯಣರಾವ್ ವೆಂಕಟಾಚಲಯ್ಯ’, ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಯಾದ ಎರಡನೆಯ ಕನ್ನಡಿಗರು. ೧೮ ತಿಂಗಳ ದೀರ್ಘ ಕಾಲ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ, ನಂತರ ‘ರಾಷ್ಟ್ರೀಯ ಹಕ್ಕುಗಳ ಅಯೋಗ’ ಮತ್ತು ‘ಸಂವಿಧಾನ ತಿದ್ದುಪಡಿ ವಿಮರ್ಶೆ ಆಯೋಗಗಳ ಅಧ್ಯಕ್ಷ’ರಾಗಿ ಕಾರ್ಯ ನಿರ್ವಹಿಸಿದರು. ಇವರ ಅಗಲಿಕೆಯಿಂದ ರಾಜ್ಯ ಬಡವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ದಯಪಾಲಿಸಲಿ ಎಂದು ಪ್ರಾರ್ಥಿಸಿದರು

ಇದಕ್ಕೂ ಮೊದಲು ಮೌನಾಚರಣೆ ಮಾಡಿ ಅಗಲಿದ ಜೀವಕ್ಕೆ ಗೌರವ ಸಲ್ಲಿಸಲಾಯಿತು

ಈ ಸಂದರ್ಭದಲ್ಲಿ ಸಾದಿಕ ಹಲ್ಯಾಳ, ಕೃಷ್ಣಾ ಖಾನಪ್ಪನವರ, ದೀಪಕ ಹಂಜಿ, ರಹೇಮಾನ ಮೋಕಾಶಿ, ಮುಗುಟ ಪೈಲವಾನ, ರಮೇಶ ಕಮತಿ, ಶೆಟ್ಟೆಪ್ಪ ಗಾಡಿವಡ್ಡರ, ಮಲ್ಲು ಸಂಪಗಾರ, ಮಹಾದೇವ ಮಕ್ಕಳಗೇರಿ, ರವಿ ನಾವಿ, ಮುತ್ತೆಪ್ಪ ಘೋಡಗೇರಿ, ಶಂಕರ ಬಂಡಿವಡ್ಡರ, ರಾಜು ಮುತ್ತೆನ್ನವರ, ಕೆಂಪಣ್ಣ ಕಡಕೋಳ, ಕಿರಣ ತೋಗರಿ, ರಾಮ ಕುಡ್ಡೇಮ್ಮಿ, ಹಣುಮಂತ ಕಮತಿ, ಯಾಕುಬ ಮುಜಾವರ , ರಾಮ ಕೊಂಗನೋಳಿ ಸೇರಿದಂತೆ ಇತರರು ಇದ್ದರು

Related posts: