ಮೂಡಲಗಿ:ವಿದ್ಯಾರ್ಥಿಗಳು ಕನ್ನಡದಲ್ಲಿ ಕಲಿತರೆ ಮಾತ್ರ ನಮ್ಮ ಕರ್ನಾಟಕ ಭಾಷೆ ಮತ್ತು ಸಂಸ್ಕೃತಿ ಬೆಳೆಯುತ್ತದೆ : ಡಿ. ಎಸ್ ರೊಡ್ಡನವರ
ವಿದ್ಯಾರ್ಥಿಗಳು ಕನ್ನಡದಲ್ಲಿ ಕಲಿತರೆ ಮಾತ್ರ ನಮ್ಮ ಕರ್ನಾಟಕ ಭಾಷೆ ಮತ್ತು ಸಂಸ್ಕೃತಿ ಬೆಳೆಯುತ್ತದೆ : ಡಿ. ಎಸ್ ರೊಡ್ಡನವರ
ನಮ್ಮ ಬೆಳಗಾವಿ ಇ – ವಾರ್ತೆ , ಮೂಡಲಗಿ ನ 2 :
ನಮ್ಮ ಕರ್ನಾಟಕದಲ್ಲಿ ಮಾತೃ ಭಾಷೆಯಾದ ಕನ್ನಡದಲ್ಲಿ ಹತ್ತನೆ ತರಗತಿಯವರೆಗೆ ಪ್ರತಿಯೊಬ್ಬ ವಿದ್ಯಾರ್ಥಿಯು ಕನ್ನಡದಲ್ಲಿ ಕಲಿಯಬೇಕು ಅಂದಾಗ ಮಾತ್ರ ನಮ್ಮ ಕರ್ನಾಟಕ ಭಾಷೆ ಮತ್ತು ಸಂಸ್ಕೃತಿ ಬೆಳೆಯುತ್ತದೆ. ಎಂದು ನ್ಯಾಯವಾದಿಗಳ ಸಂಘದ ಸಹಕಾರ್ಯದರ್ಶಿ ಡಿ. ಎಸ್ ರೊಡ್ಡನವರ. ಹೇಳಿದರು.
ಪಟ್ಟಣದ ದಿವಾಣಿ ಹಾಗೂ ಜೆ.ಎಮ್. ಎಪ್. ಸಿ. ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭುವನೇಶ್ವರಿಯ ಭಾವಚಿತ್ರಕ್ಕೆೆ ಪೂಜೆಸಲ್ಲಿಸಿ ಮಾತನಾಡುತ್ತಾ ಇದೊಂದು ಕನ್ನಡಿಗರ ಬಹು ಹೆಮ್ಮೆಯ ನಾಡುನುಡಿ ಅಭಿಮಾನದ ಒಂದು ಪ್ರಮುಖ ರಾಷ್ಟ್ರೀಯ ಹಬ್ಬ ಹರಿದು ಹಂಚಿ ಹೋಗಿದ್ದ ಕರ್ನಾಟಕ ಈ ದಿನದಂದು ಏಕೀಕರಣಗೊಂಡಿದ್ದರ ಸಂತೋಷಾರ್ಥವಾಗಿ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ ಎಂದರು.
ನ್ಯಾಯವಾದಿಗಳ ಸಂಘದ ಮಹಿಳಾ ಪ್ರತಿನಿಧಿ ಅಕ್ಕಮಾದೇವಿ ಗೊಡ್ಯಾಗೋಳ ಮಾತನಾಡುತ್ತಾ ರಾಜ್ಯೋತ್ಸವ ವೆಂದರ ಕನ್ನಡ ನಾಡಿನ ಗತವೈಭವನ್ನು ಮಾತ್ರ ನೆನೆಯುವುದಲ್ಲ; ಇನ್ನು ಮುಂದೆಯೂ ಕನ್ನಡತನವನ್ನು ಉಳಿಸಿ- ಬೆಳೆಸಿಕೊಂಡು ಹೋಗುವುದು ರಾಜ್ಯೋತ್ಸವವಾಗಿದೆ ಎಂದರು.
ಹಿರಿಯ ನ್ಯಾಯವಾದಿ ವಿ.ವಿ. ನಾಯಕ. ಮಾತನಾಡುತ್ತಾ. ಕನ್ನಡ ಆಡಳಿತ ಭಾಷೆಯಾಗಿ, ಶಿಕ್ಷಣ ಮಾಧ್ಯಮವಾಗಿ ಸಾಹಿತ್ಯ ಹಾಗೂ ಆರ್ಥಿಕ ಸಂಪತ್ತಿನಲ್ಲಿ ತಲೆಯೆತ್ತಿ ಮೆರೆಯುವಂತೆ ಕನ್ನಡಿಗರು ಕಾರ್ಯ ಮಾಡಲು ಕಟಿಬದ್ಧರಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಎಸ್, ವಾಯ್. ಹೊಸಟ್ಟಿ. ಖಜಾಂಚಿ. ವಿ. ಕೆ. ಪಾಟೀಲ್. ಪಿ.ಎಲ್. ಮನ್ನಿಕೇರಿ. ಆರ್. ಬಿ. ಮಮದಾಪೂರ. ಕರ್ನಾಟಕ ರಾಜ್ಯೋತ್ಸವ ಕುರಿತು. ಮಾತನಾಡಿದರು. ಹಾಗೂ ಹಿರಿಯ ವಕೀಲರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.