RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಕನ್ನಡ ನೆಲ,ಜಲ, ನಾಡು ನುಡಿ ರಕ್ಷಣೆಗೆ ಶ್ರಮಿಸಬೇಕು : ಸಾಹಿತಿ ಪ್ರೋ: ಚಂದ್ರಶೇಖರ ಅಕ್ಕಿ

ಗೋಕಾಕ:ಕನ್ನಡ ನೆಲ,ಜಲ, ನಾಡು ನುಡಿ ರಕ್ಷಣೆಗೆ ಶ್ರಮಿಸಬೇಕು : ಸಾಹಿತಿ ಪ್ರೋ: ಚಂದ್ರಶೇಖರ ಅಕ್ಕಿ 

ಕನ್ನಡ ನೆಲ,ಜಲ, ನಾಡು ನುಡಿ ರಕ್ಷಣೆಗೆ ಶ್ರಮಿಸಬೇಕು : ಸಾಹಿತಿ ಪ್ರೋ: ಚಂದ್ರಶೇಖರ ಅಕ್ಕಿ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ನ 2 :
ನೆರೆ ಸಂತ್ರಸ್ತರ ಕಷ್ಟಕ್ಕೆ ಸಹಾಯ ಮಾಡಿದ ಕರವೇ ಗಜಸೇನೆ ಕಾರ್ಯ ಶ್ಲಾಘನೀಯ ಎಂದು ಹಿರಿಯ ಸಾಹಿತಿ ಪ್ರೋ: ಚಂದ್ರಶೇಖರ ಅಕ್ಕಿ ಹೇಳಿದರು.
ಅವರು ನಗರದ ಸಮುದಾಯ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಆಶ್ರಯದಲ್ಲಿ ಜರುಗಿದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕನ್ನಡಪರ ಸಂಘಟನೆಗಳಲ್ಲಿ ಕರವೇ ಗಜಸೇನೆ ಸಮಾಜಮುಖಿ ಕಾರ್ಯ ಮಾಡುತ್ತಾ ಕನ್ನಡ ನೆಲ,ಜಲ, ನಾಡು ನುಡಿ ರಕ್ಷಣೆಗೆ ಶ್ರಮಿಸಬೇಕು ಎಂದರಲ್ಲದೇ ಕನ್ನಡಕ್ಕೆ ಎರಡು  ಸಾವಿರ  ವರ್ಷಗಳ ಕಾಲ ಇತಿಹಾಸವಿದೆ ಮಕ್ಕಳಿಗೆ ಕಡ್ಡಾಯವಾಗಿ ಕನ್ನಡ ಶಾಲೆಗೆ ಸೇರಿಸಿ ಎಂದರು.
ವೇದಿಕೆ ಮೇಲೆ ಕಸಾಪ ಅಧ್ಯಕ್ಷ ಮಹಾಂತೇಶ ತಾಂವಶಿ, ಸಿರಿಗನ್ನಡ ಮಹಿಳಾ ವೇದಿಕೆ ಅಧ್ಯಕ್ಷೆ ರಜನೀ ಜೀರಗ್ಯಾಳ, ಗಜಸೇನೆ ಮಹಿಳಾ ಜಿಲ್ಲಾಧ್ಯಕ್ಷೆ ಲಕ್ಷೀ ಪಾಟೀಲ, ಶಿಲ್ಪಾ ಗೋಡಿಗೌಡರ, ಶೋಭಾ ಕಮ್ಮಾರ, ಸಚೀನ ಕಮಟೇಕರ, ಜ್ಯೋತಿ ಕೋಲಾರ, ನಗರಸಭೆ ಅಧಿಕಾರಿ ವಿ.ಎಸ್.ತಡಸಲೂರ, ಸಿಪಿಐ ಶ್ರೀಧರ ಸಾತಾರೆ, ಕರವೇ ಗಜಸೇನೆ ಜಿಲ್ಲಾಧ್ಯಕ್ಷ ಪವನ ಮಹಾಲಿಂಗಪೂರ, ತಾಲೂಕಾ ಪ್ರ ಕಾರ್ಯದರ್ಶಿ ರಾಜು ನೀಲಜಗಿ, ಪತ್ರಕರ್ತರಾದ ಸೈಯ್ಯದ, ವಿಠ್ಠಲ ಕರೋಶಿ ಸೇರಿದಂತೆ ಇತರರು ಇದ್ದರು.
ಇದೇ ಸಂದರ್ಭದಲ್ಲಿ ಕರವೇ ಗಜಸೇನೆ ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಿಸಲಾಯಿತು. ವೇದಿಕೆ ಮೇಲಿನ ಗಣ್ಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಶೈಲಾ ಕೊಕ್ಕರಿ ನಿರೂಪಿಸಿ, ವಂದಿಸಿದರು.

Related posts: