RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ಪ್ರಕೃತಿ ವಿಕೋಪಗಳು ಮನಕುಲಕ್ಕೆ ಪಾಠವಾಗಿವೆ : ಡಾ.ಸಿ.ಕೆ.ನಾವಲಗಿ

ಗೋಕಾಕ:ಪ್ರಕೃತಿ ವಿಕೋಪಗಳು ಮನಕುಲಕ್ಕೆ ಪಾಠವಾಗಿವೆ : ಡಾ.ಸಿ.ಕೆ.ನಾವಲಗಿ 

ಪ್ರಕೃತಿ ವಿಕೋಪಗಳು ಮನಕುಲಕ್ಕೆ ಪಾಠವಾಗಿವೆ : ಡಾ.ಸಿ.ಕೆ.ನಾವಲಗಿ

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 1:

 
ಪ್ರಕೃತಿ ವಿಕೋಪಗಳು ಮನಕುಲಕ್ಕೆ ಪಾಠವಾಗಿವೆ ಎಂದು ಸಾಹಿತಿ , ಜಾನಪದ ತಜ್ಞ ಡಾ.ಸಿ.ಕೆ.ನಾವಲಗಿ ಹೇಳಿದರು
ಶುಕ್ರವಾರದಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ವತಿಯಿಂದ ನಗರದ ಹೊರವಲಯದಲ್ಲಿ ನಿರಾಶ್ರಿತರಿಗೆ ನಿರ್ಮಿಸಿದ ತಾತ್ಕಾಲಿಕ ಶೆಡಗಳಲ್ಲಿ ಹಮ್ಮಿಕೊಂಡಿದ್ದ ನಿರಾಶ್ರಿತರೊಂದಿಗೆ ರಾಜೋತ್ಸವ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು .
ನಮ್ಮ ಬುದ್ಧಿ ಶಕ್ತಿಗೂ ಮೀರಿ ಪ್ರಕೃತಿಯ ಮುನಿಸಿಕೋಳತ್ತದೆ . ಅಂತಹ ಸಂದರ್ಭದಲ್ಲಿ ಸುನಾಮಿಗಳು, ಭೂಕಂಪಗಳು , ಅತಿವೃಷ್ಟಿ, ಆನಾವೃಷ್ಟಿಗಳು ಸಂಭವಿಸಿ ಮನಕುಲವನ್ನು ಸರ್ವನಾಶಗೋಳಿಸುತ್ತದೆ . ವಿಜ್ಞಾನ , ತಂತ್ರಜ್ಞಾನ ದಿಂದ ಪ್ರಕೃತಿ ವಿಕೋಪಗಳನ್ನು ತಡೆಯಲು ನಮ್ಮ ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ. ಬುದ್ದಿಜೀವಿಗಳಾದ ನಾವುಗಳು ಸಹ ಅವರಿಗೆ ನೆರವಾಗಿ ಸಸಿಗಳನ್ನು ನೆಟ್ಟು ಉಳಿಸಿ, ಬೆಳೆಸಿ ಸುತ್ತ ಮುತ್ತಲಿನ ಪರಿಸರವನ್ನು ಸಂರಕ್ಷಿಸಿಬೇಕಾಗಿದೆ ಆ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯಪ್ರವೃತವಾಗಬೇಕಾಗಿದೆ. ಹಿಂತಹ ಸಂದರ್ಭದಲ್ಲಿ ಆಡಂಬರವಾಗಿ ಹಬ್ಬವನ್ನು ಆಚರಿಸದೆ ಅತಿ ಸರಳವಾಗಿ ನಿರಾಶ್ರಿತರಿಗೆ ಅನ್ನಸಂತರ್ಪಣೆ ಮಾಡಿ ನಿರಾಶ್ರಿತರೊಂದಿಗೆ ರಾಜೋತ್ಸವ ಆಚರಿಸಿ ಅವರಿಗೆ ಆತ್ಮಸ್ಥೈರ್ಯ ತುಂಬಿದ ಕರವೇಯ ನಡೆ ಎಲ್ಲರೂ ಮಾದರಿಯಾಗಿದೆ ಎಂದು ನಾವಲಗಿ ಹೇಳಿದರು.
ಉಪ್ಪಾರಟ್ಟಿಯ ಪರಮ ಪೂಜ್ಯ ನಾಗೇಂದ್ರ ಮಹಾಸ್ವಾಮಿಗಳು ಸಾನಿಧ್ಯವಹಿಸಿ ಆರ್ಶಿವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರವೇ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ವಹಿಸಿದ್ದರು. ಇದೇ ಸಂದರ್ಭದಲ್ಲಿ ನೂತನವಾಗಿ ಲಲಿತಕಲಾ ಅಕ್ಯಾಡಮಿಗೆ ಸದಸ್ಯರಾಗಿ ನೇಮಕವಾದ ಸ್ಥಳೀಯ ಸಾಹಿತಿ ಜಯಾನಂದ ಮಾದರ ಅವರಿಗೆ ಸತ್ಕರಿಸಿ, ಗೌರವಿಸಲಾಯಿತು

ಕಾರ್ಯಕ್ರಮದಲ್ಲಿ ಸಾಹಿತಿ ಮಹಾಲಿಂಗ ಮಂಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ, ಪಶು ವೈದ್ಯಾಧಿಕಾರಿ ಮೋಹನ ಕಮತ,ಮುಖ್ಯ ವೈದ್ಯಾಧಿಕಾರಿ ಆಂಟ್ಟಿನ , ಸಿಪಿಐ ಶ್ರೀಧರ ಸತಾರೆ, ಸಾದಿಕ ಹಲ್ಯಾಳ , ಕೃಷ್ಣಾ ಖಾನಪ್ಪನವರ, ಮುಗುಟ ಪೈಲವಾನ, ದೀಪಕ ಹಂಜಿ, ಜುಬೇರ ಮಿರ್ಜಾಬಾಯಿ, ಮಹಾದೇವ ಮಕ್ಕಳಗೇರಿ, ಮಲ್ಲು ಸಂಪಗಾರ, ಕೆಂಪಣ್ಣಾ ಕಡಕೋಳ, ಮಂಜು ಪ್ರಭುನಟ್ಟಿ, ಯಾಕುಬ ಮುಜಾವರ , ಯಾಸೀನ್ ಮುಲ್ಲಾ ಸೇರಿದಂತೆ ಅನೇಕರು ಇದ್ದರು
ಕಾರ್ಯಕ್ರಮವನ್ನು ಶಿಕ್ಷಕ ಟಿ.ಬಿ.ಬಿಲ್ಲ ನಿರೂಪಿಸಿ, ವಂದಿಸಿದರು

Related posts: